ಚಿನ್ನಾಭರಣ ಪ್ರಿಯರಿಗೆ ಸಂತೋಷದ ಸುಗ್ಗಿ : ಬಂಗಾರ, ಬೆಳ್ಳಿ ದರಗಳಲ್ಲಿ ವ್ಯಾಪಕ ಇಳಿಕೆ

Gold Rate Today: ಚಿನ್ನದ ದರದಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಚಿನ್ನಾಭರಣ ಪ್ರಿಯರು ಸಖತ್​ ಖುಷ್​ ಆಗಿದ್ದಾರೆ.

ಬೆಂಗಳೂರು : ಗಗನಕ್ಕೇರುತ್ತಿದ್ದ ಚಿನ್ನದ ಆಭರಣ ಪ್ರಿಯರನ್ನು ಚಿಂತೆಗೆ ದೂಡಿತ್ತು. ಆದರೆ ಇದೀಗ ಚಿನ್ನದ ದರದಲ್ಲಿ (Gold Rate Today) ಗಣನೀಯ ಪ್ರಮಾಣದ ಇಳಿಕೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಚಿನ್ನಾಭರಣ ಪ್ರಿಯರು ಸಖತ್​ ಖುಷ್​ ಆಗಿದ್ದಾರೆ.

22 ಕ್ಯಾರೆಟ್​ ಚಿನ್ನದ ದರ 10 ಗ್ರಾಂಗೆ 9050 ರೂಪಾಯಿ ಇಳಿಕೆ ಕಂಡುಬಂದಿದೆ. ಪ್ರಸ್ತುತ 22 ಕ್ಯಾರೆಟ್​ ಚಿನ್ನದ ದರ 10 ಗ್ರಾಂಗೆ 1,43,600 ರೂಪಾಯಿ ಆಗಿದೆ. ಇನ್ನೂ ಕೆ.ಜಿ ಬೆಳ್ಳಿಯ ದರದಲ್ಲಿ ₹10,500 ರಷ್ಟು ಇಳಿಕೆಯಾಗಿದ್ದು, ಪ್ರಸ್ತುತ ₹2.30 ಲಕ್ಷ ರೂಪಾಯಿ ತಲುಪಿದೆ.

ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಜಾಗತಿಕ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿದೆ. ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ಅವರು ನೀಡಿರುವ ಮಾಹಿತಿಯ ಪ್ರಕಾರ , ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆಯಲ್ಲಿ ಕಚ್ಚಾ ತೈಲ ದರ ಏರಿಕೆಯಾಗಿದೆ. ಇದು ಜಾಗತಿಕವಾಗಿ ಹಣದುಬ್ಬರ ಹೆಚ್ಚಾಗುವ ಭೀತಿ ಮೂಡಿಸಿದೆ ಎಂದಿದ್ದಾರೆ.

ಇದನ್ನೂ ಓದಿ: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ 2026: ಅಕಾಲಿಕ ಮಳೆಯಿಂದ ಬೆಳೆ ಹಾನಿಯಾದ್ರೆ ರೈತರಿಗೆ ಸಿಗಲಿದೆ ಪರಿಹಾರ

ಡಾಲರ್​ ಮೌಲ್ಯ ಮತ್ತು ಬಾಂಡ್​ ಗಳಿಕೆ ದರ ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಚಿನ್ನದ ಬದಲು ಡಾಲರ್​ ಹಾಗೂ ಬಾಂಡ್​ಗಳತ್ತ ಹೂಡಿಕೆ ಮಾಡಲು ಮುಂದಾಗುತ್ತಿದ್ದಾರೆ. ಯುದ್ಧ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಚಿನ್ನದ ದರ ಮತ್ತಷ್ಟು ಇಳಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

Exit mobile version