LPG gas cylinder delivery : ಕೇವಲ 10 ನಿಮಿಷಗಳಲ್ಲಿ ಮನೆ ಬಾಗಿಲಿಗೆ ಎಲ್‌ಪಿಜಿ ಸಿಲಿಂಡರ್

ಸ್ವಿಗ್ಗಿಯ ಇನ್‌ಸ್ಟಾಮಾರ್ಟ್ ಎಚ್‌ಪಿಸಿಎಲ್‌ನೊಂದಿಗೆ ಪಾಲುದಾರಿಕೆ ಹೊಂದಿದ್ದು, ಭಾರತದಲ್ಲಿ ಇದೀಗ ಎಲ್‌ಪಿಜಿ ಸಿಲಿಂಡರ್ ವಿತರಣಾ ಸಂಸ್ಥೆಯನ್ನು ಆರಂಭಿಸುತ್ತಿದೆ. ಗ್ರಾಹಕರಿಗೆ ಕೇವಲ 10 ನಿಮಿಷಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ ಒದಗಿಸಲು ಮುಂದಾಗಿದೆ.

HP Navya : ನವದೆಹಲಿ : ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್‌ ಪೂರೈಕೆ ಗ್ರಾಹಕರಿಗೆ ದೊಡ್ಡ ತಲೆನೋವಾಗಿದೆ. ಆದ್ರೆ ಗ್ರಾಹಕರು ಇನ್ಮುಂದೆ ಗ್ಯಾಸ್‌ ಬಗ್ಗೆ ಚಿಂತೆ ಮಾಡುವಂತಿಲ್ಲ. ಯಾಕೆಂದ್ರೆ ಕೇವಲ 10 ನಿಮಿಷಗಳಲ್ಲಿ ಮನೆ ಬಾಗಿಲಿಗೆ ಗ್ಯಾಸ್‌ ಸಿಲಿಂಡರ್‌ ಒದಗಿಸುವುದಕ್ಕೆ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ ( Instamart) ಘೋಷಣೆ ಮಾಡಿದೆ.

ಕೇಂದ್ರ ಸರಕಾರದ ಸಾರ್ವಜನಿಕ ವಲಯದ ಉದ್ಯಮವಾಗಿರುವ ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೋರೇಷನ್‌ ಲಿಮಿಟೆಡ್‌ ಜೊತೆಗೆ ಪಾಲುದಾರಿಕೆಯನ್ನು ಘೋಷಿಸಿದೆ. ಭಾರತದ ಮೊದಲ ಬೇಡಿಕೆಯಾಗಿರುವ ಎಲ್‌ಪಜಿ, ಸಿಲಿಂಡರ್‌ ವಿತರಣಾ ಸೇವೆಯನ್ನು ತ್ವರಿತ ವಾಣಿಜ್ಯ ವೇದಿಕೆಯನ್ನು ಪೂರೈಸಲು ಸ್ವಿಗ್ಗಿ ಸಜ್ಜಾಗಿದೆ.

ಸಾಮಾನ್ಯವಾಗಿ ಮನೆಗಳಲ್ಲಿ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ಗೆ ಪ್ರಥಮ ಪ್ರಾಶಸ್ತ್ಯವನ್ನು ನೀಡಲಾಗುತ್ತಿದೆ. ಇದೇ ಕಾರಣದಿಂದಲೇ ಗ್ರಾಹಕರಿಗೆ ಸಕಾಲದಲ್ಲಿ ಗ್ಯಾಸ್‌ ಸಿಲಿಂಡರ್‌ ಒದಗಿಸಬೇಕು ಅನ್ನೋ ಈ ಯೋಜನೆಯ ಪ್ರಮುಖ ಉದ್ದೇಶ. ಎಚ್‌ಪಿಸಿಎಲ್‌ ( HPCL) ತನ್ನ ಹೊಸ ಎಚ್‌ಪಿ ಹೊಸ ಸೌಲಭ್ಯವನ್ನು ಇನ್‌ಸ್ಟಾಮಾರ್ಟ್‌ನಲ್ಲಿ ಪರಿಚಯಿಸಿದೆ . ಮುಂದಿನ ದಿನಗಳಲ್ಲಿ 10 ಕೆಜಿಯ ಎಲ್‌ಪಿಜಿ ಸಿಲಿಂಡರ್‌ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ ಆರಂಭಿಸಲಿರುವ ಈ ಹೊಸ ಎಲ್‌ಪಿಜಿ ಸಿಲಿಂಡರ್‌ ಸೇವೆಯು ಮೊದಲು ಬೆಂಗಳೂರಿನಲ್ಲಿ ಆರಂಭಗಳ್ಳಲಿದೆ. ಎಚ್‌ಪಿ ನವ್ಯ ಅನ್ನೋ ಹೊಚ್ಚ ಹೊಸ ಸೇವೆಯನ್ನು ಬಳಕೆ ಮಾಡಿಕೊಂಡು ಗ್ಯಾಸ್‌ ಸಿಲಿಂಡರ್‌ ಬುಕ್‌ ಮಾಡಬಹುದಾಗಿದೆ.

ಎಚ್‌ ಪಿ ನವ್ಯದ ವಿಶೇಷತೆಗಳೇನು ? (Key Features of HP Navya)

ಸಿಲಿಂಡರ್‌ ಸಂಪರ್ಕ ಹೊಂದಿದವರಿಗೆ ಹೆಚ್ಚುವರಿ ಗ್ಯಾಸ್‌

ಭಾರತದಲ್ಲಿ ಈಗಾಗಲೇ ದೇಶೀಯ ಎಲ್‌ಪಿಜಿ ಗ್ಯಾಸ್‌ ಸಂಪರ್ಕ ಹೊಂದಿರುವರಿಗೂ ಕೂಡ ಈ ಹೊಸ ಎಚ್‌ಪಿ ನವ್ಯ ಸೇವೆಯನ್ನು ಪಡೆಯಬಹುದಾಗಿದೆ. ಇದರ ಜೊತೆಗೆ 5 ಕೆಜಿಯ ಎಲ್‌ಪಿಜಿ ಸಿಲಿಂಡರ್‌ ಕೂಡ ಲಭ್ಯವಿರಲಿದೆ. ವಿದ್ಯಾರ್ಥಿಗಳು, ಉದ್ಯೋಗಸ್ಥರು, ಸಣ್ಣ ಮನೆಗಳನ್ನು ಮಾಡಿಕೊಂಡು ವಾಸಿಸುವವರಿಗೆ ಎಚ್‌ ಪಿ ನವ್ಯ ಹೆಚ್ಚು ವರದಾನವಾಗಲಿದೆ. ಹೊಂದಿಕೊಳ್ಳುವ, ಬೇಡಿಕೆಯ ಮೇರೆಗೆ ಆಯ್ಕೆಯಾಗಿದೆ.

10 ನಿಮಿಷಗಳಲ್ಲಿ LPG ಸಿಲಿಂಡರ್ ವಿತರಣೆ ಹೇಗೆ ಸಾಧ್ಯ ?

ಇನ್ಮುಂದೆ ಹೆಚ್ಚುವರಿಗೆ ಗ್ಯಾಸ್‌ ಸೇವೆಯನ್ನು ಪಡೆಯಬೇಕಾದ್ರೆ ಗ್ರಾಹಕರು ಇನ್‌ಸ್ಟಾಮಾರ್ಟ್‌ಗೆ ಲಾಗಿನ್‌ ಆಗಬಹುದು. ಈ ಮೂಲಕ ತಮಗೆ ಬೇಕಾದ 10 ಕೆಜಿಯ ಎಲ್‌ಪಿಜಿ ಸಿಲಿಂಡರ್‌ ಅಥವಾ 5 ಕೆಜಿಯ ಎಲ್‌ಪಿಜಿ ಸಿಲಿಂಡರ್‌ ಅನ್ನು ಕಾರ್ಟ್‌ ಸೇರಿಸಿ, ಆರ್ಡರ್‌ ಮಾಡುವ ಮೂಲಕ ಪಡೆಯಬಹುದಾಗಿದೆ.

ಮದಲ ಬಾರಿಗೆ ಖರೀದಿಸಿದಾಗ ಹೊಸ ಸಿಲಿಂಡರ್‌ ನೀಡಲಾಗುತ್ತದೆ. ಒಂದೊಮ್ಮೆ ಗ್ರಾಹಕರು ಎರಡನೇ ಬಾರಿಗೆ ಗ್ಯಾಸ್‌ ಸಿಲಿಂಡರ್‌ ಪಡೆಯಬೇಕಾದ್ರೆ ಎಚ್‌ಪಿಸಿಎಲ್‌ ಕಂಪೆನಿಯ ಸಿಲಿಂಡರ್‌ ಅನ್ನು ಹಿಂದಿರುಗಿಸುವ ಮೂಲಕ ಹೊಸ ಸಿಲಿಂಡರ್‌ ಪಡೆಯಬಹುದಾಗಿದೆ.

ಈ ಹೊಸ ಮಾದರಿಯ ಗ್ಯಾಸ್‌ ಅನ್ನು ಎಚ್‌ಪಿಸಿಎಲ್‌ನ ಅಧಿಕೃತ ವಿತರಕರ ಮೂಲಕವೇ ಪೂರೈಸಲಾಗುತ್ತದೆ. ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ. ತರಬೇತಿ ಪಡೆದ ಸಿಬ್ಬಂದಿಯೇ ಗ್ಯಾಸ್‌ ಪೂರೈಕೆ ಮಾಡಲಿದ್ದಾರೆ. ಮೊದಲ ಬಾರಿಗೆ ಗ್ಯಾಸ್‌ ಬುಕ್‌ ಮಾಡುವವರಿಗೆ ಯಾವುದೇ ಗುರುತಿನ ಚೀಟಿಯ ಅಗತ್ಯವೂ ಇರೋದಿಲ್ಲ.

LPG cylinder delivery in 10 minutes cooking LPG gas cylinder delivery service launched

Exit mobile version