businessಪ್ರಮುಖ ಸುದ್ದಿಗಳು

Kotak Mahindra Bank CEO : ಅನೂಪ್‌ ಕುಮಾರ್‌ ಸಾಹಾ ಕೋಟಕ್‌ ಮಹೇಂದ್ರಾ ಬ್ಯಾಂಕ್‌ ಹೊಸ ಸಿಇಓ

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಅನೂಪ್‌ ಕುಮಾರ್‌ ಸಾಹಾ (Anoop Kumar Saha) ಅವರನ್ನು ನೇಮಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಈ ನೇಮಕಾತಿಗೆ ಅಧಿಕೃತ ಅನುಮೋದನೆ ನೀಡಿದೆ

By Arun Gundmi | ಅರುಣ್‌ ಗುಂಡ್ಮಿ · Editor-in-Chief

1 min read

WhatsAppPost
kotak mahindra bank appoints anoop kumar saha as Next ceo 1
kotak mahindra bank appoints anoop kumar saha as Next ceo 1

ಮುಂಬೈ: ಭಾರತದ ಖಾಸಗಿ ವಲಯದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಕೋಟಕ್ ಮಹೀಂದ್ರಾ ಬ್ಯಾಂಕ್ (Kotak Mahindra Bank) ತನ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಅನೂಪ್‌ ಕುಮಾರ್‌ ಸಾಹಾ (Anoop Kumar Saha) ಅವರನ್ನು ನೇಮಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಈ ನೇಮಕಾತಿಗೆ ಅಧಿಕೃತ ಅನುಮೋದನೆ ನೀಡಿದೆ.

kotak mahindra bank appoints anoop kumar saha as Next ceo
kotak mahindra bank appoints anoop kumar saha as Next ceo

ಅನೂಪ್‌ ಕುಮಾರ್‌ ಸಾಹಾ (Anoop Kumar Saha) ಜನವರಿ 1 ರಿಂದ ಅಧಿಕಾರ

ಕೋಟಕ್‌ ಮಹೀಂದ್ರಾ ಬ್ಯಾಂಕಿನಲ್ಲಿ ಸದ್ಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಅನೂಪ್‌ ಕುಮಾರ್‌ ಸಾಹಾ ಅವರು, ಮುಂದಿನ ಸಿಇಒ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಸದ್ಯ ಕೋಟಕ್‌ ಮಹೀಂದ್ರಾ ಬ್ಯಾಂಕ್‌ನ ಸಿಇಒ ಆಗಿರುವ ಅಶೋಕ್ ವಸ್ವಾನಿ ಅವರ ಅಧಿಕಾರದ ಅವಧಿಯು ಡಿಸೆಂಬರ್‌ 31ಕ್ಕೆ ಕೊನೆಗೊಳ್ಳಲಿದೆ. ಹೀಗಾಗಿ ಅಶೋಕ್ ವಸ್ವಾನಿ ಅವರ ಉತ್ತರಾಧಿಕಾರಿಯಾಗಿ ಅನೂಪ್‌ ಕುಮಾರ್‌ ಸಾಹಾ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಯಾರು ಈ ಅನೂಪ್ ಕುಮಾರ್ ಸಾಹಾ, ಹಿನ್ನೆಲೆ ಏನು ಗೊತ್ತಾ ?

ಅನೂಪ್‌ ಕುಮಾರ್‌ ಸಾಹಾ ಸದ್ಯ ಕೋಟಕ್‌ ಮಹೀಂದ್ರಾ ಬ್ಯಾಂಕ್‌ನಲ್ಲಿ ಅತ್ಯುನ್ನತ ಹುದ್ದೆಯಲ್ಲಿದ್ದಾರೆ. ಚಿಲ್ಲರೆ ಬ್ಯಾಂಕಿಂಗ್‌ (Retail Banking) ಕ್ಷೇತ್ರದಲ್ಲಿ ಅನೂಪ್‌ ಕುಮಾರ್‌ ಸಾಹಾ ಅವರಿಗೆ ಅಪಾರ ಅನುಭವ ಇದೆ. ಈ ಹಿಂದೆ ಅವರು,ಬಜಾಜ್ ಫೈನಾನ್ಸ್ ಮತ್ತು ಐಸಿಐಸಿಐ ಬ್ಯಾಂಕ್‌ ನಂತಹ ಪ್ರತಿಷ್ಠಿತ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಸುಮಾರು 8 ವರ್ಷಗಳ ಕಾಲ ಬಜಾಜ್‌ ಫೈನಾನ್ಸ್‌ನಲ್ಲಿ ಸೇವೆ ಸಲ್ಲಿಸಿದ್ದು, ಎಂಡಿ ಮತ್ತು ಸಿಇಒ ಸೇರಿದಂತೆ ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅಲ್ಲದೇ ಒಂದು ದಶಕಕ್ಕೂ ಅಧಿಕ ಕಾಲ ಐಸಿಐಸಿಐ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿದ ಅನುಭವ ಇವರಿಗಿದೆ. ಸದ್ಯ ಅನೂಪ್‌ ಕುಮಾರ್‌ ಸಾಹಾ ಅವರು, ಕೋಟಕ್‌ ಮಹೀಂದ್ರಾ ಬ್ಯಾಂಕ್‌ನ ಚಿಲ್ಲರೆ ಬ್ಯಾಂಕಿಂಗ್‌, ಸರಕಾರಿ ವ್ಯವಹಾರ, ಡೇಟಾ ವಿಶ್ಲೇಷಣೆ ವಿಭಾಗಗಳ ಉಸ್ತುವಾರಿಯನ್ನೂ ವಹಿಸಿಕೊಂಡಿದ್ದಾರೆ.

Anoop Kumar Saha : ಬ್ಯಾಂಕ್‌ ವಲಯದಲ್ಲಿ ಹೊಸ ನಿರೀಕ್ಷೆ

ಡಿಜಿಟಲ್‌ ಬ್ಯಾಂಕಿಂಗ್‌ ನಂತಹ ಕಠಿಣ ಸಮಯದಲ್ಲಿಯೇ ಅನೂಪ್‌ ಕುಮಾರ್‌ ಸಾಹಾ ಅವರು ಕೋಟಕ್‌ ಮಹೀಂದ್ರಾ ಬ್ಯಾಂಕ್‌ನ ಚುಕ್ಕಾಣಿ ಹಿಡಿಯುತ್ತಿದ್ದಾರೆ. ಲಾಭದಾಯಕವಾಗಿ ನೋಡೋದಾದ್ರೆ ಕೋಟಕ್‌ ಮಹೀಂದ್ರಾ ಬ್ಯಾಂಕ್‌ ಖಾಸಗಿ ವಲಯದಲ್ಲಿ ಸದ್ಯ ನಾಲ್ಕನೇ ಸ್ಥಾನದಲ್ಲಿದೆ. ಪ್ರತಿಸ್ಪರ್ಧಿಗಳಿಗೂ ಪ್ರಬಲ ಪೈಪೋಟಿಯನ್ನು ನೀಡುತ್ತಿದೆ.

ಮತ್ತೊಂದೆಡೆಯಲ್ಲಿ ಕೋಟಕ್‌ ಮಹೀಂದ್ರಾ ಬ್ಯಾಂಕ್‌ ನೇಮಕಾತಿ ವಿಚಾರದಲ್ಲಿಯೂ ಮಹತ್ವದ ಹೆಜ್ಜೆಯನ್ನು ಇರಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅನೂಪ್‌ ಕುಮಾರ್‌ ಸಾಹಾ ಅವರ ನೇಮಕಾತಿಯ ಬೆನ್ನಲ್ಲೇ ಕೋಟಕ್‌ ಮಹೀಂದ್ರಾ ಬ್ಯಾಂಕ್‌ನ ಷೇರುಗಳಲ್ಲಿ ಶೇಕಡಾ 1.4ರಷ್ಟು ಏರಿಕೆ ಕಂಡಿದೆ.

Topics

ಸಂಬಂಧಿತ ಸುದ್ದಿಗಳು