ಖ್ಯಾತ ಯುವ ನಟಿ ಅನನ್ಯಾ ರಾಜ್ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಕೊಟ್ಟಿದೆ. 27 ವರ್ಷದ ನಟಿ ಅನನ್ಯಾ ರಾಜ್ ಸಾವನ್ನಪ್ಪಿದ ಒಂದು ತಿಂಗಳ ಬಳಕಿ ಆಕೆಯ ಸಾವಿನ ಮಾಹಿತಿಯನ್ನು ಕುಟುಂಬಸ್ಥರು ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗ ಪಡಿಸಿದ್ದಾರೆ. ಆದರೆ ಈ ಸಾವಿನ ಸುದ್ದಿ ಇದೀಗ ಅಭಿಮಾನಿಗಳಿಗೆ ಮತ್ತು ಚಿತ್ರರಂಗಕ್ಕೆ ಆಘಾತವನ್ನುಂಟು ಮಾಡಿದೆ.
ನಟಿ ಅನನ್ಯಾ ರಾಜ್ ಜುಲೈ 15ರಂದು ನಿದ್ರೆಯಲ್ಲಿದ್ದ ವೇಳೆಯಲ್ಲಿ ಅವರು ನಿಧನರಾಗಿದ್ದರು. ಕಳೆದ ಒಂದು ವರ್ಷಕ್ಕೂ ಅಧಿಕ ಕಾಲ ನಟಿ ಅನನ್ಯಾ ರಾಜ್ ದೈಹಿಕ ಹಾಗೂ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರು. ತಮ್ಮ ಕಷ್ಟದ ಸಮಯವನ್ನು ನಟಿ ಗೌಪ್ಯವಾಗಿ ಇರಿಸಿಕೊಂಡಿದ್ದರು.
ಇದೀಗ ಅನನ್ಯಾ ರಾಜ್ ಅವರ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಭಾವನಾತ್ಮಕ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ನಟಿಯ ಸಾವಿನ ವಿಚಾರದಲ್ಲಿ ಕುಟುಂಬದ ಖಾಸಗಿತನವನ್ನು ಗೌರವಿಸುವಂತೆಯೂ ಮನವಿ ಮಾಡಲಾಗಿದೆ.
ನಟಿ ಅನನ್ಯಾ ರಾಜ್ ಅವರ ನಿಧನದ ಸುದ್ದಿ ತಡವಾಗಿ ಹೊರಬಂದಿರುವುದು ಇದೀಗ ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನಟಿಯ ನಿಧನದ ಕುರಿತು ಕುಟುಂಬಸ್ಥರು ತಕ್ಷಣವೇ ಸಾರ್ವಜನಿಕವಾಗಿ ಮಾಹಿತಿ ನೀಡಿರಲಿಲ್ಲ. ಸುಮಾರು ಒಂದು ತಿಂಗಳ ಬಳಿಕ ಸಾಮಾಜಿಕ ಜಾಲತಾಣದ ಮೂಲಕ ವಿಷಯವನ್ನು ಹಂಚಿಕೊಂಡಿದ್ದಾರೆ.
ನಟಿಯ ಸಾವಿಗೆ ಇದುವರೆಗೂ ನಿಖರ ಕಾರಣವನ್ನು ಕುಟುಂಬಸ್ಥರು ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ. ಕಳೆದೊಂದು ವರ್ಷಕ್ಕೂ ಹೆಚ್ಚು ಕಾಲ ಅವರು ದೈಹಿಕ ಮತ್ತು ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಎಂಬ ಮಾಹಿತಿಯನ್ನು ಮಾತ್ರ ಕುಟುಂಬ ಹಂಚಿಕೊಂಡಿದೆ. ಹೀಗಾಗಿ ಸಾವಿನ ಕುರಿತು ದೃಢಪಡಿಸದ ಕಾರಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದನ್ನು ತಪ್ಪಿಸಬೇಕು.
ಮುಂಬೈನಲ್ಲಿ ಬೆಳೆದ ಅನನ್ಯಾ ರಾಜ್ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರೀಯರಾಗಿದ್ದರು. ನಂತರದಲ್ಲಿ ಸಿನಿಮಾಗಳಲ್ಲಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದರು. 2016ರಲ್ಲಿ ಬಿಡುಗಡೆಯಾದ ‘7 Hours to Go’ ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶಿಸಿದ ಅವರು, ನಂತರ ‘The Final Exit’ (2017) ಹಾಗೂ ‘Ghost’ (2019) ಸಿನಿಮಾಗಳಲ್ಲೂ ಅಭಿನಯಿಸಿದ್ದರು. ಹಿಂದಿ ಸಿನಿಮಾಗಳ ಜೊತೆಗೆ ತೆಲುಗು ಚಿತ್ರರಂಗದಲ್ಲಿಯೂ ಅವರು ಕೆಲಸ ಮಾಡಿದ್ದರು.
ಕಳೆದ ಕೆಲವು ಸಮಯದಿಂದ ಅನನ್ಯಾ ರಾಜ್ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಅವರು ಹೆಚ್ಚು ಸಕ್ರೀಯರಾಗಿರಲಿಲ್ಲ. ಇದೀಗ ನಟಿಯ ಸಾವಿನ ಸುದ್ದಿ ಹೊರಬಿದ್ದಿರುವುದು ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ.