ಈ ವಾರ ಡಬಲ್ ಎಲಿಮಿನೇಷನ್, ಬಿಗ್ ಬಾಸ್ ಮನೆಯಿಂದ ಧ್ರುವಂತ್ ಔಟ್!

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋನಲ್ಲಿ (Bigg Boss Kannada 12) ಇಂದು ಡಬಲ್ ಎಲಿಮಿನೇಷನ್ ನಡೆಯಲಿದೆ. ಈ ವಾರ ಕಿಚ್ಚ ಸುದೀಪ್ ನಿರೂಪಣೆ (Kiccha Sudeepa) ಮಾಡುತ್ತಿಲ್ಲ. ಬದಲಿಗೆ ಯಾವ ರೀತಿ ಎಲಿಮಿನೇಷನ್ ಆಗುತ್ತೆ? ಯಾರು ಯಾರು ಮನೆಯಿಂದ ಹೊರಗೆ ಬರ್ತಾರೆ ಅನ್ನೋ ಕುತೂಹಲ ಇದ್ರೆ ಈ ಸ್ಟೋರಿ ಮಿಷ್ ಮಾಡ್ದೇ ಓದಿ.

ಕಿಚ್ಚನ ನಿರೂಪಣೆ ಇಲ್ಲ
ಎಷ್ಟೋ ಜನ ಬಿಗ್ ಬಾಸ್ ಶೋ ಅನ್ನು ಕಿಚ್ಚ ಸುದೀಪ್ ಅವರಿಗಾಗಿ ನೋಡ್ತಾರೆ. ಅವರು ಬಂದು ಸ್ಪರ್ಧಿಗಳ ಸರಿ, ತಪ್ಪು, ಹೇಳಿ ನಗಿಸಿ, ಬೈಯ್ದು ಬುದ್ದಿ ಹೇಳ್ತಾರೆ. ಆದ್ರೆ ಈ ವಾರ ಅದು ಮಿಸ್ ಆಗಲಿದೆ. ಮಾರ್ಕ್ ಚಿತ್ರದ ಪ್ರಮೋಷನ್ ಇರುವ ಕಾರಣ ನಿರೂಪಣೆ ಮಾಡ್ತಾ ಇಲ್ಲ.

ಡಬಲ್ ಎಲಿಮಿನೇಷನ್
ಅಲ್ಲದೇ ಕಳೆದ 2 ವಾರಗಳಿಂದ ಎಲಿಮಿನೇಷನ್ ನಡೆದಿಲ್ಲ. ಅದಕ್ಕೆ ಈ ವಾರ ಡಬಲ್ ಎಲಿಮಿನೇಷನ್ ನಡೆಯಲಿದೆ. ಮನೆಯ ಸ್ಪರ್ಧಿಗಳಿಗೆ ಬಿಗ್ ಬಾಸ್ ಈ ವಿಷಯ ತಿಳಿಸಿದ್ದಾರೆ. ಕಾವ್ಯ ಬಿಟ್ಟು ಎಲ್ಲರೂ ನಾಮಿನೇಟ್ ಆಗಿದ್ದಾರೆ. ಅದಕ್ಕೆ ಎಲ್ಲರಿಗೂ ಭಯ ಶುರುವಾಗಿದೆ.

ನೆಚ್ಚಿನ ತಾರೆಯರ ಆಗಮನ
ಇನ್ನು ಕಿಚ್ಚ ಸುದೀಪ್ ಬರದ ಕಾರಣ ಬೇರೆ ತಾರೆಯರು ಬಂದು ಎಲಿಮಿನೇಷನ್ ನಡೆಸಿಕೊಡಲಿದ್ದಾರೆ. ಬಿಗ್ ಬಾಸ್ ಮನೆಗೆ ಭಾಗ್ಯ ಲಕ್ಷ್ಮಿ ಧಾರಾವಾಹಿಯ ಭಾಗ್ಯ ಮತ್ತು ತಾಂಡವ್ ಬಂದಿದ್ದಾರೆ. ನಂತರ ಜೋಗಿ ಪ್ರೇಮ್ ಬಂದಿದ್ದಾರೆ.

ಕೊನೆಯಲ್ಲಿ ಉಳಿದ ಮೂವರು
ಮನೆಯ ಸ್ಪರ್ಧಿಗಳಿಗೆ ಕಾಲ ಕಾಲಕ್ಕೆ ಚಟುವಟಿಕೆಗಳನ್ನು ನೀಡಿ ಯಾರು ಸೇಫ್, ಯಾರು ಡೇಂಜರ್ ಎಂದು ಹೇಳಲಾಗಿದೆ. ಎಲ್ಲಾ ಚಟುವಟಿಕೆಗಳು ಮುಗಿದ ಮೇಲೆ. ಧ್ರುವಂತ್, ಸ್ಪಂದನಾ, ಸೂರಜ್ ಉಳಿದಿದ್ದಾರೆ.

ಇದನ್ನೂ ಓದಿ: ರಾಜೀವ್ ಗಾಂಧಿ ವಸತಿ ಯೋಜನೆ: ಅತಿ ಕಡಿಮೆ ಹಣಕ್ಕೆ ಸ್ವಂತ ಮನೆಗಾಗಿ ಈಗಲೇ ಅರ್ಜಿ ಹಾಕಿ

ಧ್ರುವಂತ್ ಔಟ್
ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಪ್ರೋಮೋ ಪ್ರಕಾರ ಧ್ರುವಂತ್ ಔಟ್ ಆಗಿದ್ದಾರೆ. ಸೂರಜ್ ಮತ್ತು ಸ್ಪದಂನಾ ಸೇಫ್ ಆಗಿದ್ದಾರೆ. ಆದರೆ ಇದು ಮೊದಲ ಎಲಿಮಿನೇಷನ್. ಮತ್ತೆ ಇನ್ನೊಬ್ಬರು ಸಹ ಔಟ್ ಆಗಲಿದ್ದಾರೆ. ಯಾರು ಅಂತ ಕಾದು ನೋಡಬೇಕಿದೆ.

Exit mobile version