ವಿಮಲ್ ಎಲಾಯ್ಚಿ : ಶಾರೂಖ್ ಖಾನ್ , ಅಜಯ್ ದೇವಗನ್, ಟೈಗರ್ ಶ್ರಾಪ್‌ಗೆ ಶೋಕಾಸ್ ನೋಟಿಸ್
ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ ಈ ಮೂವರು ನಟರಿಗೆ ಶೋಕಾಸ್ ನೋಟೀಸ್ ಜಾರಿ ಮಾಡಿದೆ. ತಂಬಾಕು ಉತ್ಪನ್ನಗಳನ್ನು ಜಾಹೀರಾತಿನ ಮೂಲಕ ಪರೋಕ್ಷ ಪ್ರಚಾರ ನೀಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.
By Arun Gundmi | ಅರುಣ್ ಗುಂಡ್ಮಿ · Editor-in-Chief
1 min read
ವಿಮಲ್ ಎಲಾಯ್ಚಿ ಪಾನ್ ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್‌ನ ಖ್ಯಾತ ನಟರಾದ ಶಾರೂಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ ಈ ಮೂವರು ನಟರಿಗೆ ಶೋಕಾಸ್ ನೋಟೀಸ್ ಜಾರಿ ಮಾಡಿದೆ. ನಿಷೇಧಿತ ತಂಬಾಕು ಉತ್ಪನ್ನಗಳನ್ನು ಜಾಹೀರಾತಿನ ಮೂಲಕ ಪರೋಕ್ಷ ಪ್ರಚಾರ ನೀಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಕಲಬೆರಕೆ ವಸ್ತುಗಳ ವಿರುದ್ದ ಸಮರ ಸಾರಲಾಗಿದ್ದು, ಹಿರಿಯ ಅಧಿಕಾರಿ ತುಕಾರಾಂ ಮುಂಡೆ ಅವರ ನೇತೃತ್ವದ ಎಫ್‌ಡಿಎ ಇಲಾಖೆ ಮೂವರು ನಟರಿಗೆ ನೋಟೀಸ್ ಜಾರಿ ಮಾಡಿದ್ದು, ನಿಷೇಧಿತ ವಸ್ತುಗಳನ್ನೇ ಹೋಲುವ ವಸ್ತುಗಳನ್ನು ಪರ್ಯಾಯ ಮೂಲದ ಮೂಲಕ ಪ್ರಚಾರ ಮಾಡಲಾಗಿದೆ.
ಸಾಮಾಜಿಕ ಜಾಲತಾಣಗಳಿಂದ ಈ ಜಾಹೀರಾತುಗಳನ್ನು 15 ದಿನಗಳ ಒಳಗಾಗಿ ತೆಗೆದು ಹಾಕುವಂತೆ ನೋಟೀಸ್‌ನಲ್ಲಿ ಸೂಚಿಸಲಾಗಿದೆ. ಮಹಾರಾಷ್ಟ್ರದಲ್ಲಿ ನಿಕೋಟಿನ್ ಮಿಶ್ರಿತ ಪಾನ್ ಮಸಾಲಾ ಮತ್ತು ತಂಬಾಕು ಉತ್ಪನ್ನಗಳಿಗೆ ನಿಷೇಧ ಹೇರಲಾಗಿದೆ.
ಆದರೆ ವಿಮಲ್ ಎಲಾಯ್ಚಿ ಜಾಹೀರಾತಿನ ಮೂಲಕ ಇದೇ ಕಂಪನಿಯ ನಿರ್ಬಂಧಿತ ಪಾನ್ ಮಸಾಲ ಮತ್ತು ಇತರ ತಂಬಾಕು ಉತ್ಪನ್ನಗಳನ್ನು ಪ್ರಚಾರ ಮಾಡಲಾಗುತ್ತಿದೆ. ಸದ್ಯ ಮೂವರು ನಟರಿಗೆ ನೋಟೀಸ್ ಜಾರಿ ಮಾಡಲಾಗಿದ್ದು, ನಟರಿಂದ ನೋಟೀಸ್ ಬಂದ ನಂತರದಲ್ಲಿ ಮುಂದಿನ ಕ್ರಮಕೈಗೊಳ್ಳಲಾಗುತ್ತದೆ.
ವಿಮಲ್ ಎಲಾಯ್ಚಿ ಜಾಹೀರಾತಿನ ಮೂಲಕವಾಗಿ ವಿಮಲ್ ಪಾನ್ ಮಸಾಲಾ ಬ್ರ್ಯಾಂಡ್ ಜೊತೆಗೆ ಸಂಬಂಧ ಕಲ್ಪಿಸಲಾಗಿದೆ. ಗ್ರಾಹಕರನ್ನು ನಿಷೇಧಿತ ಉತ್ಪನ್ನಗಳ ಕಡೆಗೆ ಗಮನ ಸೆಳೆಯುತ್ತಿರುವುದು ಜಾಹೀರಾತಿನಲ್ಲಿ ಕಂಡು ಬಂದಿದೆ. ಎಫ್‌ಡಿಎ ನೋಟೀಸ್ ಬೆನ್ನಲ್ಲೇ ವಿಮಲ್ ಎಲಾಯ್ಚಿ ಜಾಹೀರಾತು ಪ್ರಸಾರ ಬಂದ್ ಆಗುವ ಸಾಧ್ಯತೆಯಿದೆ.
Topics
ಸಂಬಂಧಿತ ಸುದ್ದಿಗಳು
entertainment
Drishyam 3 Ajay Devgn : ಮೊದಲ ದಿನವೇ ದಾಖಲೆಯ ಗಳಿಕೆ ಕಂಡ ದೃಶ್ಯಂ 3 : ಅಜಯ್ ದೇವಗನ್ ಅಭಿನಯಕ್ಕೆ ಅಭಿಮಾನಿಗಳು ಫಿದಾ
entertainment
ಕಾಂತಾರ ಸಿನಿಮಾಕ್ಕೆ 4ರ ಸಂಭ್ರಮ : ರಿಷಬ್ ಶೆಟ್ಟಿ -ಹೊಂಬಾಳೆ ಫಿಲ್ಮ್ಸ್ ನಡುವೆ ತಣ್ಣಗಾಯಿತೇ ಬಾಂಧವ್ಯ
entertainment
ಬಿಗ್ ಬಾಸ್ನಲ್ಲಿ ಕಿರಣ್ ಶಾಸ್ತ್ರಿಗೆ ಕಳಪೆ.. ಕೆಟ್ಟ ಯೋಚನೆ ಇರುವ ಕಳ್ಳ’ ಎಂದ ಸ್ಪರ್ಧಿ ಮಂಜ
entertainment

