ಮಾಲ್ಡಿವ್ಸ್ ಬೀಚ್ನಲ್ಲಿ ಮಾನುಷಿ ಚಿಲ್ಲರ್ IMAGE CREDIT : manushi_chhillar
ಕೊರೋನಾ ಅಲೆಯ ಭೀತಿ ಕಡಿಮೆಯಾಗುತ್ತಿದ್ದಂತೆ ಹಾಗೂ ಲಾಕ್ ಡೌನ್ ತೆರವಾಗುತ್ತಿದ್ದಂತೆ ಕಳೆದೆರಡು ವರ್ಷದಿಂದ ಮನೆಯಲ್ಲೇ ಲಾಕ್ ಆಗಿದ್ದ ಸೆಲೆಬ್ರೆಟಿಗಳು ತಮ್ಮ ನೆಚ್ಚಿನ ತಾಣಕ್ಕೆ ಲಗ್ಗೆ ಇಡುತ್ತಿದ್ದಾರೆ. ಇದಕ್ಕೆ ನಟಿ ಹಾಗೂ ವಿಶ್ವ ಸುಂದರಿ ಮಾನ್ಸಿ ಚಿಲ್ಲರ್ ಕೂಡ ಹೊರತಲ್ಲ. ಸದ್ಯ ರಿಲ್ಯಾಕ್ಸ್ ಮೂಡ್ ನಲ್ಲಿರೋ ಮಾನುಷಿ ಚಿಲ್ಲರ್ ವೆಕೆಶನ್ ಹಾಟ್ ಸ್ಪಾಟ್ ಮಾಲ್ಡೀವ್ಸ್ ಗೆ ಹಾರಿದ್ದಾರೆ. ಸಮುದ್ರದ ಆಳವೂ ಕಾಣಿಸುವಂತ ಸ್ವಚ್ಛ ತಿಳಿನೀರಿನ ಮಾಲ್ಡೀವ್ಸ್ ಕಡಲ ತೀರದಲ್ಲಿ ಮಾನುಷಿ ಮೈಚೆಲ್ಲಿ ದೇಹಸಿರಿ ಪ್ರದರ್ಶಿಸುತ್ತ ಅಭಿಮಾನಿಗಳ ನಿದ್ದೆ ಕದ್ದಿದ್ದಾರೆ.
ಮೂಲತಃ ಮಾಡೆಲ್ ಆಗಿರೋ ಮಾನುಷಿ ಚಿಲ್ಲರ್ 2017 ರಲ್ಲಿ ವಿಶ್ವಸುಂದರಿ ಕಿರೀಟ್ ಮುಡಿಗೇರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಫೆಮಿನಾ ಮಿಸ್ ಇಂಡಿಯಾ ಕಿರೀಟ ವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಸದಾ ಇನ್ ಸ್ಟಾಗ್ರಾಂನಲ್ಲಿ ಅಕ್ಟಿವ್ ಆಗಿರೋ ಮಾನುಷಿ ಚಿಲ್ಲರ್ ಮಾಲ್ಡೀವ್ಸ್ ಭೇಟಿಯ ಪೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮಾಲ್ಡೀವ್ ಪೋಟೋ ಗಳಿಗೆ ಸಖತ್ ಟ್ಯಾಗ್ ಲೈನ್ ನೀಡಿರುವ ಮಾನುಷಿ, ಇಂಟರಕಾಂಟಿನೆಂಟಲ್ ಮಾಲ್ಡೀವ್ಸ್ ಮಾಮುನಗವ್ ರೆಸಾರ್ಟ್ ನಲ್ಲಿ ಮಾನುಷಿ ವಾಸ್ತವ್ಯ ಹೂಡಿದ್ದಾರಂತೆ.
ಕೇವಲ ಮಾಲ್ಡೀವ್ಸ್ ಮಾತ್ರವಲ್ಲ ಪ್ಯಾರೀಸ್ ಗೂ ತೆರಳಿರುವ ಮಾನುಷಿ ಅಲ್ಲಿಯೂ ಸಖತ್ ಸುತ್ತಾಡಿದ್ದಾರೆ. ಐಫೆಲ್ ಟವರ್ ಬಳಿ ಪೋಟೋ ತೆಗೆಸಿಕೊಂಡು ಶೇರ್ ಮಾಡಿದ್ದಾರೆ.
ವೃತ್ತಿಪರ ವೈದ್ಯರ ಕುಟುಂಬದಿಂದ ಬಂದಿರೋ ಮಾನುಷಿ ಚಿಲ್ಲರ್ ಕೂಡ ಎಂಬಿಬಿಸ್ ಪದವಿ ಪಡೆದಿದ್ದು, ಇಂಗ್ಲೀಷ್, ಹಿಂದಿ ಹಾಗೂ ಹರಿಯಾಣಿ ಭಾಷೆಯಲ್ಲಿ ಪರಿಣಿತಿ ಪಡೆದಿದ್ದಾರೆ.
ಇದನ್ನೂ ಓದಿ : ನಿಕ್ಕಿ ಮೈಮಾಟಕ್ಕೆ ಮನಸೋತ ಫ್ಯಾನ್ಸ್: ಸೋಷಿಯಲ್ ಮೀಡಿಯಾದಲ್ಲಿ ಕಾಂಚನಾ ಬೆಡಗಿ ಹವಾ
ಪ್ರಥ್ವಿರಾಜ್ ಸಿನಿಮಾದಲ್ಲಿ ಮಾನುಷಿ ಬಣ್ಣ ಹಚ್ಚಿದ್ದು ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಮಧ್ಯೆ 2022 ರಲ್ಲಿ ಎರಡು ಸಿನಿಮಾಗೆ ಮಾನುಷಿ ಸಹಿಹಾಕಿದ್ದು ಸಿನಿಮಾ ನಿರ್ಮಾಣ ಹಂತದಲ್ಲಿದೆ. ಸೋಷಿಯಲ್ ಮೀಡಿಯಾದಲ್ಲಿ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಮಾನುಷಿ ಚಿಲ್ಲರ್ ಬಿಕನಿ ಪೋಟೋ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ : ಫರ್ಸ್ಟ್ ನೈಟ್ ನಲ್ಲಿ ಏನು ಮಾಡ್ತಾರೇ? ಅದನ್ನೇ ಸಿನಿಮಾದಲ್ಲಿ ಮಾಡಿದ್ದೇವೆ: ರಚಿತಾ ಬೋಲ್ಡ್ ಆನ್ಸರ್
ಇದನ್ನೂ ಓದಿ : ಸೋಷಿಯಲ್ ಮೀಡಿಯಾದಲ್ಲಿ ಮೌನಿರಾಯ್ ಹವಾ: ಕೆಜಿಎಫ್ ಬೆಡಗಿ ಟ್ರೆಡಿಶನಲ್ ಲುಕ್ ವೈರಲ್
(Manushi Chhillar Looks Uber-Hot In Bikini in Diva’s Maldives Beach)
This post was last modified on ನವೆಂಬರ್ 10, 2021 11:14 ಅಪರಾಹ್ನ
This website uses cookies.