entertainmentಪ್ರಮುಖ ಸುದ್ದಿಗಳು

ರೇಣುಕಾಸ್ವಾಮಿ ಪ್ರಕರಣ : ಮದುವೆ ಸಂಭ್ರಮದಲ್ಲಿದ್ದ ನಟ ಚಿಕ್ಕಣ್ಣಗೆ ಬಿಗ್‌ ಶಾಕ್‌, ನಟ ದರ್ಶನ್‌ಗೆ ಬಿಗಿಯಾಗುತ್ತಾ ಕಾನೂನು ಉರುಳು ?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿ ಗುರುತಿಸಿಕೊಂಡಿರುವ ಚಿಕ್ಕಣ್ಣ ಈಗಾಗಲೇ ತನಿಖಾ ಸಂಸ್ಥೆಗಳ ಮುಂದೆ ಹಾಜರಾಗಿ ಸಾಕ್ಷ ನುಡಿದಿದ್ದರು.

By ರಶ್ಮಿ ಎಸ್. | Rashmi S

1 min read

WhatsAppPost
renukaswamy case actor chikkanna gets shoc darshan legal troubles
renukaswamy case actor chikkanna gets shoc darshan legal troubles

ಸ್ಯಾಂಡಲ್‌ವುಡ್‌ನಲ್ಲಿ ತೀವ್ರ ಸಂಚಲನ ಮೂಡಿಸಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಪ್ರರಕಣದ ತನಿಖೆಯ ಕಾವು ಇನ್ನಷ್ಟು ಹೆಚ್ಚಿದ್ದು, ನಟ ದರ್ಶನ್‌ಗೆ ದಿನೇ ದಿನೇ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ರೆ, ಮತ್ತೊಂದೆಡೆಯಲ್ಲಿ ಇತ್ತೀಚಿಗಷ್ಟೇ ಸಪ್ತಪದಿ ತುಳಿದಿರುವ ನಟ ಚಿಕ್ಕಣ್ಣಗೆ ಹೊಸ ಸಂಕಷ್ಟ ಎದುರಾಗಿದ್ದು, ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್‌ ಜಾರಿಯಾಗಿದೆ.

ನಟ ದರ್ಶನ್‌ ಜೊತೆ ಪಾರ್ಟಿ, ಚಿಕ್ಕಣ್ಣಗೆ ಸಂಕಷ್ಟ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿ ಗುರುತಿಸಿಕೊಂಡಿರುವ ಚಿಕ್ಕಣ್ಣ ಈಗಾಗಲೇ ತನಿಖಾ ಸಂಸ್ಥೆಗಳ ಮುಂದೆ ಹಾಜರಾಗಿ ಸಾಕ್ಷ ನುಡಿದಿದ್ದರು. ಹಲವು ಬಾರಿ ವಿಚಾರಣೆಗೆ ಒಳಗಾಗಿದ್ದರು. ಆದರೆ ಇದೀಗ ಚಿಕ್ಕಣ್ಣ ಹಾಗೂ ನಟ ಯಶಸ್‌ ಸೂರ್ಯಗೆ ನ್ಯಾಯಾಲಯ ಸಮನ್ಸ್‌ ಜಾರಿ ಮಾಡಿದೆ.

2024ರ ಜೂನ್‌ 8 ರಂದು ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆಯಾಗಿತ್ತು. ಈ ಕೊಲೆಯ ದಿನದಂದು ನಟ ದರ್ಶನ್‌ ಸ್ಟೋನಿಬ್ರೂಕ್‌ ಪಬ್‌ನಲ್ಲಿ ಪಾರ್ಟಿ ಮಾಡಿದ್ದರು. ಚಿಕ್ಕಣ್ಣ ಹಾಗೂ ಯಶಸ್‌ ಸೂರ್ಯ ಕೂಡ ಈ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಇದೇ ಕಾರಣದಿಂದಲೇ ಕೊಲೆ ಪ್ರಕರಣದಲ್ಲಿ ಇಬ್ಬರನ್ನು ಪೊಲೀಸರು ಪ್ರಮುಖ ಸಾಕ್ಷಿಗಳನ್ನಾಗಿ ಪರಿಗಣಿಸಿದ್ದರು.

ಮದುವೆ ಸಂಭ್ರಮದಲ್ಲಿದ್ದ ನಟ ಚಿಕ್ಕಣ್ಣಗೆ ಸಂಕಷ್ಟ

ನಟ ಚಿಕ್ಕಣ್ಣ ಪಾವನಾ ಜೊತೆಯಲ್ಲಿ ಇತ್ತೀಚಿಗಷ್ಟೆ ಸಪ್ತಪದಿ ತುಳಿದಿದ್ದರು. ಆದರೆ ಮದುವೆಯ ಸಂಭ್ರಮದಲ್ಲಿದ್ದ ನಟನಿಗೆ ಸಂಕಷ್ಟ ಎದುರಾಗಿದೆ. ಬೆಂಗಳೂರಿನ 59ನೇ ಸಿಸಿಎಚ್‌ ನ್ಯಾಯಾಲಯ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ಚಿಕ್ಕಣ್ಣ ಹಾಗೂ ನಟ ಶ್ರೇಯಸ್‌ಗೆ ಸಮನ್ಸ್‌ ಜಾರಿ ಮಾಡಿದೆ. ಅಲ್ಲದೇ ಇದೇ ಅಕ್ಟೋಬರ್‌ 13 ಅಥವಾ 15ರ ಒಳಗಾಗಿ ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ಸೂಚಿಸಿದೆ.

ನಟ ದರ್ಶನ್‌ಗೆ ಮುಗಿಯದ ಸಂಕಷ್ಟ - ಬಿಗಿಯಾಯ್ತಾ ಕಾನೂನು ಉರುಳು

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ಗೆ ಒಂದರ ಮೇಲೊಂದರಂತೆ ಸಂಕಷ್ಟಗಳು ಸುತ್ತಿಕೊಳ್ಳುತ್ತಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯ ಹೊತ್ತಲ್ಲೇ ಆಪ್ತನಾಗಿದ್ದ ಪ್ರದೋಷ್‌ ಇದೀಗ ಮಾಫಿ ಸಾಕ್ಷಿಯಾಗಿದ್ದು, ಕೊಲೆ ಪ್ರಕರಣವನ್ನು ನ್ಯಾಯಾಧೀಶರ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ.

ಮತ್ತೊಂದೆಡೆಯಲ್ಲಿ ಪ್ರದೋಷ್‌ನನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸದಂತೆ ನಟ ದರ್ಶನ್‌ ತೂಗುದೀಪ್‌ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ. ಪೊಲೀಸರು ಸಲ್ಲಿಕೆ ಮಾಡಿರುವ ಚಾರ್ಜ್‌ಶೀಟ್‌ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ವರದಿ, ಸಿಸಿಟಿವಿಯ ಪೂಟೇಜ್‌ಗಳು ದರ್ಶನ್‌ ಪಾಲಿಗೆ ಉರುಳಾಗುವ ಸಾಧ್ಯತೆಯಿದೆ.

ಕೊಲೆ ನಡೆದ ದಿನದಂದು ಶೆಡ್‌ನಲ್ಲಿ ದರ್ಶನ್‌ ಉಪಸ್ಥಿತಿ, ರೇಣುಕಾಸ್ವಾಮಿಯ ಮೇಲೆ ನಡೆಸಿ ದೌರ್ಜನ್ಯದ ಕುರಿತು ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದೆಡೆಯಲ್ಲಿ ದರ್ಶನ್‌ ಕಾನೂನು ಹೋರಾಟವನ್ನು ಮುಂದುವರಿಸಿದ್ದಾರೆ.

ಒಟ್ಟಿನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ನಟ ದರ್ಶನ, ಚಿಕ್ಕಣ್ಣ ಇಬ್ಬರೂ ಸಂಕಷ್ಟಕ್ಕೆ ಸಿಲುಕಿದ್ದು, ಪ್ರದೋಷ್‌ ಮಾಫಿ ಸಾಕ್ಷಿಯಾಗಿರುವ ಬೆನ್ನಲ್ಲೇ ಚಿಕ್ಕಣ್ಣ ಕೂಡ ಪ್ರಕರಣದ ಕುರಿತು ಸಾಕ್ಷ್ಯ ನುಡಿಯಬೇಕಾಗಿದೆ. ಸದ್ಯ ಈ ಪ್ರಕರಣ ತೀವ್ರ ಕುತೂಹಲವನ್ನು ಮೂಡಿಸಿರುವುದಂತೂ ಸತ್ಯ.

Topics

ಸಂಬಂಧಿತ ಸುದ್ದಿಗಳು