ಶಬರಿಮಲೆ ದೇವಸ್ಥಾನ ಚಿನ್ನ ಕಳುವು ಪ್ರಕರಣ : ವೈಜ್ಞಾನಿಕ ಪರೀಕ್ಷೆಗೆ ನಡೆಸಲು ಹೈಕೋರ್ಟ್ ಅನುಮತಿ
ಶಬರಿಮಲೆ ದೇವಸ್ಥಾನದಲ್ಲಿ ಚಿನ್ನ ಕಳುವು ಪ್ರಕರಣ ಸಂಬಂಧ ವೈಜ್ಞಾನಿಕ ಪರೀಕ್ಷೆ ನಡೆಸಲು ಎಸ್ಐಟಿಗೆ ಕೇರಳ ಹೈಕೋರ್ಟ್ ಅನುಮತಿ ನೀಡಿದೆ. ಕೇರಳ ಹೈಕೋರ್ಟ್ನ ನ್ಯಾಯಮೂರ್ತಿಗಳಾದ ರಾಜಾ ವಿಜಯ ರಾಘವನ್ ಮತ್ತು ಕೆ,ವಿ ಜಯಕುಮಾರ್ ನೇತೃತ್ವದ ವಿಭಾಗೀಯ ಪೀಠ ನವೆಂಬರ್ 17ರಿಂದ ವೈಜ್ಞಾನಿಕ ನಡೆಸುವಂತೆ ಅವಕಾಶ ನೀಡಿದೆ.
ಈ ಮೊದಲು ವೈಜ್ಫಾನಿಕ ಪರೀಕ್ಷೆಯ ವಿಚಾರವಾಗಿ ದೇಗುಲದ ಮುಖ್ಯ ಅರ್ಚಕರ ಅಭಿಪ್ರಾಯ ಕೇಳಿದ್ದ ಸಂದರ್ಭದಲ್ಲಿ, ದೈವಿಕ ಅನುಮತಿಯ ಅವಶ್ಯಕತೆ ಇದೆ ಎಂದು ಹೇಳಿದ್ದರು. ಹೀಗಾಗಿ ನವೆಂಬರ್ 17ರಂದು ಪರೀಕ್ಷೆ ನಡೆಸಲು ನಿರ್ಧರಿಸಲಾಯಿತು. ನವೆಂಬರ್ 17 ರಂದು ಪಡೆಯಬೇಕಾದ ದೇವ ಅನುಜ್ಞೆಯ ಆಧಾರದ ಮೇಲೆ, ಮಧ್ಯಾಹ್ನ 1 ಗಂಟೆಗೆ ಉಚ್ಚ ಪೂಜೆ ಮತ್ತು ದೇಗುಲ ಮುಚ್ಚಿದ ನಂತರ ಪರೀಕ್ಷೆ ನಡೆಸಲಾಗುತ್ತದೆ.
ದ್ವಾರಪಾಲಕ ವಿಗ್ರಹಗಳ ತಗಡುಗಳ ತೂಕ, ಚಿನ್ನದ ಲೇಪನದಲ್ಲಿರುವ ಶುದ್ಧತೆಯ ಪ್ರಮಾಣ ಹಾಗೂ ಗುಣಮಟ್ಟದ ವೈಜ್ಞಾನಿಕ ಪರೀಕ್ಷೆ ನಡೆಸುವಂತೆ ಕೇರಳ ಹೈಕೋರ್ಟ್ ಎಸ್ಐಟಿಗೆ ನಿರ್ದೇಶನ ನೀಡಿದೆ. ಈ ಎಲ್ಲಾ ಪರೀಕ್ಷೆಗಳು ಚಿನ್ನದ ನಷ್ಟ ಪ್ರಮಾಣದ ನಿರ್ದಿಷ್ಠ ಮಾಹಿತಿ ನೀಡಲಿವೆ. ಇನ್ನು ಇದರ ಜೊತೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಮಾಜಿ ಕಾರ್ಯದರ್ಶಿಯನ್ನೂ ಎಸ್ಐಟಿ ವಿಚಾರಣೆಗೆ ಒಳಪಡಿಸಲಿದೆ.
ಇದನ್ನೂ ಓದಿ: ಭೂಮಿ ಯೋಜನೆ : ಅರ್ಜಿ ವಿಲೇವಾರಿಯಲ್ಲಿ ಶಿರಸಿಗೆ ರಾಜ್ಯಕ್ಕೆ ಪ್ರಥಮ
ದೇಗುಲದ ಪಾವಿತ್ರ್ಯತೆಗೆ ಯಾವುದೇ ರೀತಿಯ ಅಡ್ಡಿ ಎದುರಾಗದಂತೆ ಎಸ್ಐಟಿ ಈ ತನಿಖೆ ನಡೆಸಲಿದೆ. ಈ ವೈಜ್ಞಾನಿಕ ಪರೀಕ್ಷೆಯು ಚಿನ್ನದ ನಷ್ಟದ ನಿಖರ ಪ್ರಮಾಣ ತಿಳಿಸುವುದರಿಂದ ಈ ಪ್ರಕರಣದ ಪ್ರಬಲ ಸಾಕ್ಷಿಯಾಗಿ ಬಳಕೆಯಾಗಲಿದೆ. ಇನ್ನು ಇದರ ಜೊತೆಯಲ್ಲಿ ದೇಗುಲದ ಆಡಳಿತ ಮಂಡಳಿ ಕಾರ್ಯದರ್ಶಿಯನ್ನೂ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ದಟ್ಟವಾಗಿದೆ.



