ಧರ್ಮೇಂದ್ರ- ಹೇಮಾ ಮಾಲಿನಿ ಪ್ರೇಮ ಕಹಾನಿ : ಪ್ರೀತಿ ಮದುವೆ ಆದ್ರೂ ಪ್ರತ್ಯೇಕವಾಗಿ ವಾಸವಾಗಿದ್ದೇಕೆ ?

Dharmendra – Hema Malini love story: ಬಾಲಿವುಡ್‌ ಖ್ಯಾತ ನಟ ಧರ್ಮೇಂದ್ರ ಹಾಗೂ ನಟಿ ಹೇಮಮಾಲಿನಿ ಪ್ರೇಮ ವಿವಾಹ ಇಂದಿಗೂ ಬಾಲಿವುಡ್‌ ಸಿನಿಮಾ ಜಗತ್ತಿನಲ್ಲಿ ಚರಿತ್ರೆಯಾಗಿ ಉಳಿದುಕೊಂಡಿದೆ. ಹೀ ಮ್ಯಾನ್‌ ಧರ್ಮೇಂದ್ರ ಹಾಗೂ ಡ್ರೀಮ್‌ ಗರ್ಲ್‌ ಹೇಮಮಾಲಿನಿ ವಿವಾಹ ಆ ಕಾಲದಲ್ಲಿ ದೊಡ್ಡಮಟ್ಟಿಗೆ ಸೌಂಡ್‌ ಮಾಡಿತ್ತು. ಮೊದಲೇ ಮದುವೆ ಆಗಿ ಮಕ್ಕಳಿದ್ದ ಧರ್ಮೇಂದ್ರ ಹೇಮಮಾಲಿನಿ ಪ್ರೀತಿಯಲ್ಲಿ ಬಿದ್ದಿದ್ದು ಹೇಗೆ ? ಪ್ರೀತಿಗಾಗಿ ಹಿಂದೂ ಧರ್ಮವನ್ನೇ ತೊರೆದಿದ್ದು ಯಾಕೆ ಅನ್ನೋ ಇಂಟರಸ್ಟಿಂಗ್‌ ಸ್ಟೋರಿ ಇಲ್ಲಿದೆ.

1970ರ ದಶಕದಲ್ಲಿ ಬಾಲಿವುಡ್‌ನಲ್ಲಿ ಪ್ರಖ್ಯಾತ ನಟರಾಗಿ ಹೆಸರುಗಳಿಸಿದ್ದವರು ನಟ ಧರ್ಮೇಂದ್ರ. ನಟ ಧರ್ಮೇಂದ್ರ ಜೊತೆಗೆ ತೆರೆ ಹಂಚಿಕೊಂಡಿದ್ದ ಡ್ರೀಮ್‌ ಗರ್ಲ್‌ ನಟಿ ಹೇಮಮಾಲಿನಿ ಆ ಕಾಲದ ಸೂಪರ್‌ ಹಿಟ್‌ ಜೋಡಿ ಆಗಿತ್ತು. ಧರ್ಮೇಂದ್ರ – ಹೇಮಮಾಲಿನಿ ನಟನೆಯ ಶೋಲೆ’, ‘ಸೀತಾ ಔರ್ ಗೀತಾ’, ‘ಚುಪ್ಕೆ ಚುಪ್ಕೆ’ ಮತ್ತು ‘ತುಮ್ ಹಸೀನ್ ಮೈ ಜವಾನ್’ ಸೂಪರ್‌ ಹಿಟ್‌ ಆಗಿದ್ದವು.

ತೆರೆಯ ಮೇಲೆ ಅಭಿಮಾನಿಗಳ ಪಾಲಿನ ಹಾಟ್‌ ಫೇವರೇಟ್‌ ಜೋಡಿಯಾಗಿದ್ದ ಧರ್ಮೇಂದ್ರ ಹಾಗೂ ಹೇಮಮಾಲಿನಿ ನಿಜ ಜೀವನದಲ್ಲಿಯೂ ಜೋಡಿಯಾಗೋದಕ್ಕೆ ಬಯಸಿದ್ದರು. ಹೇಮಮಾಲಿಯ ಸೌಂದರ್ಯಕ್ಕೆ ಮನಸೋತ ಧರ್ಮೇಂದ್ರ ಈಗಾಗಲೇ ಮದುವೆ ಆಗಿದ್ದರೂ ಕೂಡ ಡ್ರೀಮ್‌ ಗರ್ಲ್‌ಗೆ ಪ್ರೇಮ ನಿವೇಧನೆಯನ್ನು ಮಾಡಿಯೇ ಬಿಟ್ಟಿದ್ದರು.

ಧರ್ಮೇಂದ್ರ ಮಾತ್ರವಲ್ಲ ಹೀ ಮ್ಯಾನ್’ ವ್ಯಕ್ತಿತ್ವ, ಕರುಣೆ ಮತ್ತು ಆಕರ್ಷಕ ಸ್ವಭಾವಕ್ಕೆ ಹೇಮಾ ಮಾಲಿನಿ ಫಿದಾ ಆಗಿದ್ದರು. ಹೀಗಾಗಿಯೇ ಧರ್ಮೇಂದ್ರ ಅವರಿಗೆ ಮದುವೆಯಾಗಿ ಮಕ್ಕಳಿದ್ದರೂ ಕೂಡ ಹೇಮಮಾಲಿನಿ ಎರಡನೇ ಮದುವೆ ಆಗುವುದಕ್ಕೆ ಒಪ್ಪಿಗೆ ಸೂಚಿಸಿದ್ದರು.

ಧರ್ಮೇಂದ್ರ ಹೇಮಮಾಲಿನಿ ಪ್ರೀತಿಯಲ್ಲಿ ಬಿದ್ದಿದ್ದಾಗಲೇ ಹೇಮಮಾಲಿನಿ ಅವರಿಗೆ ಸಂಜೀವ ಕುಮಾರ್‌ ಹಾಗೂ ಜೀತೇಂದ್ರ ಅವರಿಂದ ಮದುವೆಯ ಪ್ರಸ್ತಾಪಗಳು ಬಂದಿತ್ತು. ಆದರೂ ಹೇಮಮಾಲಿನಿಗೆ ಧರ್ಮೇಂದ್ರ ಅವರನ್ನು ಬಿಟ್ಟು ಬೇರೆ ಯಾರನ್ನೂ ಮದುವೆ ಆಗೋದಕ್ಕೆ ಇಷ್ಟವಿರಲಿಲ್ಲ. ಅವರಿಬ್ಬರ ಪ್ರೀತಿ ಅಷ್ಟೊಂದು ಅಚಲವಾಗಿತ್ತು.

ಮೊದಲ ಪತ್ನಿಗೆ ವಿಚ್ಚೇಧನ ನೀಡದೇ 2ನೇ ಮದುವೆ …!

ಧರ್ಮೇಂದ್ರ ಅವರಿಗೆ ಹೇಮಾ ಮಾಲಿನಿಯವರನ್ನು ಮದುವೆಯಾಗಲು ಇದ್ದ ದೊಡ್ಡ ಅಡ್ಡಿಯೆಂದರೆ ಮೊದಲ ಪತ್ನಿ ಪ್ರಕಾಶ್ ಕೌರ್. ಧರ್ಮೇಂದ್ರ ಅವರು ಪ್ರಕಾಶ್‌ ಕೌರ್‌ ಅವರನ್ನು ಮದುವೆಯಾಗಿದ್ದು, ಅವರಿಗೆ ಸನ್ನಿ ಡಿಯೋಲ್, ಬಾಬಿ ಡಿಯೋಲ್, ವಿಜೇತಾ ಮತ್ತು ಅಜೇತಾ ಎಂಬ ಮಕ್ಕಳಿದ್ದರು.

ಧರ್ಮೇಂದ್ರ ಅವರು ತಮ್ಮ ಮೊದಲ ಪತ್ನಿ ಪ್ರಕಾಶ್ ಕೌರ್ ಅವರಿಗೆ ವಿಚ್ಛೇದನ ನೀಡಲು ಬಯಸಿದರು, ಆದರೆ ಪತ್ನಿ ಮದುವೆ ಆಗೋದಕ್ಕೆ ಒಪ್ಪಲಿಲ್ಲ. ಹಿಂದೂ ವಿವಾಹ ಕಾಯಿದೆಯ ಪ್ರಕಾರ, ಮೊದಲ ಪತ್ನಿ ವಿಚ್ಛೇದನ ನೀಡಲು ಒಪ್ಪದ ಹೊರತು ಎರಡನೇ ಮದುವೆಯಾಗುವುದು ಕಾನೂನುಬದ್ಧವಾಗಿ ಸಾಧ್ಯವಿರಲಿಲ್ಲ.

ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ಬೇರೆ ದಾರಿಯಿಲ್ಲದೆ, ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಇಬ್ಬರೂ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವ ಕಠಿಣ ನಿರ್ಧಾರ ತೆಗೆದುಕೊಂಡರು. ಇಸ್ಲಾಂ ಧರ್ಮದಲ್ಲಿ ಪುರುಷನಿಗೆ ನಾಲ್ಕು ಮದುವೆಗಳಿಗೆ ಅನುಮತಿ ಇರುವುದರಿಂದ, ಅವರು ತಮ್ಮ ಮೊದಲ ವಿವಾಹವನ್ನು ಮುರಿಯದೆ ಹೇಮಾ ಮಾಲಿನಿಯನ್ನು ಮದುವೆಯಾಗಲು ಸಾಧ್ಯವಾಯಿತು.

Also Read: Dharmendra Dies : ಬಾಲಿವುಡ್‌ನ ‘ಹೀ-ಮ್ಯಾನ್’ ಧರ್ಮೇಂದ್ರ ವಿಧಿವಶ – ಸುಳ್ಳು ಸುದ್ದಿ..!

ಹೇಮಮಾಲಿನಿ ಮದುವೆ ನಿಲ್ಲಿಸಿದ್ದ ಧರ್ಮೇಂದ್ರ

ಧರ್ಮೇಂದ್ರ ಅವರನ್ನು ಮದುವೆ ಆಗುವುದಕ್ಕೆ ಹೇಮಮಾಲಿನಿ ತಂದೆ-ತಾಯಿ ವಿರೋಧ ವ್ಯಕ್ತಪಡಿಸಿದ್ದರು. ಈ ಸಮಯದಲ್ಲಿ, ನಟ ಜೀತೇಂದ್ರ ಅವರ ಜೊತೆಗೆ ಹೇಮಾ ಮಾಲಿನಿಯ ವಿವಾಹವನ್ನು ತರಾತುರಿಯಲ್ಲಿ ನಿಶ್ಚಯಿಸಲಾಗಿತ್ತು. ಚೆನ್ನೈನಲ್ಲಿ ಹೇಮಾ ಹಾಗೂ ಜಿತೇಂದ್ರ ಮದುವೆ ನಡೆಯತ್ತಿದ್ದ ಸ್ಥಳಕ್ಕೆ ಕುಡಿದ ಮತ್ತಿನಲ್ಲಿ ಬಂದ ಧರ್ಮೇಂದ್ರ ರಾದ್ದಾಂತವನ್ನೇ ಮಾಡಿದ್ದರು.

ಮದುಮಗನ ಮುಂದೆಯೇ ಧರ್ಮೇಂದ್ರ, ಹೇಮಮಾಲಿನಿ ಬಳಿಯಲ್ಲಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದರು. ನಂತರ ಜಿತೇಂದ್ರ ಅವರನ್ನು ಮನವೊಲಿಸಿ ಹೇಮಮಾಲಿನಿ ಅವರನ್ನು ಮದುವೆ ಆಗಿದ್ದರು.

ಹೇಮಮಾಲಿನಿ ಮದುವೆ ಮನೆಯಲ್ಲಿ ಹೈಡ್ರಾಮಾವೇ ನಡೆದು ಹೋಗಿತ್ತು. ಆದರೆ ಹೇಮಮಾಲಿನಿ ಅವರ ನಿರ್ಧಾರ ಅಚಲವಾಗಿತ್ತು. ಧರ್ಮೇಂದ್ರ ಪ್ರೇಮ ಹೋರಾಟದ ಫಲವಾಗಿ, ಹೇಮಮಾಲಿನಿ ಕೊನೆಯ ಕ್ಷಣದಲ್ಲಿ ಜಿತೇಂದ್ರ ಅವರ ಮದುವೆಯನ್ನು ನಿಲ್ಲಿಸಿ, ಕೊನೆಗೆ ಧರ್ಮೇಂದ್ರ ಅವರನ್ನು ಮದುವೆ ಆದ್ರು.

Also Read: ಅಮೃತವರ್ಷಿಣಿ ನಟಿ ರಜಿನಿ ಹಾಗೂ ಟ್ರೈನರ್ ಅರುಣ್‌ ಮದುವೆ: ಹೊಸ ಬಾಳಿಗೆ ಕಾಲಿಟ್ಟ ಜೋಡಿ!

ಇಸ್ಲಾಂ, ಅಯ್ಯಂಗಾರ್‌ ಪದ್ದತಿಯಲ್ಲಿ ಮದುವೆ..!

ಸಾಕಷ್ಟು ನಾಟಕೀಯ ತಿರುವುಗಳ ನಂತರ 1980ರ ದಶಕದಲ್ಲಿ ಹೇಮಮಾಲಿನಿ ಹಾಗೂ ಧರ್ಮೇಂದ್ರ ಇಸ್ಲಾಂ ಧರ್ಮದ ಪ್ರಕಾರ ರಹಸ್ಯವಾಗಿ ಮದುವೆ ಆಗಿದ್ದರು. ನಂತರ ಹೇಮಾ ಮಾಲಿನಿಯ ಸಂಪ್ರದಾಯದಂತೆ ಅಯ್ಯಂಗಾರ್ ಪದ್ಧತಿಯಲ್ಲಿ ಮದುವೆ ಆದ್ರು.

ಹೇಮಾಮಾಲಿನಿ ಹಾಗೂ ಧರ್ಮೇಂದ್ರ ಮದುವೆ ಆದ ನಂತರದಲ್ಲಿ ತಮ್ಮ ಮೊದಲ ಪತ್ನಿ ತನ್ನ ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದರು. ನಟಿ ಹೇಮಮಾಲಿನಿ ತನ್ನ ಇಬ್ಬರು ಹೆಣ್ಣು ಮಕ್ಕಳಾದ ಇಶಾ ಹಾಗೂ ಅಹಾನಾ ಡಿಯೋಲಾ ಅವರ ಜೊತೆಯಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದರು.

ನಟ ಧರ್ಮೇಂದ್ರ ಹಾಗೂ ಹೇಮಮಾಲಿನಿ ಪ್ರೇಮ ಕಹಾನಿ ಇಂದಿಗೂ ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ. ಸಿನಿಮಾ ರಂಗದಲ್ಲಿ ಇಬ್ಬರ ಪ್ರಮಕಥೆ ಮಹಾಕಾವ್ಯವಾಗಿದೆ.

Exit mobile version