Kannada News Next

business

Gold Price Today: ₹1.50 ಲಕ್ಷದ ಗಡಿಯತ್ತ ಚಿನ್ನದ ಬೆಲೆ : 22K, 24K ದರ ಎಷ್ಟು ? ಮುಂದೆ ಏನಾಗಬಹುದು

ಭಾರತದಲ್ಲಿ ಸದ್ಯ ಚಿನ್ನರ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿದೆ. ಇಂದು 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ಸುಮಾರು ₹1.49 ಲಕ್ಷದಷ್ಟಿದೆ.

By Arun Gundmi | ಅರುಣ್‌ ಗುಂಡ್ಮಿ Editor-in-Chief
gold price today 22k 24k gold rate rs 1 50 lakh next price forecast

ಬೆಂಗಳೂರು : ಚಿನ್ನ ಖರೀದಿ, ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಚಿನಿವಾರು ಮಾರುಕಟ್ಟೆ ಗಮನ ಸೆಳೆದಿದೆ. ಕಳೆದ ಕೆಲವು ದಿನಗಳಿಂದ ಏರಿಕೆಯನ್ನು ಕಾಣುತ್ತಿದ್ದ ಚಿನ್ನದ ದರ ಇದೀಗ ಜಾಗತಿಕ ಮಾರುಕಟ್ಟೆಯ ಬೆಳವಣಿಗೆ, ಡಾಲರ್‌ ಮೌಲ್ಯ, ರಾಜಕೀಯ ಬೆಳವಣಿಗೆಯಿಂದಾಗಿ ಗಮನೆ ಸೆಳೆದಿದೆ.

ಭಾರತದಲ್ಲಿ ಸದ್ಯ ಚಿನ್ನರ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿದೆ. ಇಂದು 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ಸುಮಾರು ₹1.49 ಲಕ್ಷದಷ್ಟಿದೆ. ಅಲ್ಲದೇ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ ₹1.37 ಲಕ್ಷದಷ್ಟಿದೆ.

ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ ಎಷ್ಟು?

ಬೆಂಗಳೂರಿನ ಚಿನ್ನ ಮಾರುಕಟ್ಟೆಯ ದರದ ಪ್ರಕಾರ, 24K ಚಿನ್ನ 10 ಗ್ರಾಂಗೆ ಸುಮಾರು ₹1.49 ಲಕ್ಷದಿಂದ ₹1.50 ಲಕ್ಷದಷ್ಟಿದೆ. ಇನ್ನು 22K ಚಿನ್ನದ ದರವೂ ಸುಮಾರು ₹1.37 ಲಕ್ಷದ ಆಸುಪಾಸಿನಲ್ಲಿದೆ. ಆಭರಣ ಖರೀದಿಯ ವೇಳೆಯಲ್ಲಿ ಜಿಎಸ್‌ಟಿ, ಮೇಕಿಂಗ್‌ ಚಾರ್ಜ್‌ ಸೇರಿದಂತೆ ಇತರ ವೆಚ್ಚಗಳು ಸೇರಿದ್ರೆ ಇನ್ನಷ್ಟು ಹೆಚ್ಚಳವಾಗಲಿದೆ.

ಚಿನ್ನದ ಬೆಲೆ ಏರಿಳಿತವಾಗಲು ಕಾರಣವೇನು?

ಅಂತರಾಷ್ಟ್ರೀಯ ಚಿನಿವಾರು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸಾಮಾನ್ಯವಾಗಿ ಅಮೇರಿಕಾದ ಡಾಲರ್‌ ಬೆಲೆಯ ಮೇಲೆ ನಿಗದಿಯಾಗಿರಲಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್‌ ಬೆಲೆಯ ಹೆಚ್ಚಳ ಚಿನ್ನದ ಬೆಲೆಯ ಮೇಲೆ ಒತ್ತಡ ತಂದಿದೆ.

ಮುಂದಿನ ದಿನಗಳಲ್ಲಿ ಹೇಗಿರಲಿದೆ ಚಿನ್ನದ ದರ

ಚಿನ್ನದ ಬೆಲೆ ಮುಂದಿನ ಹಲವು ಸಮಯದವರೆಗೆ ಏರಿಳಿತವಾಗಲಿದೆ. ಅಮೇರಿಕಾದ ಬಡ್ಡಿದರ, ಡಾಲರ್‌ ಮೌಲ್ಯದ ಏರಿಳಿತ, ಭೌಗೋಳಿಕ ರಾಜಕೀಯದ ಬೆಳವಣಿಗೆಯನ್ನು ಆಧರಿಸಿ ಇರಲಿದ್ದು, ಮುಂದಿನ ದಿನಗಳಲ್ಲಿ ಇಷ್ಟೇ ಜಾಸ್ತಿ ಆಗುತ್ತೆ ಅಂತಾ ಹೇಳೋದು ಕಷ್ಟಕರ. ಆದರೂ 10 ಗ್ರಾಂ ಚಿನ್ನದ ದರ 2 ಲಕ್ಷದ ಗಡಿದಾಟುವ ನಿರೀಕ್ಷೆಯಿದೆ. ಹಬ್ಬದ ದಿನಗಳು, ಮದುವೆಯ ಸೀಸನ್‌ ಆದರಿಸಿ, ಭಾರತದಲ್ಲಿ ಚಿನ್ನದ ಡಿಮ್ಯಾಂಡ್‌ ಆಧಾರದಲ್ಲಿ ಚಿನ್ನದ ದರದಲ್ಲಿ ಏರಿಕೆ ಕಂಡು ಬರುವ ಸಾಧ್ಯತೆಯಿದೆ.