Dharmendra Dies : ಬಾಲಿವುಡ್‌ನ ‘ಹೀ-ಮ್ಯಾನ್’ ಧರ್ಮೇಂದ್ರ ವಿಧಿವಶ – ಸುಳ್ಳು ಸುದ್ದಿ..!

Dharmendra Dies : ಬಾಲಿವುಡ್‌ನ ದಿಗ್ಗಜ ನಟ, ‘ಹೀ-ಮ್ಯಾನ್’ ಎಂದೇ ಪ್ರಖ್ಯಾತರಾಗಿದ್ದ ಧರ್ಮೇಂದ್ರ (ಧರಂ ಸಿಂಗ್ ಡಿಯೋಲ್) ಅವರು ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಆರು ದಶಕಗಳಿಗೂ ಹೆಚ್ಚು ಕಾಲ ಹಿಂದಿ ಚಿತ್ರರಂಗವನ್ನು ಆಳಿದ ಈ ಮಹಾನ್ ನಟನ ಅಗಲಿಕೆಗೆ ಇಡೀ ದೇಶ ಕಂಬನಿ ಮಿಡಿಯುತ್ತಿದೆ. ಆದರೆ ಇದು ಸುಳ್ಳು ಸುದ್ದಿ ಎಂದು ಕುಟುಂಬದ ಮೂಲಗಳು ಸ್ಪಷ್ಟಪಡಿಸಿವೆ.

ಹಿರಿಯ ನಟ ಧರ್ಮೇಂದ್ರ ಅವರು ಕಳೆದ ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯ ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು.ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆರೋಗ್ಯ ಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದ್ದರಿಂದ, ಕೆಲ ಕಾಲ ಅವರನ್ನು ವೆಂಟಿಲೇಟರ್ ಮೂಲಕ ತೀವ್ರ ನಿಗಾ ಘಟಕದಲ್ಲಿ (ICU) ಇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಅಸುನೀಗಿದ್ದಾರೆ. ಎನ್ನಲಾಗುತ್ತಿದೆ. ಧರ್ಮೇಂದ್ರ ಅವರ ಪುತ್ರರಾದ ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಹಾಗೂ ಪತ್ನಿ ಹೇಮಾ ಮಾಲಿನಿ ಸೇರಿದಂತೆ ಇಡೀ ಕುಟುಂಬ ಆಸ್ಪತ್ರೆಯಲ್ಲಿದೆ.

300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಧರ್ಮೇಂದ್ರ

ನಟ ಧರ್ಮೇಂದ್ರ ಅವರು 300ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ರೊಮ್ಯಾಂಟಿಕ್ ಹೀರೋ, ಹಾಸ್ಯ ನಟ, ಮತ್ತು ಆಕ್ಷನ್ ಹೀರೋ ಹೀಗೆ ಎಲ್ಲಾ ಬಗೆಯ ಪಾತ್ರಗಳಲ್ಲಿಯೂ ಮಿಂಚಿದ ಬಹುಮುಖ ಪ್ರತಿಭೆ.

ಶೋಲೆ (Sholay – 1975): ವೀರಪ್ಪನ (ವೀರೇಂದ್ರ) ಹೆಚ್ಚು ಪ್ರಖ್ಯಾತಿಯನ್ನು ತಂಡ ಕೊಟ್ಟ ಸಿನಿಮಾ. ನಂತರ ಸೀತಾ ಔರ್ ಗೀತಾ (Seeta Aur Geeta – 1972), ಚುಪ್ಕೆ ಚುಪ್ಕೆ (Chupke Chupke – 1975): (ಹಾಸ್ಯ ಚಿತ್ರ), ಯಾದೋಂ ಕಿ ಬಾರಾತ್ (Yaadon Ki Baaraat – 1973)ಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ : ಆಮೃತವರ್ಷಿಣಿ ನಟಿ ರಜನಿ ಹಾಗೂ ಟ್ರೈನರ್‌ ಅರುಣ್‌ ಮದುವೆ : ಹೊಸ ಬಾಳಿಗೆ ಕಾಲಿಟ್ಟ ಜೋಡಿ

ಅಲ್ಲದೇ ಮೇರಾ ಗಾಂವ್ ಮೇರಾ ದೇಶ್ (Mera Gaon Mera Desh – 1971), ಪ್ರತಿಗ್ಯಾ (Pratiggya – 1975), ಧರಮ್ ವೀರ್ (Dharam Veer – 1977), ಫೂಲ್ ಔರ್ ಪತ್ತರ್ (Phool Aur Patthar – 1966), ದಿಲ್ ಭಿ ತೇರಾ ಹಮ್ ಭಿ ತೇರೆ (Dil Bhi Tera Hum Bhi Tere – 1960), ರೊಮ್ಯಾಂಟಿಕ್ ಹಿಟ್ಸ್: ಆಯೇ ದಿನ್ ಬಹಾರ್ ಕೆ, ಆಂಖೇಂ, ಮೇರೆ ಹಮ್‌ದಮ್ ಮೇರೆ ದೋಸ್ತ್, ಇತ್ತೀಚಿನ ಚಿತ್ರಗಳು: ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ (2023) ಮತ್ತು ತೇರಿ ಬಾತೋಂ ಮೇ ಐಸಾ ಉಲ್ಝಾ ಜಿಯಾ (2024).

ಜಮೀನ್ದಾರ್‌ ವಂಶಸ್ಥರು ನಟ ಧರ್ಮೇಂದ್ರ

ಧರಂ ಸಿಂಗ್ ಡಿಯೋಲ್ (Dharam Singh Deol), ಡಿಸೆಂಬರ್ 8, 1935. ನಸ್ರಾಲಿ ಗ್ರಾಮ, ಪಂಜಾಬ್ (ಆಗಿನ ಬ್ರಿಟಿಷ್ ಭಾರತ) ನಲ್ಲಿ ಜನಿಸಿದ್ದರು. ಮೂಲತಃ ಅವರು ಜಮೀನ್ದಾರ ಕುಟುಂಬದಿಂದ ಬಂದವರು. ಅವರ ತಂದೆ ಕೇವಲ್ ಕೃಷ್ಣ ಸಿಂಗ್ ಡಿಯೋಲ್ ಅವರು ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದರು.

ಚಿಕ್ಕ ವಯಸ್ಸಿನಿಂದಲೇ ನಟನೆಯ ಮೇಲೆ ಆಸಕ್ತಿ ಹೊಂದಿದ್ದ ಅವರು, ಫಿಲ್ಮ್‌ಫೇರ್‌ನ ಹೊಸ ಪ್ರತಿಭೆಗಳ ಸ್ಪರ್ಧೆಯಲ್ಲಿ ಗೆದ್ದು ಮುಂಬೈಗೆ ಬಂದು ತಮ್ಮ ಚಲನಚಿತ್ರ ವೃತ್ತಿಜೀವನವನ್ನು 1960 ರಲ್ಲಿ ಆರಂಭಿಸಿದರು. 2012 ರಲ್ಲಿ ಅವರಿಗೆ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ನೀಡಿ ಗೌರವಿಸಲಾಯಿತು.

ಇದನ್ನೂ ಓದಿ : ನಟ ಉಗ್ರಂ ಮಂಜು ಬಾಳಿಗೆ ಕಾಲಿಟ್ಟ ಸಂಧ್ಯಾ : ಹೊಸ ಜೀವನಕ್ಕೆ ಮುನ್ನುಡಿ

ಹೇಮಮಾಲಿನಿ ಮದುವೆ ಆಗಿದ್ದ ಧರ್ಮೇಂದ್ರ

ಪ್ರಕಾಶ್ ಕೌರ್ (1954 ರಲ್ಲಿ ವಿವಾಹ) ಅವರು ಧರ್ಮೇಂದ್ರ ಅವರು ಮದುವೆ ಆಗಿದ್ದರು. ಅವರಿಗೆ ಸನ್ನಿ ಡಿಯೋಲ್, ಬಾಬಿ ಡಿಯೋಲ್ (ನಟರು), ವಿಜೇತಾ ಡಿಯೋಲ್ ಮತ್ತು ಅಜೇತಾ ಡಿಯೋಲ್ ಅನ್ನೋ ಮಕ್ಕಳಿದ್ದರು. ನಂತರ 1980ರಲ್ಲಿ ನಟಿ ಹೇಮಮಾಲಿನಿ ಅವರನ್ನು ವಿವಾಹ ಆದ್ರು.

ಧರ್ಮೇಂದ್ರ ಹಾಗೂ ಹೇಮಮಾಲಿನಿ ದಂಪತಿಗಳಿಗೆ ಈಶಾ ಡಿಯೋಲ್ ಮತ್ತು ಅಹಾನಾ ಡಿಯೋಲ್ ಅನ್ನೋ ಮಕ್ಕಳಿದ್ದಾರೆ. ಇಬ್ಬರೂ ಕೂಡ ಬಾಲಿವುಡ್‌ ನಟಿಯರಾಗಿ ಗುರುತಿಸಿಕೊಂಡಿದ್ದಾರೆ. ಧರ್ಮೇಂದ್ರ ಅವರ ನಿಧನದಿಂದ ಹಿಂದಿ ಚಿತ್ರರಂಗದ ಒಂದು ಸುವರ್ಣ ಯುಗವು ಅಂತ್ಯಗೊಂಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.

Dharmendra Death Bollywood Actor Dharmendra Dies 89

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories