ಬೆಂಗಳೂರು: ದೇಶದಾದ್ಯಂತ ಎಲ್‌ಪಿಜಿ (LPG) ಗ್ರಾಹಕರಿಗೆ e-KYC ಕುರಿತು ಸೂಚನೆಗಳು ನೀಡಲಾಗುತ್ತಿದ್ದು, ತಮ್ಮ ಗ್ಯಾಸ್ ಸಂಪರ್ಕದ ಇಕೆವೈಸಿ (e-KYC) ಸ್ಥಿತಿ ಪರಿಶೀಲಿಸುವಂತೆ ಸಲಹೆ ನೀಡಲಾಗುತ್ತಿದೆ. ಒಂದೊಮ್ಮೆ ಕೆವೈಸಿ (KYC) ಬಾಕಿ ಇದ್ದರೆ, ಸಂಬಂಧಿಸಿದ LPG ವಿತರಕರು ಅಥವಾ ತೈಲ ಕಂಪನಿಯ ಅಧಿಕೃತ ವೇದಿಕೆಗಳ ಮೂಲಕ ಅಗತ್ಯ ಪ್ರತಿಕ್ರಿಯೆ ಪೂರ್ಣಗೊಳಿಸುವಂತೆ ತಿಳಿಸಲಾಗಿದೆ.
ಎಲ್‌ಪಿಜಿ ವಿತರಕರಿಂದ ಗ್ರಾಹಕರು ಆಗಸ್ಟ್ 15ರ ಒಳಗೆ ಈ ಕೆವೈಸಿ ( e-KYC) ಕಡ್ಡಾಯ ಅನ್ನೋ ಮಾಹಿತಿ ನೀಡಲಾಗಿದೆ. ಆದರೆ ಈ ಗಡುವು ಎಲ್ಲಾ LPG ಗ್ರಾಹಕರಿಗೂ ಒಂದೇ ರೀತಿಯಲ್ಲಿ ಅನ್ವಯಿಸುತ್ತದೆ ಎಂಬುದನ್ನು ಗ್ರಾಹಕರು ಸ್ವತಃ ಖಚಿತಪಡಿಸಿಕೊಳ್ಳಬೇಕು. ಗ್ರಾಹಕರು ತಮ್ಮ ಎಲ್‌ಪಿಜಿ (LPG ) ಗ್ಯಾಸ್ ಕಂಪನಿಗಳ ಅಧಿಕೃತ ವೆಬ್‌ಸೈಟ್, ಮೊಬೈಲ್ ಅಪ್ಲಿಕೇಶನ್ ಅಥವಾ ಅಧಿಕೃತ ಗ್ಯಾಸ್ ಏಜೆನ್ಸಿಯ ಮೂಲಕ ಹೊಸ ನಿಯಮ ಹಾಗೂ ಗಡುವನ್ನು ಪರಿಶೀಲಿಸುವುದು ಬಹಳ ಮುಖ್ಯ.
ಎಲ್‌ಪಿಜಿ e-KYC ಯಾಕೆ ಮಾಡಿಸಬೇಕು ?
ಭಾರತದಲ್ಲಿ ಎಲ್‌ಪಿಜಿ ಗ್ಯಾಸ್ ಸಂಪರ್ಕವನ್ನು ಹೊಂದಿರುವ ಪ್ರತಿಯೊಬ್ಬರೂ ಕೂಡ ತಮ್ಮ ಅಗತ್ಯ ದಾಖಲೆಗಳನ್ನು ನೀಡುವ ಮೂಲಕ ಗ್ಯಾಸ್ ಇಕೆವೈಸಿ ಮಾಡಿಸಬೇಕು. ಇಕೆವೈಸಿ ಮಾಡಿಸುವುದರಿಂದ ಗ್ರಾಹಕರ ಹೆಸರು, ವಿಳಾಸ, ನೋಂದಾಯಿತ ಮೊಬೈಲ್ ಸಂಖ್ಯೆ ಸೇರಿದಂತೆ ಸಂಪರ್ಕಕ್ಕೆ ಸಂಬಂಧಿಸಿದ ಮಾಹಿತಿಯನ್ನು ನವೀಕರಿಸಲು ಹೆಚ್ಚು ಸಹಕಾರಿಯಾಗುತ್ತದೆ.
ಒಂದೊಮ್ಮೆ ಹಲವು ಸಮಯಗಳಿಂದಲೂ ನೀವು ಮೊಬೈಲ್ ಸಂಖ್ಯೆ ಅಥವಾ ವಿಳಾಸ ಬದಲಾಯಿಸಿದ್ದರ ಕೂಡ ದಾಖಲೆಗಳನ್ನು ನವೀಕರಿಸದಿರುವ ಗ್ರಾಹಕರು ತಮ್ಮ ಮಾಹಿತಿಯನ್ನು ಪರಿಶೀಲನೆ ಮಾಡುವುದು ಒಳಿತು.
ನಿಮ್ಮ e-KYC ಆಗಿದೆಯೇ ? ಪರಿಶೀಲಿಸುವುದು ಹೇಗೆ ?
ಗ್ರಾಹಕರು ತಮ್ಮ ಎಲ್‌ಪಿಜಿ ಸಂಪರ್ಕಕ್ಕೆ ಸಂಬಂಧಿಸಿದಂತೆ ಅಧಿಕೃತ ಡಿಜಿಟಲ್ ವೇದಿಕೆಯಲ್ಲಿ ಕೆವೈಸಿ ಸ್ಥಿತಿಯನ್ನು ಪರಿಶೀಲಿಸಬಹುದು. ಎಲ್ ಪಿಜಿ ಕಂಪೆನಿಯ ಅಧಿಕೃತ ಮೊಬೈಲ್ ಆಪ್ಲಿಕೇಶನ್ ಅಥವಾ ವೆಬ್‌ಸೈಟ್‌ನಲ್ಲಿ ಲಭ್ಯ ಇರುವ ಸೇವೆಗಳ ಮೂಲಕವ ಈ ಮಾಹಿತಿ ಪಡೆಯಬಹುದಾಗಿದೆ.
ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯ ಮೂಲಕ ಖಾತೆಗೆ ಪ್ರವೇಶಿಸಿ, ಬಳಿಕ KYC ಅಥವಾ ಗುರುತಿನ ಪರಿಶೀಲನೆಗೆ ಸಂಬಂಧಿಸಿದ ಆಯ್ಕೆಯನ್ನು ಪರಿಶೀಲಿಸಬಹುದು. ಗ್ಯಾಸ್ ಏಜೆನ್ಸಿಗಳು ಹಾಲಿ ಇರುವ ನಿಯಮಗಳಿಗೆ ಅನುಗುಣವಾಗಿ ಆಧಾರ್ ಕಾರ್ಡ್ (Aadhaar) ಆಧಾರಿತ ಪರಿಶೀಲನೆ ಅಥವಾ ಇತರ ಅನುಮೋದಿತ ವಿಧಾನಗಳ ಮೂಲಕ KYC ಮಾಡಿಸಲು ಅವಕಾಶ ನೀಡುತ್ತಾರೆ.
ಕೆಲವೊಂದು ಡಿಜಿಟಲ್ ಪರಿಶೀಲನೆಯ ವೇಳೆಯಲ್ಲಿ ಮೊಬೈಲ್ ಕ್ಯಾಮೆರದ ಮೂಲಕ ಗುರುತು, ಮುಖ ಪರಿಶೀಲನೆಯ ಹಂತಗಳನ್ನೂ ಪೂರ್ಣಗೊಳಿಸಬೇಕಾಗುತ್ತದೆ. ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ನಂತರದಲ್ಲಿ ಪರಿಶೀಲನೆ ಯಶಸ್ವಿ ಆಗಿದ್ಯಾ ಅನ್ನೋದನ್ನು ಖಚಿತ ಪಡಿಸಿಕೊಳ್ಳುವುದು ಬಹಳ ಮುಖ್ಯ.
ಗ್ಯಾಸ್ ಏಜೆನ್ಸಿಯಲ್ಲೂ ಪರಿಶೀಲಿಸಬಹುದು
ಒಂದೊಮ್ಮೆ ಆನ್‌ಲೈನ್ ಮೂಲಕ ನಿಮಗೆ ಇಕೆವೈಸಿ ( e-KYC) ಮಾಡಿಸಲು ಸಾಧ್ಯವಾಗದೇ ಇರುವ ಗ್ರಾಹಕರು ತಮ್ಮಅಧಿಕೃತ ಎಲ್‌ಪಿಜಿ ( LPG) ವಿತರಕರನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದಾಗಿದೆ. ಆದರೆ ಗ್ಯಾಸ್ ಏಜೆನ್ಸಿಗೆ ತೆರಳುವಾಗ LPG ಸಂಪರ್ಕಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳು ಮತ್ತು ಗುರುತಿನ ದಾಖಲೆಗಳನ್ನು ಕೊಂಡೊಯ್ಯುವುದು ಕಡ್ಡಾಯ. ನಿಮ್ಮ ಮೊಬೈಲ್ ಸಂಖ್ಯೆ, ವಿಳಾಸ, ಗ್ಯಾಸ್ ಸಂಪರ್ಕದ ಸಂಪೂರ್ಣ ವಿವರ ನಿಮ್ಮ ಬಳಿಯಲ್ಲಿ ಇರಲಿ.
KYC ಮಾಡದಿದ್ದರೆ ಗ್ಯಾಸ್ ಸಿಲಿಂಡರ್ ಸಿಗುವುದಿಲ್ಲವೇ ?
ಗ್ಯಾಸ್ ಕೆವೈಸಿ ಮಾಡಿಸದೇ ಇದ್ದಲ್ಲ ತಕ್ಷಣವೇ ಗ್ಯಾಸ್ ಸಿಲಿಂಡರ್ ವಿತರಣೆಯನ್ನು ನಿ್ಲ್ಲಿಸಲಾಗುತ್ತದೆ, ಗ್ರಾಹಕರು ವಾಣಿಜ್ಯ ದರದಲ್ಲಿ ಸಿಲಿಂಡರ್ ಖರೀದಿ ಮಾಡಬೇಕಾಗುತ್ತದೆ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ ಇಂತಹ ಮಾಹಿತಿಯನ್ನು ಅಧಿಕೃತ ಮೂಲಗಳಿದ ದೃಢಪಡಿಸದೆ ನಂಬಬಾರದು. ಎಲ್‌ಪಿಜಿ ಸಂಪರ್ಕದ ಮೇಲೆ ಯಾವುದೇ ನಿರ್ಬಂಧ ಅಥವಾ ಸೇವಾ ಬದಲಾವಣೆ ಅನ್ವಯಿಸುತ್ತದೆೇ ಅನ್ನೋದನ್ನು ಸಂಬಂಧಿಸಿ ಎಲ್‌ಪಿಜಿ ಕಂಪೆನಿ ಅಥವಾ ಅಧಿಕೃತ ವಿತರಕರಿಂದ ಖಚಿತ ಪಡಿಸಿಕೊಳ್ಳಬೇಕು.
ಇಕೆವೈಸಿ ಹೆಸರಲ್ಲಿ ವಂಚನೆ ಬಗ್ಗೆ ಇರಲಿ ಎಚ್ಚರ !
ಗ್ಯಾಸ್ ಇಕೆವೈಸಿ ಮಾಡಿಸುವುದು ಕಡ್ಡಾಯ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ವಂಚಕರು e-KYC ಹೆಸರಿನಲ್ಲಿ ಗ್ರಾಹಕರಿಂದ ಹಣ, OTP, ಬ್ಯಾಂಕ್ ವಿವರ, ಪಾಸ್‌ವರ್ಡ್ ಅಥವಾ ಇತರ ಸೂಕ್ಷ್ಮ ಮಾಹಿತಿಯನ್ನು ಅನಧಿಕೃತವಾಗಿ ಪಡೆದುಕೊಳ್ಳುವ ಬಗ್ಗೆ ಎಚ್ಚರಿಕೆ ಇರಲಿ.
ಕೆವೈಸಿ (KYC) ಪೂರ್ಣಗೊಳಿಸಲು ಅಪರಿಚಿತ ವ್ಯಕ್ತಿಗಳು ಕಳುಹಿಸುವ ಲಿಂಕ್‌ಗಳನ್ನು ಕ್ಲಿಕ್ ಮಾಡುವುದು ಅಥವಾ ಅಪರಿಚಿತ ವೆಬ್‌ಸೈಟ್‌ಗಳಲ್ಲಿ ವೈಯಕ್ತಿಕ ಹಾಗೂ ಬ್ಯಾಂಕಿಂಗ್ ಮಾಹಿತಿಯನ್ನು ಒದಗಿಸುವುದನ್ನು ಕಡ್ಡಾಯಾಗಿ ತಪ್ಪಿಸಿ.
ಗ್ರಾಹಕರು ತಮ್ಮಎಲ್‌ಪಿಜಿ ಸಂಪರ್ಕಕ್ಕೆ ಸಂಬಂಧಿಸಿದ ಅಧಿಕೃತ ಅಪ್ಲಿಕೇಶನ್, ಅಧಿಕೃತ ವೆಬ್‌ಸೈಟ್ ಅಥವಾ ಅಧಿಕೃತ ಗ್ಯಾಸ್ ಏಜೆನ್ಸಿ ಮೂಲಕವೇ KYC ಸ್ಥಿತಿಯನ್ನು ಪರಿಶೀಲಿಸುವುದು ಸುರಕ್ಷಿತ.
ಇದೇ ಆಗಸ್ಟ್ 15ರ ಒಳಗಾಗಿ ಇಕೆವೈಸಿ ಕಡ್ಡಾಯ ಎಂಬ ಗಡುವು ನಿಮ್ಮ ಎಲ್‌ಪಿಜಿ (LPG) ಸಂಪರ್ಕಕ್ಕೆ ಅನ್ವಯಿಸುತ್ತದೆಯೇ ಅನ್ನೋದನ್ನು ನೀವು ಎಲ್‌ಪಿಜಿ ಪೂರೈಕೆದಾರರ ಅಧಿಕೃತ ಮೂಲಗಳಿಂದ ಖಚಿತ ಪಡಿಸಿಕೊಂಡ ನಂತರವ ಅಗತ್ಯ ಕ್ರಮಕೈಗೊಳ್ಳಿ.