Cinema

YAJAMANA PREMIERE LEAGUE : ಮೇ 7-8 ರಂದು ಯಜಮಾನ ಪ್ರೀಮಿಯರ್ ಲೀಗ್

Published by
Kannada News Next Desk

ಈಗ ಎಲ್ಲೆಲ್ಲೂ IPL ಫೀವರ್ ಶುರುವಾಗಿದೆ. ಈ ಐಪಿಎಲ್ ಹಂಗಾಮದ ನಡುವೆ YPL ಟೂರ್ನಿ ಶುರುವಾಗ್ತಿದೆ. ನಾವು ಕೆಪಿಎಲ್ (ಕರ್ನಾಟಕ ಪ್ರೀಮಿಯರ್ ಲೀಗ್) ಸಿಸಿಎಲ್ ಸೆಲೆಬ್ರಿಟಿ ಪ್ರೀಮಿಯರ್ ಲೀಗ್) ಕೇಳಿದ್ದೇವೆ ಇದು ಯಾವುದು ವೈಪಿಎಲ್‌ (YPL ) ಅನ್ನೋ ಪ್ರಶ್ನೆಗೆ ಉತ್ತರ ಯಜಮಾನ ಪ್ರೀಮಿಯರ್ ಲೀಗ್ (YAJAMANA PREMIERE LEAGUE) .

ವಿಷ್ಣುಸೇನಾ ಸಮಿತಿಯಿಂದ ಆಯೋಜಿಸಲಾಗಿರುವ ಈ ಟೂರ್ನಿಯ ಸಂಪೂರ್ಣ ಜವಾಬ್ದಾರಿಯನ್ನು ವಿಷ್ಣುಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ವಹಿಸಿಕೊಂಡಿದ್ದಾರೆ. ಇದೇ 7 ಮತ್ತು 8ರಂದು‌ ನಡೆಯಲಿರುವ YPL ಟೂರ್ನಿಮೆಂಟ್ ಗಾಗಿ ವಿಷ್ಣುಸೇನಾ ಸಮಿತಿ ಇವತ್ತು ಥೀಮ್ ಸಾಂಗ್ ಬಿಡುಗಡೆಯಾಗಿದೆ. ಥೀಮ್ ಸಾಂಗ್ ಸಾಂಗ್ ಪ್ರಮೋದ್ ಮರವಂತೆ ಸಾಹಿತ್ಯ ನೀಡಿದ್ದು, ಹೇಮಂತ್ ಜೋಯಿಸ್ ಮ್ಯೂಸಿಕ್ , ಚೇತನ್ ನಾಯ್ಕ್ ಕಂಠ ಕುಣಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೀರಕಪುತ್ರ ಶ್ರೀನಿವಾಸ್, ಈ ಪ್ರೀಮಿಯರ್ ಲೀಗ್ ಜವಾಬ್ದಾರಿಯನ್ನು ಬೆಂಗಳೂರು ವಿಷ್ಣುಸೇನಾ ಸಮಿತಿಯ ಅಧ್ಯಕ್ಷ ಯದುನಂದನ್ ಗೌಡ , ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್, ಆನಂದ್ ವಹಿಸಿಕೊಂಡಿದ್ದಾರೆ. ಕ್ರಿಕೆಟ್ ಅನ್ನೋದನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿಸಿದ್ದು ಯಜಮಾನ್ರು. ಅವರಿಗೆ ಕ್ರಿಕೆಟ್ ಅಂದ್ರೆ ಪ್ರೀತಿ. ಕ್ರಿಕೆಟ್ ದಂತಕಥೆಯ ಅನೇಕರ ಜೊತೆ‌ ಸಂಪರ್ಕವಿತ್ತು. ನಾಗರಹಾವು ಕ್ರಿಕೆಟ್ ಟೂರ್ನಮೆಂಟ್ ಮಾಡಿದಾಗ ಕಪಿಲ್ ದೇವ್ ಭಾಗಿಯಾಗಿದ್ರು. ಅನೇಕ ಸಂಬಂಧಗಳನ್ನು ಬೆಸೆಯುವ ನಿಟ್ಟಿನಲ್ಲಿ ಯಜಮಾನ ಪ್ರೀಮಿಯರ್ ಲೀಗ್ ನಡೆಸಲಾಗ್ತಿದೆ ಎಂದರು.

ಬರೋಬ್ಬರಿ 12 ಟೀಂಗಳು YPLನಲ್ಲಿ ಭಾಗಿಯಾಗಲಿದ್ದು, ಸಿನಿಮಾ ಇಂಡಸ್ಟ್ರೀಯ ಕುಟುಂಬ ಜೊತೆಗೆ ಅಭಿಮಾನಿಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಷ್ಟಕ್ಕೂ ವಿಷ್ಣುಸೇನಾ ಸಮಿತಿ ಈ ರೀತಿ ಟೂರ್ನಿಮೆಂಟ್ ಆಯೋಜನೆಗೆ ಕಾರಣ ಸಾಹಸಸಿಂಹನ ಕ್ರಿಕೆಟ್ ಮೇಲಿನ ಪ್ರೀತಿ. ಈ ಹಿಂದೆ ವಿಷ್ಣುವರ್ಧನ್ ಅವರು ಸ್ನೇಹಲೋಕ ಎಂಬ ಸಂಘ ಕಟ್ಟಿ ಕ್ರಿಕೆಟ್ ಆಡುತ್ತಿದ್ದರು. ಇದೀಗ ವಿಷ್ಣುಸೇನಾ ಸಮಿತಿ ಕೂಡ ಸಿಂಹ ನಡೆದ ದಾರಿಯಲ್ಲಿ ಸಾಗಿದೆ.

ಇದನ್ನೂ ಓದಿ : ಐಪಿಎಲ್ 2022ನಲ್ಲಿ ಸಿಎಸ್‌ಕೆಗೆ ಮತ್ತೆ ಧೋನಿ ನಾಯಕ : ಮೌನ ಮುರಿದ ಯುವರಾಜ್‌ ಸಿಂಗ್‌

ಇದನ್ನೂ ಓದಿ : ವೃದ್ಧಿಮಾನ್​ ಸಾಹಾಗೆ ಬೆದರಿಕೆಯೊಡ್ಡಿದ್ದ ಪತ್ರಕರ್ತನಿಗೆ 2 ವರ್ಷ ನಿಷೇಧ ಶಿಕ್ಷೆ

Yajamana Premiere League Start May 7th

Share