ಧರ್ಮಸ್ಥಳ ಬುರುಡೆ ಪ್ರಕರಣ : ಇಂದು ಕೋರ್ಟ್​ಗೆ ಎಸ್​ಐಟಿಯಿಂದ ಬರೋಬ್ಬರಿ 4 ಸಾವಿರ ಪುಟಗಳ ಚಾರ್ಜ್​ಶೀಟ್​ ಸಲ್ಲಿಕೆ

dharmasthala burude case : ಕಳೆದ ಕೆಲವು ತಿಂಗಳಿನಿಂದ ರಾಜ್ಯಾದ್ಯಂತ ಭಾರೀ ಸಂಚಲನ ಸೃಷ್ಟಿಸಿದ್ದ ಧರ್ಮಸ್ಥಳ ಬುರುಡೆ ಪ್ರಕರಣ ಸಂಬಂಧ ಇಂದು ಎಸ್​ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದ್ದಾರೆ.

ಈ ಪ್ರಕರಣದ ಮುಖ್ಯ ತನಿಖಾಧಿಕಾರಿ ಜಿತೇಂದ್ರ ಕುಮಾರ ದಯಾಮ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಬೆಳ್ತಂಗಡಿಯ ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಸಿದ್ದಾರೆ. ಎಸ್​ಐಟಿ ತನಿಖಾಧಿಕಾರಿಗಳು ಮಾಜಿ ಮಾಸ್ಕ್​ ಮ್ಯಾನ್ ಚಿನ್ನಯ್ಯ, ಮಹೇಶ್​ ಶೆಟ್ಟಿ ತಿಮರೋಡಿ, ಗಿರೀಶ್​ ಮಟ್ಟಣನವರ್​, ಜಯಂತ್​.ಟಿ, ವಿಠ್ಠಲಗೌಡ ಹಾಗೂ ಸುಜಾತಾ ಭಟ್​ ಮೇಲೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಈ ಚಾರ್ಜ್​ಶೀಟ್​ನಲ್ಲಿ ಚಿನ್ನಯ್ಯ ತೆಗೆದುಕೊಂಡು ಬಂದಿದ್ದ ತಲೆಬುರುಡೆ, ಅದನ್ನು ಚಿನ್ನಯ್ಯನಿಗೆ ನೀಡಿದವರ ಬಗ್ಗೆ ಹೀಗೆ ಸಂಪೂರ್ಣ ಮಾಹಿತಿ ಒದಗಿಸಲಾಗಿದೆ. ಈ ಬುರುಡೆ ಷಡ್ಯಂತ್ರ ನಡೆಸಲು ಪ್ರೇರಣೆ ನೀಡಿದ್ದು ಯಾರು ? ಬುರುಡೆ ವಿಚಾರದಲ್ಲಿ ಏನೆಲ್ಲ ತಂತ್ರ ರೂಪಿಸಲಾಗಿತ್ತು ? ಎಲ್ಲೆಲ್ಲಿಗೆ ಆ ಬುರುಡೆಯನ್ನು ಕೊಂಡೊಯ್ಯಲಾಗಿತ್ತು ? ಈ ಷಡ್ಯಂತ್ರ ನಡೆಸಲು ಎಲ್ಲೆಲ್ಲಿಂದ ಫಂಡಿಂಗ್​ ಆಗಿತ್ತು ಹೀಗೆ ಸಂಪೂರ್ಣ ವಿವರಣೆಗಳನ್ನು ಒಳಗೊಂಡ ಬರೋಬ್ಬರಿ 4 ಸಾವಿರ ಪುಟಗಳ ಚಾರ್ಜ್​ಶೀಟ್​ನ್ನು ಇಂದು ಎಸ್​ಐಟಿ ಅಧಿಕಾರಿಗಳು ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ.

ಇದನ್ನೂ ಓದಿ: ಶಬರಿಮಲೆ ದೇವಸ್ಥಾನ ಚಿನ್ನ ಕಳುವು ಪ್ರಕರಣ : ವೈಜ್ಞಾನಿಕ ಪರೀಕ್ಷೆಗೆ ನಡೆಸಲು ಹೈಕೋರ್ಟ್ ಅನುಮತಿ

ಚಿನ್ನಯ್ಯ ಎಂಬಾತ ನೀಡಿದ ದೂರಿನ ಆಧಾರವನ್ನಿಟ್ಟುಕೊಂಡು ಈ ಪ್ರಕರಣದ ತನಿಖೆ ಆರಂಭಗೊಂಡಿತ್ತು. ಧರ್ಮಸ್ಥಳದಲ್ಲಿ ಸಾವಿರಾರು ಶವಗಳನ್ನು ಹೂತಿದ್ದೇನೆ ಎಂದು ಚಿನ್ನಯ್ಯ ಹೇಳಿಕೊಂಡಿದ್ದ. ಇದಾದ ಬಳಿಕ ತಿಂಗಳುಗಟ್ಟಲೇ ಶವ ಹುಡುಕುವ ಪ್ರಕ್ರಿಯೆ ಧರ್ಮಸ್ಥಳದ ವಿವಿಧ ಭಾಗಗಳಲ್ಲಿ ಭರದಿಂದ ಸಾಗಿತ್ತು. ತನಿಖೆ ಚುರುಕುಗೊಳ್ಳುತ್ತಾ ಹೋದಂತೆ ಈ ಚಿನ್ನಯ್ಯ ಹಾಗೂ ಈತನ ಹಿಂದೆ ನಿಂತು ಕುಮ್ಮಕ್ಕು ನೀಡುತ್ತಿದ್ದವರ ಬಣ್ಣ ಬಯಲಾಗುತ್ತಾ ಹೋಗಿತ್ತು.

dharmasthala burude case

Exit mobile version