ದೀರ್ಘಾವಧಿಯಲ್ಲಿ ದೊಡ್ಡ ಮೊತ್ತದ ಹಣವನ್ನು ಕ್ರೋಢೀಕರಿಸಲು ಒಂದೇ ಬಾರಿಗೆ ದೊಡ್ಡ ಮೊತ್ತವನ್ನು ಹೂಡಿಕೆ ಮಾಡುವುದು (Lump sum) ಉತ್ತಮವೇ ಅಥವಾ ಪ್ರತಿ ತಿಂಗಳು ವ್ಯವಸ್ಥಿತವಾಗಿ ಹೂಡಿಕೆ ಮಾಡುವ ಎಸ್‌ಐಪಿ (SIP) ಉತ್ತಮವೇ ಎಂಬ ಗೊಂದಲ ಅನೇಕ ಹೂಡಿಕೆದಾರರಲ್ಲಿ ಇರುತ್ತದೆ. ಮಾರುಕಟ್ಟೆಯ ಏರಿಳಿತ, ಹೂಡಿಕೆಯ ಅವಧಿ ಮತ್ತು ಚಕ್ರಬಡ್ಡಿಯ (Compounding) ಲೆಕ್ಕಾಚಾರದ ಆಧಾರದ ಮೇಲೆ ಈ ಎರಡು ಹೂಡಿಕೆ ವಿಧಾನಗಳು (Lumpsum vs SIP) ವಿಭಿನ್ನ ಫಲಿತಾಂಶಗಳನ್ನು ನೀಡುತ್ತವೆ.
ಶೇಕಡಾ 12 ರಷ್ಟು ವಾರ್ಷಿಕ ಆದಾಯದ (Return) ನಿರೀಕ್ಷೆಯೊಂದಿಗೆ ₹10 ಲಕ್ಷದ ಲಂಪ್‌ಸಮ್ ಹೂಡಿಕೆ ಮತ್ತು ತಿಂಗಳಿಗೆ ₹10,000 ರ ಎಸ್‌ಐಪಿ ಹೂಡಿಕೆಯನ್ನು 20 ವರ್ಷಗಳ ಅವಧಿಗೆ ಹೋಲಿಸಿದರೆ ಸಿಗುವ ಲಾಭದ ಲೆಕ್ಕಾಚಾರ ಇಲ್ಲಿದೆ.
20 ವರ್ಷಗಳ ಕಾಲ ತಿಂಗಳಿಗೆ ₹10,000 ಎಸ್‌ಐಪಿ (SIP)
ಒಬ್ಬ ವ್ಯಕ್ತಿಯು ಪ್ರತಿ ತಿಂಗಳು ₹10,000 ರಂತೆ 20 ವರ್ಷಗಳ ಕಾಲ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದರೆ ಸಿಗುವ ಅಂದಾಜು ಆದಾಯದ ವಿವರ:
-
ಒಟ್ಟು ಹೂಡಿಕೆ ಮೊತ್ತ: ₹24,00,000 (₹24 ಲಕ್ಷ)
-
ಹೂಡಿಕೆ ಅವಧಿ: 20 ವರ್ಷಗಳು
-
ನಿರೀಕ್ಷಿತ ವಾರ್ಷಿಕ ಆದಾಯ: ಶೇ. 12
-
ಅಂದಾಜು ಗಳಿಸಿದ ಲಾಭ: ₹67,98,574
-
ಮುಕ್ತಾಯದ ಅವಧಿಗೆ ಒಟ್ಟು ಮೌಲ್ಯ: ₹91,98,574 (ಸುಮಾರು ₹92 ಲಕ್ಷ)
10 ಲಕ್ಷದ ಲಂಪ್‌ಸಮ್ (Lump sum) ಹೂಡಿಕೆ
ಇದೇ 20 ವರ್ಷಗಳ ಅವಧಿಗೆ ಆರಂಭದಲ್ಲೇ ಒಂದೇ ಬಾರಿಗೆ ₹10 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ ಸಿಗುವ ಅಂದಾಜು ಆದಾಯದ ವಿವರ:
-
ಒಟ್ಟು ಹೂಡಿಕೆ ಮೊತ್ತ: ₹10,00,000 (₹10 ಲಕ್ಷ)
-
ಹೂಡಿಕೆ ಅವಧಿ: 20 ವರ್ಷಗಳು
-
ನಿರೀಕ್ಷಿತ ವಾರ್ಷಿಕ ಆದಾಯ: ಶೇ. 12
-
ಅಂದಾಜು ಗಳಿಸಿದ ಲಾಭ: ₹86,46,293
-
ಮುಕ್ತಾಯದ ಅವಧಿಗೆ ಒಟ್ಟು ಮೌಲ್ಯ: ₹96,46,293 (ಸುಮಾರು ₹96.4 ಲಕ್ಷ)
BSNL AirFibre: ಊರಲ್ಲಿ ವೈಫೈ ಕೇಬಲ್ ಕಟ್ ಆಗೋ ಚಿಂತೆ ಬಿಡಿ: ಬಿಎಸ್ಎನ್ಎಲ್ ಏರ್ ಫೈಬರ್ ವಿಶೇಷ ಪ್ಲಾನ್
ಅಂತಿಮ ತೀರ್ಮಾನ: ಯಾವುದು ಉತ್ತಮ?
ಮೇಲಿನ ಕ್ಯಾಲ್ಕುಲೇಟರ್ ಲೆಕ್ಕಾಚಾರಗಳನ್ನು ಗಮನಿಸಿದರೆ, ಒಂದೇ ಅವಧಿಗೆ ಎಸ್‌ಐಪಿಗಿಂತ ಲಂಪ್‌ಸಮ್ ಹೂಡಿಕೆಯು ಹೆಚ್ಚಿನ ಲಾಭವನ್ನು ನೀಡಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಎಸ್‌ಐಪಿಯಲ್ಲಿ ಒಟ್ಟು ₹24 ಲಕ್ಷ ಹೂಡಿಕೆ ಮಾಡಿದರೂ ಸಿಗುವ ಮೊತ್ತ ₹91.9 ಲಕ್ಷ, ಆದರೆ ಲಂಪ್‌ಸಮ್‌ನಲ್ಲಿ ಕೇವಲ ₹10 ಲಕ್ಷ ಹೂಡಿಕೆ ಮಾಡಿದರೂ ಸಿಗುವ ಮೊತ್ತ ₹96.4 ಲಕ್ಷ.
ಇದಕ್ಕೆ ಮುಖ್ಯ ಕಾರಣ ‘ಸಮಯ ಮತ್ತು ಚಕ್ರಬಡ್ಡಿಯ ಶಕ್ತಿ’. ಲಂಪ್‌ಸಮ್ ವಿಧಾನದಲ್ಲಿ ಆರಂಭದಲ್ಲೇ ದೊಡ್ಡ ಮೊತ್ತ ಹೂಡಿಕೆಯಾಗುವುದರಿಂದ ಇಡೀ ಹಣಕ್ಕೆ 20 ವರ್ಷಗಳ ಕಾಲ ಚಕ್ರಬಡ್ಡಿಯ ಲಾಭ ಸಿಗುತ್ತದೆ. ಆದರೆ, ನೆನಪಿರಲಿ, ಲಂಪ್‌ಸಮ್ ಹೂಡಿಕೆಯು ಮಾರುಕಟ್ಟೆಯ ಏರಿಳಿತದ ಅಪಾಯಕ್ಕೆ ಒಳಪಟ್ಟಿರುತ್ತದೆ. ಹೂಡಿಕೆ ಮಾಡುವ ಮುನ್ನ ನಿಮ್ಮ ಆರ್ಥಿಕ ಸಲಹೆಗಾರರನ್ನು ಸಂಪರ್ಕಿಸುವುದು ಸೂಕ್ತ.
