Kannada News Next

entertainment

ಅನುಶ್ರೀ ಸಂದರ್ಶನದಲ್ಲಿ ವಿಜಯ್ ದೇವರಕೊಂಡ ಕನ್ನಡ ಪ್ರೀತಿಗೆ ಫಿದಾ ಆದ ಫ್ಯಾನ್ಸ್

ಕನ್ನಡಿಗರ ನೆಚ್ಚಿನ ನಿರೂಪಕಿ ಅನುಶ್ರೀ ಯೂಟ್ಯೂಬ್ ಚಾನೆಲ್‌ನಲ್ಲಿ ಲೈಗರ್ ನಟ ವಿಜಯ್ ದೇವರಕೊಂಡ ಮತ್ತು ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ.

By Meghana Pranuth | ಮೇಘನಾ ಪ್ರಣೂತ್‌
Photo: Instagrama

ರಿಯಲ್ ಲೈಫ್ ಜೊತೆಗೆ ರೀಲ್ ಲೈಫ್‌ನಲ್ಲೂ ಜೋಡಿಯಾಗಿ ದೊಡ್ಡ ಪರದೆ ಮೇಲೆ ಅಬ್ಬರಿಸೋಕೆ ಸಿದ್ಧವಾಗಿರೋ 'ರಣಬಾಲಿ' ಚಿತ್ರತಂಡ ಸದ್ಯ ಭರ್ಜರಿ ಪ್ರಚಾರದಲ್ಲಿದೆ. ಇದರ ಮಧ್ಯೆ ಕನ್ನಡಿಗರ ನೆಚ್ಚಿನ ನಿರೂಪಕಿ ಅನುಶ್ರೀ ಯೂಟ್ಯೂಬ್ ಚಾನೆಲ್‌ನಲ್ಲಿ ಲೈಗರ್ ನಟ ವಿಜಯ್ ದೇವರಕೊಂಡ ಮತ್ತು ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ.

ಆದರೆ, ಈ ಸಂದರ್ಶನದಲ್ಲಿ ಎಲ್ಲರ ಗಮನ ಸೆಳೆದಿದ್ದು ಮಾತ್ರ ತೆಲುಗು ಸೂಪರ್‌ಸ್ಟಾರ್ ವಿಜಯ್ ದೇವರಕೊಂಡ ಅವರ ಕನ್ನಡ ಮಾತು! ಹೌದು, ವಿಜಯ್ ದೇವರಕೊಂಡ ಅವರ ಶುದ್ಧ ಕನ್ನಡ ಕೇಳಿ ಕನ್ನಡಿಗರು ಅಚ್ಚರಿಗೊಳ್ಳುವುದರ ಜೊತೆಗೆ ಫುಲ್ ಖುಷ್ ಆಗಿದ್ದಾರೆ.

"ಸಂದರ್ಶನ ಆರಂಭವಾಗ್ತಿದ್ದಂತೆ "ನಮಸ್ಕಾರ ನಿಮಗೆ, ಎಲ್ಲರಿಗೂ" ಅಂತಲೇ ಮಾತು ಶುರು ಮಾಡಿದ ವಿಜಯ್ ದೇವರಕೊಂಡ, ನಿರೂಪಕಿ ಅನುಶ್ರೀ ಅವರಿಗೆ "ನೀವು ತುಂಬಾ ಮುದ್ದಾಗಿದ್ದೀರಿ" ಅಂತ ಕನ್ನಡದಲ್ಲೇ ಕಾಂಪ್ಲಿಮೆಂಟ್ ಕೊಟ್ಟಿದ್ದಾರೆ.

ಅಷ್ಟೇ ಅಲ್ಲ, ಅನುಶ್ರೀ ಕೇಳಿದ ಪ್ರತಿಯೊಂದು ಕನ್ನಡ ಪ್ರಶ್ನೆಗಳನ್ನು ಅತ್ಯಂತ ಸರಳವಾಗಿ ಅರ್ಥಮಾಡಿಕೊಂಡು, ಸ್ಪಷ್ಟವಾಗಿ ಕನ್ನಡದಲ್ಲೇ ಉತ್ತರಿಸೋಕೆ ಪ್ರಯತ್ನಿಸಿದ್ದಾರೆ. ವಿಜಯ್ ಅವರ ಈ ಕನ್ನಡ ಪ್ರೀತಿ ನೋಡಿ ಅನುಶ್ರೀ ಮಾತ್ರವಲ್ಲದೆ ಅಭಿಮಾನಿಗಳು ಕೂಡ ಆಶ್ಚರ್ಯಚಕಿತರಾಗಿದ್ದಾರೆ."

"ನಿಮಗೆಲ್ಲ ಗೊತ್ತಿರೋ ಹಾಗೆ ವಿಜಯ್ ದೇವರಕೊಂಡ ಕೊಡಗಿನ ಅಳಿಯ! ಮತ್ತೊಂದೆಡೆ ನಿರೂಪಕಿ ಅನುಶ್ರೀ ತಮ್ಮನ್ನು 'ಕೊಡಗಿನ ಸೊಸೆ' ಎಂದು ಕರೆದುಕೊಳ್ಳುತ್ತಾರೆ. ಸಂದರ್ಶನದಲ್ಲಿ ಇದೇ ವಿಚಾರ ಪ್ರಸ್ತಾಪಿಸಿದ ಅನುಶ್ರೀ, "ನಿಮಗೆ ಕೊಡಗಿನ ಡಾನ್ಸ್ ಬರುತ್ತಾ?" ಅಂತ ವಿಜಯ್ ಅವರಿಗೆ ಪ್ರಶ್ನೆ ಕೇಳಿದ್ದಾರೆ.

ಇದಕ್ಕೆ ತಕ್ಷಣ ಮಧ್ಯಪ್ರವೇಶಿಸಿದ ರಶ್ಮಿಕಾ ಮಂದಣ್ಣ, "ಹೌದು, ನಾನೇ ಕಲಿಸಿಕೊಟ್ಟಿದ್ದೇನೆ" ಎಂದಿದ್ದಾರೆ. ತಕ್ಷಣವೇ ವಿಜಯ್ ದೇವರಕೊಂಡ ಕುಳಿತಲ್ಲೇ ಕೊಡಗಿನ ಡಾನ್ಸ್ ಸ್ಟೆಪ್ಸ್ ಹಾಕಿ ಎಲ್ಲರನ್ನೂ ನಗಿಸಿದ್ದಾರೆ!"

"ಆದರೆ, ಈ ಇಂಟರ್‌ವ್ಯೂ ರೀಲ್ಸ್ ಮತ್ತು ವೀಡಿಯೋಗಳು ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ, ನೆಟ್ಟಿಗರು ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಮತ್ತೆ ಬೇಸರ ಹೊರಹಾಕಿದ್ದಾರೆ.
'ಕರ್ನಾಟಕದಲ್ಲೇ ಹುಟ್ಟಿ ಬೆಳೆದ ರಶ್ಮಿಕಾಗಿಂತ, ಪಕ್ಕದ ರಾಜ್ಯದ ವಿಜಯ್ ದೇವರಕೊಂಡ ಅವರೇ ಸ್ಪಷ್ಟವಾಗಿ ಮತ್ತು ಗೌರವದಿಂದ ಕನ್ನಡ ಮಾತನಾಡ್ತಾರೆ' ಅಂತ ನೆಟ್ಟಿಗರು ಕಮೆಂಟ್ಸ್ ಮೂಲಕ ರಶ್ಮಿಕಾ ಕಾಲೆಳೆದಿದ್ದಾರೆ. ವಿಜಯ್ ಅವರ ಕನ್ನಡ ಪ್ರೇಮಕ್ಕೆ ಕನ್ನಡಿಗರು ಜೈ ಎಂದಿದ್ದಾರೆ."