ಮಳೆ ಕೊರತೆ: ತರಕಾರಿ ಬೆಲೆ ಗಗನಕ್ಕೆ; ಗ್ರಾಹಕರು, ವ್ಯಾಪಾರಿಗಳು ಕಂಗಾಲು
ರಾಜ್ಯದಲ್ಲಿ ಎಲ್‌ನಿನೋ ಹೊಡೆತಕ್ಕೆ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದೆ. ಬಾರದ ಮಳೆಯಿಂದಾಗಿ ಬೆಳೆ ನಷ್ಟ ಅನುಭವಿಸಿ ಅನ್ನದಾತರು ಕಣ್ಣೀರಿಡುತ್ತಿದ್ದರೆ,
By Meghana Pranuth | ಮೇಘನಾ ಪ್ರಣೂತ್
1 min read
ಬೆಂಗಳೂರು: ರಾಜ್ಯದಲ್ಲಿ ಎಲ್‌ನಿನೋ ಹೊಡೆತಕ್ಕೆ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದೆ. ಬಾರದ ಮಳೆಯಿಂದಾಗಿ ಬೆಳೆ ನಷ್ಟ ಅನುಭವಿಸಿ ಅನ್ನದಾತರು ಕಣ್ಣೀರಿಡುತ್ತಿದ್ದರೆ, ಇತ್ತ ಮಾರುಕಟ್ಟೆಗೆ ತರಕಾರಿ ಆವಕ ಕಡಿಮೆಯಾಗಿ ದರ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ₹30–₹40 ಇದ್ದ ಸಾಮಾನ್ಯ ತರಕಾರಿಗಳ ಬೆಲೆ ಇದೀಗ ₹60 ರಿಂದ ₹100ರ ಗಡಿ ದಾಟಿದ್ದು, ಜನಸಾಮಾನ್ಯರ ಕೈ ಹಾಗೂ ಜೇಬು ಎರಡನ್ನೂ ಸುಡುತ್ತಿದೆ
ಬೆಂಗಳೂರಿನಲ್ಲಿ ಇಂದಿನ ತರಕಾರಿ ದರಪಟ್ಟಿ (ಪ್ರತಿ ಕೆ.ಜಿ.ಗೆ)
ಬೆಳ್ಳುಳ್ಳಿ: ₹230 – ₹250
ಶುಂಠಿ: ₹120 – ₹130
ಬೀನ್ಸ್: ₹100 – ₹110
ನುಗ್ಗೆಕಾಯಿ: ₹90 – ₹100
ಹಸಿಬಟಾಣಿ / ಹಸಿಮೆಣಸಿನಕಾಯಿ: ₹80 – ₹90
ಕ್ಯಾಪ್ಸಿಕಂ / ಹೀರೆಕಾಯಿ: ₹70 – ₹80
ಕ್ಯಾರೆಟ್ / ಬೀಟ್‌ರೂಟ್: ₹60 – ₹70
ಈರುಳ್ಳಿ: ₹50 – ₹70
ಬೆಂಡೆಕಾಯಿ / ಬದನೆಕಾಯಿ / ಎಲೆಕೋಸು: ₹50 – ₹60
ಹಾಗಲಕಾಯಿ / ಹೂಕೋಸು / ಮೂಲಂಗಿ: ₹40 – ₹50
ಟೊಮೇಟೊ: ₹25 – ₹30
ಮಾರುಕಟ್ಟೆಯಲ್ಲಿ ಗ್ರಾಹಕರ, ವ್ಯಾಪಾರಿಗಳ ಪರದಾಟ
ಬೆಲೆ ಏರಿಕೆಯ ಬಿಸಿಗೆ ಹೆದರಿರುವ ಗ್ರಾಹಕರು ಹಿಂದೆ 1 ಕೆ.ಜಿ ಖರೀದಿಸುತ್ತಿದ್ದ ಜಾಗದಲ್ಲಿ ಈಗ ಅರ್ಧ ಅಥವಾ ಕಾಲು ಕೆ.ಜಿ ಖರೀದಿಸಿ ಸಮಾಧಾನಪಟ್ಟುಕೊಳ್ಳುತ್ತಿದ್ದಾರೆ.
ಬೆಲೆ ಏರಿಕೆಯಿಂದಾಗಿ ಗ್ರಾಹಕರು ಅಂಗಡಿಗಳತ್ತ ಮುಖ ಮಾಡದ ಕಾರಣ ಚಿಲ್ಲರೆ ಮಾರುಕಟ್ಟೆಯಲ್ಲಿ ವ್ಯಾಪಾರ ಸಂಪೂರ್ಣ ಮಂಕಾಗಿದೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ.
ಬಡಾವಣೆಗಳ ಅಂಗಡಿಗಳಿಗೆ ಹೋಲಿಸಿದರೆ ಕೆ.ಆರ್. ಮಾರ್ಕೆಟ್‌ನಲ್ಲಿ ₹30 ರಿಂದ ₹40 ರಷ್ಟು ಕಡಿಮೆ ಬೆಲೆಗೆ ತಾಜಾ ತರಕಾರಿಗಳು ದೊರೆಯುತ್ತಿರುವುದರಿಂದ ಜನ ಸಗಟು ಮಾರುಕಟ್ಟೆಗೆ ಧಾವಿಸುತ್ತಿದ್ದಾರೆ.
ಒಟ್ಟಿನಲ್ಲಿ ಮುಂಗಾರು ಕೈಕೊಟ್ಟ ಪರಿಣಾಮ ಬಹುತೇಕ ಎಲ್ಲಾ ತರಕಾರಿಗಳು ಸೆಂಚುರಿ ಬಾರಿಸುವ ಹಂತಕ್ಕೆ ತಲುಪಿದ್ದು, ಜನಸಾಮಾನ್ಯರ ಮಾಸಿಕ ಬಜೆಟ್ ಸಂಪೂರ್ಣ ಬುಡಮೇಲಾಗಿದೆ.
Topics
ಸಂಬಂಧಿತ ಸುದ್ದಿಗಳು
business
ಕನ್ಫರ್ಮ್ ಟಿಕೆಟ್ ಇದ್ದರೂ ಮಹಿಳೆಗೆ ಸಂಕಷ್ಟ... ಇಲಾಖೆಯಿಂದ ₹2 ಲಕ್ಷ ಪರಿಹಾರ
business
ಅಮೆರಿಕ-ಇರಾನ್ ಯುದ್ಧದ ಎಫೆಕ್ಟ್: ಒಂದೆಡೆ ಕುಸಿದ ಚಿನ್ನದ ಬೆಲೆ, ಮತ್ತೊಂದೆಡೆ ಗಗನಕ್ಕೇರಿದ ಕಚ್ಚಾ ತೈಲ ದರ
business
ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ, ಬೆಳ್ಳಿ ದರವೂ ಕುಸಿತ : ಎಷ್ಟಿದೆ ಇಂದಿನ ಚಿನ್ನ, ಬೆಳ್ಳಿಯ ದರ
business

