Samantha Raj nidimoru : ನಿರ್ದೇಶಕ ರಾಜ್​ ನಿಡಿಮೋರು ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಸಮಂತಾ : Photo Viral

ಬಹುಭಾಷಾ ನಟಿ ಸಮಂತಾ ರುತ್​ ಪ್ರಭು (Samantha Ruth Prabhu) ಎರಡನೇ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ನಿರ್ದೇಶಕ ರಾಜ್​ ನಿಡಿಮೋರು (Raj nidimoru) ಜೊತೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದ ನಟಿ ಸಮಂತಾ ಇದೀಗ ಅವರೊಂದಿಗೆ ಹೊಸ ಬಾಳಿಗೆ ನಾಂದಿ ಹಾಡಿದ್ದಾರೆ.

ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಈಶಾ ಫೌಂಡೇಶನ್​ನ ಲಿಂಗ ಭೈರವಿ ದೇವಸ್ಥಾನದಲ್ಲಿ ಸಮಂತಾ ಹಾಗೂ ರಾಜ್​ ನಿಡಿಮೋರು ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.. ಭಾನುವಾರ ಸಂಜೆಯೇ ಕೊಯಮತ್ತೂರಿಗೆ ಆಗಮಿಸಿದ ಈ ಜೋಡಿ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ.

ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮದುವೆಯ ಫೋಟೋ ಹಂಚಿಕೊಳ್ಳುವ ಮೂಲಕ ಈ ವಿಚಾರವನ್ನು ಸಮಂತಾ ಹಾಗೂ ರಾಜ್​ ಸಾರ್ವಜನಿಕಗೊಳಿಸಿದ್ದಾರೆ. ಈ ಜೋಡಿ 2024ರಿಂದ ರಿಲೇಷನ್​ಶಿಪ್​ನಲ್ಲಿತ್ತು ಎನ್ನಲಾಗಿದೆ.

ಸಮಂತಾ ರುತ್​ ಪ್ರಭು ಕೆಂಪು ಬಣ್ಣದ ಸೀರೆಯಲ್ಲಿ ಕಂಗೊಳಿಸಿದರೆ ನಿರ್ದೇಶಕ ರಾಜ್​ ನಿಡಿಮೋರು ಬಿಳಿ ಬಣ್ಣದ ಕುರ್ತಾಗೆ ಕಂದು ಬಣ್ಣದ ಜಾಕೆಟ್​ ಧರಿಸಿದ್ದರು. ಫ್ಯಾಮಿಲಿ ಮ್ಯಾನ್​, ಸಿಟಾಡೆಲ್​ ಹನಿಬನಿ ನಿರ್ದೇಶಕ ರಾಜ್​ ನಿಡಿಮೋರು ಹಾಗೂ ಸಮಂತಾ ಇತ್ತೀಚಿಗೆ ಒಟ್ಟಾಗಿ ಕಾಣಿಸಿಕೊಳ್ಳಲು ಆರಂಭಿಸಿದ್ದರು.

ಮದುವೆಯ ಫೊಟೋಗಳನ್ನು ನಟಿ ಸಮಂತಾ ಇನ್​ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರಿಗೂ ಇದು 2ನೇ ವಿವಾಹವಾಗಿದೆ. ಸಮಂತಾ ಈ ಹಿಂದೆ ನಟ ನಾಗಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಬಳಿಕ ಇವರ ದಾಂಪತ್ಯ ಜೀವನ ಮುರಿದುಬಿದ್ದಿತ್ತು. ನಾಗಚೈತನ್ಯ ಕೂಡ 2ನೇ ವಿವಾಹವಾಗಿದ್ದರು.

ಲಿಂಗಭೈರವಿ ದೇವಿಯ ಭಕ್ತೆಯಾಗಿರುವ ನಟಿ ಸಮಂತಾ ಇದೇ ದೇವಸ್ಥಾನದಲ್ಲಿ ಅತ್ಯಂತ ಸರಳವಾಗಿ ವಿವಾಹವಾಗಿದ್ದಾರೆ. ನಟಿ ಸಮಂತಾ ಮದುವೆ ಪೋಸ್ಟ್​ಗೆ ಚಂದನವನದ ನಟಿ ರಮ್ಯಾ ಸೇರಿದಂತೆ ಹಲವರು ಶುಭಾಶಯ ಕೋರಿದ್ದಾರೆ.

Samantha Ruth Prabhu Married Raj nidimoru in Coimbatore Isha foundation Photo Viral

Exit mobile version