ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರ ಸಂಪೂರ್ಣ ವೇಳಾಪಟ್ಟಿ (T20 World Cup 2026 Schedule) ಬಿಡುಗಡೆಯಾಗಿದೆ. ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಈ ಟೂರ್ನಿಯ ಪ್ರಮುಖ ಹೈಲೈಟ್ ಎಂದರೆ, ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ (India vs Pakistan match date) ಮುಖಾಮುಖಿಯಾಗುವ ದಿನಾಂಕ.
ಐಸಿಸಿ ಪ್ರಕಟಿಸಿದ ವೇಳಾಪಟ್ಟಿಯ ಪ್ರಕಾರ, ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯವು ಫೆಬ್ರವರಿ 15, 2026 ರಂದು ಭಾನುವಾರ ಶ್ರೀಲಂಕಾದ ಕೊಲಂಬೊದಲ್ಲಿ ನಡೆಯಲಿದೆ.
ಭಾರತದ ಅಭಿಯಾನ ಮತ್ತು ಮುಖ್ಯ ವಿವರಗಳು
ಈ ಬಾರಿಯ ವಿಶ್ವಕಪ್ ಟೂರ್ನಿಯು ಫೆಬ್ರವರಿ 7, 2026 ರಿಂದ ಮಾರ್ಚ್ 8, 2026 ರವರೆಗೆ ನಡೆಯಲಿದೆ. ಭಾರತೀಯ ತಂಡವು ಈ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯಲಿದ್ದು, ಎ ಗುಂಪಿನಲ್ಲಿ ಪಾಕಿಸ್ತಾನ, ಯುಎಸ್‌ಎ, ನೆದರ್‌ಲ್ಯಾಂಡ್ಸ್ ಮತ್ತು ನಮೀಬಿಯಾ ತಂಡಗಳೊಂದಿಗೆ ಸ್ಥಾನ ಪಡೆದಿದೆ.
ಟೀಮ್ ಇಂಡಿಯಾದ ಗ್ರೂಪ್ ಹಂತದ ಪಂದ್ಯಗಳ ವಿವರ:
ಮೊದಲ ಪಂದ್ಯ: ಫೆಬ್ರವರಿ 7 ರಂದು ಅಮೆರಿಕ (USA) ವಿರುದ್ಧ, ಮುಂಬೈನಲ್ಲಿ.
ಎರಡನೇ ಪಂದ್ಯ: ಫೆಬ್ರವರಿ 12 ರಂದು ನಮೀಬಿಯಾ ವಿರುದ್ಧ, ದೆಹಲಿಯಲ್ಲಿ.
ಮೂರನೇ ಪಂದ್ಯ (ಮಹಾ ಕದನ): ಫೆಬ್ರವರಿ 15 ರಂದು ಪಾಕಿಸ್ತಾನ ವಿರುದ್ಧ, ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ.
ನಾಲ್ಕನೇ ಪಂದ್ಯ: ಫೆಬ್ರವರಿ 18 ರಂದು ನೆದರ್‌ಲ್ಯಾಂಡ್ಸ್ ವಿರುದ್ಧ, ಅಹಮದಾಬಾದ್‌ನಲ್ಲಿ.
ಇದನ್ನೂ ಓದಿ: ಎಲ್ಲೆಡೆ ನಂದಿನಯ ಘಮಘಮ!
ಕೊಲಂಬೊದಲ್ಲಿ ನಡೆಯಲಿರುವ ಭಾರತ-ಪಾಕಿಸ್ತಾನ ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ ಸಂಜೆ 7:00 ಗಂಟೆಗೆ ಪ್ರಾರಂಭವಾಗುವ ಸಾಧ್ಯತೆ ಇದೆ. ಈ ಬೃಹತ್ ಟೂರ್ನಿಯಲ್ಲಿ ಒಟ್ಟು 20 ತಂಡಗಳು ಭಾಗವಹಿಸಲಿವೆ. ಭಾರತದ ಐದು ಮತ್ತು ಶ್ರೀಲಂಕಾದ ಮೂರು ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿವೆ. ಫೈನಲ್ ಪಂದ್ಯವು ಮಾರ್ಚ್ 8 ರಂದು ಅಹಮದಾಬಾದ್ ಅಥವಾ ಕೊಲಂಬೊದಲ್ಲಿ ನಡೆಯಲಿದೆ.
