ಜೈಲಿನಲ್ಲಿ ನಟ ದರ್ಶನ್​ ಹೊಸ ಕಿರಿಕ್​ : ಸಹಕೈದಿಗಳಿಗೆ ರೇಣುಕಾಸ್ವಾಮಿ ಹಂತಕನಿಂದ ಕಿರುಕುಳ

ಜೈಲಿನಲ್ಲಿ ನನ್ನಿಂದ ಬದುಕಲು ಸಾಧ್ಯವಾಗುತ್ತಿಲ್ಲ. ನನಗೆ ವಿಷವುಣಿಸಿ ಅಂತಾ ನ್ಯಾಯಾಧೀಶರ ಎದುರು ನಾಟಕವಾಡಿದ್ದ ನಟ ದರ್ಶನ್​ (Darshan thoogudeepa) ಇದೀಗ ಸಹಕೈದಿಗಳ ಪಾಲಿಗೆ ತಾನೇ ವಿಷವಾಗಿ ಪರಿಣಮಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜಾಮೀನು ಪಡೆದು ಟೆಂಪಲ್​ ರನ್​ ಮಾಡುತ್ತಿದ್ದ ದರ್ಶನ್​ ಜೈಲಿಗೆ ಸೇರಿದ ಬಳಿಕ ಪರಪ್ಪನ ಅಗ್ರಹಾರದ ಕಠಿಣ ನಿಯಮಾವಳಿಗಳನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ಇತರೆ ಕೈದಿಗಳಿಗೆ ಕಿರುಕುಳ ನೀಡಲು ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

ನಟ ಹಾಗೂ ಆರೋಪಿ ದರ್ಶನ್​ ಇರುವ ಸೆಲ್​ನಲ್ಲಿಯೇ ಈ ಪ್ರಕರಣದ ಇನ್ನಿತರ ಆರೋಪಿಗಳಾದ ನಾಗರಾಜು, ಪ್ರದೋಶ್​, ಲಕ್ಷ್ಮಣ್​​ ,ಅನುಕುಮಾರ್​ ಜಗ್ಗ ಇದ್ದಾರೆ. ಇದರಲ್ಲಿ ನಾಗರಾಜು ಒಬ್ಬಾತನನ್ನು ಬಿಟ್ಟು ಉಳಿದವರಿಗೆ ದರ್ಶನ್​ ಹಿಂಸೆ ನೀಡುತ್ತಿದ್ದಾರೆ ಎನ್ನಲಾಗಿದೆ.

ನಾಗರಾಜು ಒಬ್ಬರನ್ನು ಬಿಟ್ಟು ಉಳಿದವರಿಗೆ ತೀರಾ ಅವಾಚ್ಯ ಶಬ್ದಗಳಿಂದ ದರ್ಶನ್​ ನಿಂದಿಸುತ್ತಿದ್ದಾರೆ ಎನ್ನಲಾಗಿದೆ. ಇದೇ ವಿಚಾರವಾಗಿ ದೊಡ್ಡ ಮಟ್ಟದ ಜಗಳವೇ ನಡೆದು ಹೋಗಿದ್ದು ಜೈಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಜಗಳ ನಿಲ್ಲಿಸಿದ್ದಾರೆ.

ಮಲಗಿಕೊಂಡಿರುವ ಆರೋಪಿಗಳನ್ನು ಕಾಲಿನಲ್ಲಿ ತುಳಿದು ದರ್ಶನ್​ ಹಿಂಸೆ ನೀಡುತ್ತಿದ್ದಾರೆ ಎನ್ನಲಾಗಿದೆ. ಇದೇ ಪ್ರಕರಣದ ಆರೋಪಿಗಳಾಗಿರುವ ಅನುಕುಮಾರ್​ ಹಾಗೂ ಜಗದೀಶ್​ ದರ್ಶನ್​ ಕಾಟ ತಡೆಯಲು ಸಾಧ್ಯವಾಗದೇ ತಮ್ಮನ್ನು ಚಿತ್ರದುರ್ಗ ಜೈಲಿಗೆ ವರ್ಗಾಯಿಸಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಇತ್ತ ಜಾಮೀನು ಸಿಗುತ್ತಿಲ್ಲ, ಅತ್ತ ದರ್ಶನ್​ ಜೊತೆ ಒಂದೇ ಸೆಲ್​ನಲ್ಲಿ ಇರಲಾಗುತ್ತಿಲ್ಲ. ದರ್ಶನ್​ ಜೊತೆ ಇನ್ನು ಸ್ವಲ್ಪ ದಿನ ಇದ್ದರೂ ನಾವು ಸತ್ತೇ ಹೋಗುತ್ತೇವೆ ಎಂದು ಅನುಕುಮಾರ್​ ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ ದರ್ಶನ್​ ಇರುವ ಸೆಲ್​ ಮೇಲೆ ಪೊಲೀಸರು ವಿಶೇಷ ನಿಗಾ ಇಟ್ಟಿದ್ದಾರೆ.

Darshan thoogudeepa new scandal in prison: Renukaswamy killer harassed fellow inmates

Exit mobile version