ಗಾಡ್ಜಿಲ್ಲಾ vs ಕಾಂಗ್ (godzilla vs kong)ಸಿನಿಮಾದ ಮೂಲಕ ವಿಶ್ವದಾದ್ಯಂತ ಮನೆ ಮಾತಾಗಿದ್ದ ಹಾಲಿವುಡ್ ನಟಿ ಕೇಲೀ ಹಾಟಲ್ (kaylee hottle) ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಮಾನ್ಸ್ಟರ್ ವರ್ಸ್ ಸಿನಿಮಾದ ಜಿಯಾ ಪಾತ್ರದ ಮೂಲಕ ಪ್ರೇಕ್ಷಕರನ್ನು ಗೆದ್ದ 18 ವರ್ಷದ ನಟಿ ಇದೀಗ ಮೇರಿಲ್ಯಾಂಡ್ನಲ್ಲಿ ನಡೆದ ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ.
ಹಾಲಿವುಡ್ (Hollywood) ನ ಗಾಡ್ಜಿಲ್ಲಾ vs ಕಾಂಗ್ ಸಿನಿಮಾದಲ್ಲಿ ತನ್ನ ಅಭಿನಯದ ಮೂಲಕವೇ ಎಲ್ಲರ ಮನಗೆದ್ದಿದ್ದ ನಟಿ ಕೇಲೀ ಹಾಟಲ್ ಅವರು ಮೇರಿಲ್ಯಾಂಡ್ನಲ್ಲಿ ನಡೆದ ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ. ಕೇವಲ 18 ವರ್ಷ ಪ್ರಾಯದಲ್ಲಿಯೇ ತನ್ನ ನಟನಾ ಕೌಶಲ್ಯದ ಮೂಲಕ ವಿಶ್ವದ ಗಮನ ಸೆಳೆದಿದ್ದ ನಟಿ ಕೈಲಿ ಹಾಟಲ್ ಲಕ್ಷಾಂತರ ಅಭಿಮಾನಿಗಳನ್ನು ಅಗಲಿದ್ದಾರೆ.
ಅಮೇರಿಕನ್ ಸೈನ್ ಭಾಷೆಯಲ್ಲಿ ಕಾಂಗ್ ಜೊತೆ ವಿಶಿಷ್ಟ ಬಾಂಧವ್ಯವನ್ನು ಹಂಚಿಕೊಂಡ ಕಿವುಡ ಅನಾಥ ಜಿಯಾ ಅವರ ಪಾತ್ರವು ಮಾನ್ಸ್ಟರ್ವರ್ಸ್ ಸಿನಿಮಾಗಳಿಗೆ ಹೆಚ್ಚಿನ ಜನಮನ್ನಣೆಯನ್ನು ತಂದುಕೊಟ್ಟಿತ್ತು. ಅಲ್ಲದೇ ಕೇಲೀ ಅವರ ಅಭಿನಯವನ್ನು ಅನೇಕರು ಪ್ರಶಂಸಿದ್ದಾರೆ.
ಮಂಗಳವಾರ ಮುಂಜಾನೆ ಅವರು ಮೇರಿಲ್ಯಾಂಡ್ನ ಫ್ರೆಡೆರಿಕ್ಕೌಂಟಿಯಲ್ಲಿ ನಡೆದ ವಾಹನ ಅಪಘಾತದಲ್ಲಿ ಅವರು ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಸ್ಥಳೀಯ ಅಧಿಕಾರಿಗಳ ಪ್ರಕಾರ, ನಟಿ ಕೇಲಿ ಹಾಟಲ್ ಪ್ರಯಾಣಿಸುತ್ತಿದ್ದ ಕಾರು ರಸ್ತೆಯನ್ನು ಬಿಟ್ಟು ಕಲ್ವರ್ಟ್ಗೆ ಡಿಕ್ಕಿ ಹೊಡೆದಿದೆ.
ಕೂಡಲೇ ತುರ್ತು ರಕ್ಷಣಾ ಪಡೆ ಸ್ಥಳಕ್ಕೆ ಆಗಮಿಸಿ ನಟಿ ಕೇಲೀ ಅವರನ್ನು ಹತ್ತಿರದಲ್ಲಿರುವ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಅವರು ಬದುಕಿ ಉಳಿಯಲಿಲ್ಲ. ಅಲ್ಲದೇ ಕಾರು ಚಾಲಕನಾಗಿದ್ದ 19 ವರ್ಷದ ಯುವಕನಿಗೂ ಗಂಭೀರವಾದ ಗಾಯಗಳಾಗಿವೆ, ಆದರೆ ಕಾರಿನಲ್ಲಿದ್ದ ಮತ್ತೊಬ್ಬ ಯುವಕನಿಗೆ ಯಾವುದೇ ಗಾಯವಾಗಿಲ್ಲ ಎಂದು ಮೇರಿಲ್ಯಾಂಡ್ನ ಫ್ರೆಡರಿಕ್ ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಕೇಲೀ ಹಾಟಲ್ ಅವರ ಜೋಶುವಾ ಹಾಟಲ್ ಅವರು ಮಗಳ ಸಾವಿಗೆ ಕಂಬನಿ ಮಿಡಿದಿದ್ದಾರೆ. ಫೇಸ್ಬುಕ್ ಲೈವ್ ಸ್ಟ್ರೀಮ್ನಲ್ಲಿ ಈ ಕುರಿತು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಲ್ಯದಲ್ಲಿಯೇ ಹಾಲಿವುಡ್ಗೆ ಎಂಟ್ರಿ ಕೊಟ್ಟಿದ್ದ ಕೀಲೀ ತನ್ನ ನಟನೆಯ ಮೂಲಕವೇ ಪ್ರೇಕ್ಷಕರ ಗಮನ ಸೆಳೆದಿದ್ದರು.
ಕೇಲೀ ಹಾಟಲ್ (kaylee hottle)ಹಾಲಿವುಡ್ ಜರ್ನಿ
ಕೇಲಿ ಹಾಟೆಲ್ಅವರು 2021 ರ ಗಾಡ್ಜಿಲ್ಲಾ ವರ್ಸಸ್ ಕಾಂಗ್ ಸಿನಿಮಾ ಮೂಲಕ ನಟಿಯಾಗಿ ಎಂಟ್ರಿ ಕೊಟ್ಟಿದ್ದರು. ಅವರು ಸಿನಿಮಾದಲ್ಲಿ ಜಿಯಾ ಪಾತ್ರದಲ್ಲಿ ಮಿಂಚಿದ್ದರು. ಚೊಚ್ಚ ಸಿನಿಮಾದಲ್ಲಿಯೇ ರೆಬೆಕ್ಕಾ ಹಾಲ್, ಅಲೆಕ್ಸಾಂಡರ್ ಸ್ಕಾರ್ಸ್ಗಾರ್ಡ್ ಮತ್ತು ಮಿಲ್ಲಿ ಬಾಬಿ ಬ್ರೌನ್ ಅವರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದರು. ಅಲ್ಲದೇ ಅವರ ಅಭಿನಯಕ್ಕೆ ಎಲ್ಲೆಡೆಯಿಂದಲೂ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು, 2024 ರಲ್ಲಿ ಗಾಡ್ಜಿಲ್ಲಾ x ಕಾಂಗ್: ದಿ ನ್ಯೂ ಎಂಪೈರ್ ಚಿತ್ರದಲ್ಲಿ ಮತ್ತೆ ನಟಿಸಲು ಮರಳಿದರು.
ಯುವ ತಾರೆಯ ನಿಧನಕ್ಕೆ ಶ್ರದ್ದಾಂಜಲಿಯ ಮಹಾಪೂರ
ಕೇಲೀ ಹಾಟೆಲ್ ಅವರ ನಿಧನದ ಸುದ್ದಿ ಇದೀಗ ಕೇಳುತ್ತಿದ್ದಂತೆಯೇ ಲಕ್ಷಾಂತರ ಮಂದಿ ಶ್ರದ್ದಾಂಜಲಿಯನ್ನು ಅರ್ಪಿಸುತ್ತಾ, ಕಂಬನಿ ಮಿಡಿಯುತ್ತಿದ್ದಾರೆ. ಟೆಕ್ಸಾಸ್ ಸ್ಕೂಲ್ ಫಾರ್ ದಿ ಡೆಫ್ ಅವರ ನಿಧನವನ್ನು ಹೃದಯವಿದ್ರಾವಕ ನಷ್ಟ ಎಂದು ಬಣ್ಣಿಸಿದೆ. ಮಿಲ್ಲಿ ಬಾಬಿ ಬ್ರೌನ್, ಆಸ್ಕರ್ ವಿಜೇತ ಮಾರ್ಲೀ ಮ್ಯಾಟ್ಲಿನ್ ಮತ್ತು ಟ್ರಾಯ್ ಕೋಟ್ಸುರ್ ಸೇರಿದಂತೆ ಹಲವು ನಟರು ಶ್ರದ್ದಾಂಜಲಿ ಅರ್ಪಿಸಿದ್ದಾರೆ.
Godzilla vs kong actress Kaylee hottle death car accident at age 18
