ಬಿಗ್ ಬಾಸ್‌ನಲ್ಲಿ ಕಿರಣ್ ಶಾಸ್ತ್ರಿಗೆ ಕಳಪೆ.. ಕೆಟ್ಟ ಯೋಚನೆ ಇರುವ ಕಳ್ಳ’ ಎಂದ ಸ್ಪರ್ಧಿ ಮಂಜ

ಬಿಗ್ ಬಾಸ್ ಮನೆಯಲ್ಲಿ ಮತ್ತೊಮ್ಮೆ ರಣಕಹಳೆ ಮೊಳಗಿದೆ. ಈ ವಾರದ 'ಕಳಪೆ' ಪಟ್ಟ ಯಾರು ಎಂಬ ನಿರ್ಧಾರ ಹೊರಬಿದ್ದಿದ್ದು, ಕಿರಣ್ ಶಾಸ್ತ್ರಿ ಅವರು ಈ ವಾರದ ಕಳಪೆಯಾಗಿ ಆಯ್ಕೆಯಾಗಿದ್ದಾರೆ

By Meghana Pranuth | ಮೇಘನಾ ಪ್ರಣೂತ್‌

1 min read

WhatsAppPost
Kiran shastri
Kiran shastri

ಬಿಗ್ ಬಾಸ್ ಮನೆಯಲ್ಲಿ ಮತ್ತೊಮ್ಮೆ ರಣಕಹಳೆ ಮೊಳಗಿದೆ. ಈ ವಾರದ 'ಕಳಪೆ' ಪಟ್ಟ ಯಾರು ಎಂಬ ನಿರ್ಧಾರ ಹೊರಬಿದ್ದಿದ್ದು, ಕಿರಣ್ ಶಾಸ್ತ್ರಿ ಅವರು ಈ ವಾರದ ಕಳಪೆಯಾಗಿ ಆಯ್ಕೆಯಾಗಿದ್ದಾರೆ. ಇದರಿಂದಾಗಿ ಅವರು ಒಂದು ದಿನ ಜೈಲುವಾಸ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ಸೆಪ್ಟೆಂಬರ್ 25ರ ಸಂಚಿಕೆಯ ಬಿಗ್ ಬಾಸ್ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಬಿಡುಗಡೆ ಮಾಡಿದ್ದು, ಮನೆಯಲ್ಲಿ ಕಿರಣ್ ಶಾಸ್ತ್ರಿ ವಿರುದ್ಧ ಆಕ್ರೋಶದ ಅಲೆ ಎದ್ದಿದೆ.

ಮನೆಯಲ್ಲಿ ಕಳಪೆ ಯಾರು ಎಂಬುದನ್ನು ನಿರ್ಧರಿಸುವ ಪ್ರಕ್ರಿಯೆಯಲ್ಲಿ ಸ್ಪರ್ಧಿಗಳು ಕಿರಣ್ ಶಾಸ್ತ್ರಿ ಅವರ ವಿರುದ್ಧ ಮುಗಿಬಿದ್ದಿದ್ದಾರೆ. ಲಿಖಿತ್, ಅವಿನಾಶ್, ಮಂಜ, ವೈಷ್ಣವಿ ಹಾಗೂ ಸೌಂದರ್ಯಾ ಶೆಟ್ಟಿ ಸೇರಿದಂತೆ ಹಲವು ಸ್ಪರ್ಧಿಗಳು ಕಿರಣ್ ಶಾಸ್ತ್ರಿ ವಿರುದ್ಧ ತೀವ್ರ ಅಸಮಾಧಾನ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಿರಣ್ ಶಾಸ್ತ್ರಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಮಂಜ, ‘ಕೆಟ್ಟ ಯೋಚನೆ ಇರುವ ಕಳ್ಳ ಕಿರಣ್’ ಎಂದು ನೇರವಾಗಿಯೇ ತೀವ್ರ ಪದಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ನುಳಿದ ಸ್ಪರ್ಧಿಗಳ ಸಹಮತ ಅಥವಾ ಆಕ್ಷೇಪಣೆಗಳ ಆಧಾರದ ಮೇಲೆ ಕಿರಣ್ ಶಾಸ್ತ್ರಿ ಅವರಿಗೆ ಕಳಪೆ ಪಟ್ಟ ಸಿಕ್ಕಿದ್ದು, ಶಿಕ್ಷೆಯಾಗಿ ಅವರು ಜೈಲು ಸೇರಬೇಕಿದೆ.

Topics

ಸಂಬಂಧಿತ ಸುದ್ದಿಗಳು