ಅಕ್ಟೋಬರ್‌ 2026 ಸಾಲು ಸಾಲು ಹಬ್ಬ, ರಜೆಯೋ ರಜೆ ! ಬ್ಯಾಂಕ್‌ ರಜಾಪಟ್ಟಿ ಇಲ್ಲಿದೆ ನೋಡಿ !

ಅಕ್ಟೋಬರ್‌ 2026 ತಿಂಗಳೆಂದರೆ ಬ್ಯಾಂಕ್‌, ಶಾಲಾ–ಕಾಲೇಜುಗಳಿಗೆ ರಜೆಯ ಕಾಲ. ಬ್ಯಾಂಕ್ ಕೆಲಸ ಇದ್ದವರು ಈ ರಜಾ ವೇಳಾಪಟ್ಟಿ ನೋಡಿ ನಿಮ್ಮ ಕೆಲಸಗಳನ್ನು ಹೊಂದಿಸಿಕೊಳ್ಳಿ.

By Archana V Bhat | ಅರ್ಚನಾ ವಿ ಭಟ್‌

1 min read

WhatsAppPost
October 2026 calendar
October 2026 calendar

ರಜೆ, ರಜೆ, ರಜೆ ! ಅಕ್ಟೋಬರ್‌ ಬಂತೆಂದರೆ ಸಾಕು ಸಾಲು ಸಾಲು ಹಬ್ಬ, ಶಾಲಾ ಕಾಲೇಜುಗಳಿಗೆ ರಜೆಯ ಸುಗ್ಗಿ. ಅರ್ಧವಾರ್ಷಿಕ ಪರೀಕ್ಷೆ ಮುಗಿಸಿದ ಚಿಣ್ಣರಿಗೆ ಓದು–ಬರಹದಿಂದ ಶಾರ್ಟ್‌ ಬ್ರೇಕ್‌ ನೀಡುವ ತಿಂಗಳು. ಇದು ಶಾಲಾ ಕಾಲೇಜುಗಳ ಕತೆಯಾದರೆ, ಇನ್ನು ಬ್ಯಾಂಕ್‌, ಆಫೀಸ್‌ಗಳಿಗೆ ಹಬ್ಬದ ಕೊಡುಗೆಯಾಗಿ ಸಿಗಲಿವೆ ಒಂದರ ಮೇಲೊಂದು ರಜೆಗಳು. ಹಾಗಾಗಿ ಅಕ್ಟೋಬರ್‌ ತಿಂಗಳನ್ನು ಹಬ್ಬ ಮತ್ತು ರಜಾದಿನಗಳ ತಿಂಗಳು ಎಂದು ಕರೆಯಬಹುದು. ಪಿತೃ ಪಕ್ಷದ ಕೊನೆಯ ದಿನ, ನವರಾತ್ರಿ ಉತ್ಸವ, ಕರ್ವಾ ಚೌತ್‌, ರಾಷ್ಟ್ರಪಿತ ಗಾಂಧೀಜಿಯವರ ಜಯಂತಿ ಹೀಗೆ ಈ ತಿಂಗಳು ಹಬ್ಬದ ಉತ್ಸಾಹ ಮತ್ತು ರಜೆಯ ಮಜಾದಿಂದ ಕೂಡಿದೆ. ಈ ತಿಂಗಳು ಬ್ಯಾಂಕ್‌ಗಳಿಗೆ ಬಹಳಷ್ಟು ದಿನ ರಜೆಗಳಿರುವುದರಿಂದ ಅದನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ವ್ಯಾಪಾರ–ವಹಿವಾಟುಗಳನ್ನು ನಡೆಸಿ.

ವಾರಾಂತ್ಯದ ರಜಾದಿನಗಳು

  • ಭಾನುವಾರಗಳು: ಅಕ್ಟೋಬರ್ 4, 11, 18 ಮತ್ತು 25

  • ಶನಿವಾರ: ಅಕ್ಟೋಬರ್ 10 (ಎರಡನೇ ಶನಿವಾರ) ಮತ್ತು ಅಕ್ಟೋಬರ್ 24 (ನಾಲ್ಕನೇ ಶನಿವಾರ)

ಬ್ಯಾಂಕ್‌ ರಜಾಪಟ್ಟಿ

ಅಕ್ಟೋಬರ್ 2 – ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆ – ದೇಶಾದ್ಯಂತ ರಜೆ

ಅಕ್ಟೋಬರ್ 10 – ಮಹಾಲಯ ಅಮಾವಾಸ್ಯೆ – ಬೆಂಗಳೂರು ಮತ್ತು ಕೋಲ್ಕತ್ತಾ

ಅಕ್ಟೋಬರ್ 17 – ಮಹಾ ಸಪ್ತಮಿ – ಅಗರ್ತಲಾ

ಅಕ್ಟೋಬರ್ 19 – ದಸರಾ – ಅಗರ್ತಲಾ, ಐಜ್ವಾಲ್, ಭುವನೇಶ್ವರ, ಚೆನ್ನೈ, ಗುವಾಹಟಿ, ಇಂಫಾಲ್, ಇಟಾನಗರ, ಕೊಹಿಮಾ, ಕೋಲ್ಕತ್ತಾ, ಪಾಟ್ನಾ, ರಾಂಚಿ ಮತ್ತು ಶಿಲ್ಲಾಂಗ್

ಅಕ್ಟೋಬರ್ 20 – ದಸರಾ/ಮಹಾನವಮಿ, ಆಯುಧಪೂಜೆ/ದುರ್ಗಾಪೂಜೆ – ಗ್ಯಾಂಗ್ಟಾಕ್ ಮತ್ತು ಇಂಫಾಲ್

ಅಕ್ಟೋಬರ್ 21 – ವಿಜಯದಶಮಿ/ದುರ್ಗಾ ಪೂಜೆ – ಅಗರ್ತಲಾ, ಬೆಂಗಳೂರು, ಗ್ಯಾಂಗ್ಟಾಕ್, ಗುವಾಹಟಿ, ಕೊಚ್ಚಿ, ಕೋಲ್ಕತ್ತಾ ಮತ್ತು ತಿರುವನಂತಪುರಂ

ಅಕ್ಟೋಬರ್ 22 ಮತ್ತು 23 – ದುರ್ಗಾ ಪೂಜೆ – ಗ್ಯಾಂಗ್ಟಾಕ್

ಅಕ್ಟೋಬರ್ 26 – ಲಕ್ಷ್ಮೀ ಪೂಜೆ/ಪ್ರವೇಶ ದಿನ/ಮಹರ್ಷಿ ವಾಲ್ಮೀಕಿ ಜಯಂತಿ – ಅಗರ್ತಲ, ಚಂಡೀಗಢ, ಜಮ್ಮು, ಶಿಮ್ಲಾ ಮತ್ತು ಶ್ರೀನಗರ

ಅಕ್ಟೋಬರ್ 29 – ಕರ್ವಾ ಚೌತ್ – ಶಿಮ್ಲಾ

ಅಕ್ಟೋಬರ್ 31 – ಸರ್ದಾರ್ ವಲ್ಲಭಭಾಯಿ ಪಟೇಲ್ ಜಯಂತಿ – ಅಹಮದಾಬಾದ್

ಶಾಲಾ ಕಾಲೇಜು ರಜಾ ಪಟ್ಟಿ

ಅಕ್ಟೋಬರ್ ತಿಂಗಳೆಂದರೆ ಮಕ್ಕಳಿಗೆ ದಸರಾ ರಜೆಯ ಕಾಲ. ಕರ್ನಾಟಕ ಶಿಕ್ಷಣ ಮಂಡಳಿ ಈ ವರ್ಷ ಅಕ್ಟೋಬರ್‌ 3 ರಿಂದ 21 ರವರೆಗೆ ಅಂದರೆ ಬರೋಬ್ಬರಿ 19 ದಿನಗಳ ಕಾಲ ದಸರಾ ರಜೆಯನ್ನು ಘೋಷಿಸಿದೆ. ಆದರೂ ಪೋಷಕರು ಮತ್ತು ವಿದ್ಯಾರ್ಥಿಗಳು ಯಾವುದೇ ಪ್ರವಾಸವನ್ನು ಯೋಜಿಸುವ ಮೊದಲು ತಮ್ಮ ಶಾಲೆಯ ಅಧಿಕೃತ ಸುತ್ತೋಲೆಯನ್ನು ಒಮ್ಮೆ ಪರಿಶೀಲಿಸಿ.

Topics

ಸಂಬಂಧಿತ ಸುದ್ದಿಗಳು