ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಈ ದಿನದಿಂದ ಪ್ರಾರಂಭ ! ಯಾವೆಲ್ಲ ಹೊಸ ಕೊಡುಗೆಗಳಿವೆ ?
ಅಮೆಜಾನ್ ಇಂಡಿಯಾ ತನ್ನ ವರ್ಷದ ಅತಿದೊಡ್ಡ ಮಾರಾಟ ಉತ್ಸವ ‘ಗ್ರೇಟ್ ಇಂಡಿಯನ್ ಫೆಸ್ಟಿವಲ್ 2026’ ನ ಆರಂಭದ ದಿನಾಂಕ ಬಹಿರಂಗಪಡಿಸಿದೆ.
By Archana V Bhat | ಅರ್ಚನಾ ವಿ ಭಟ್
1 min read
ಭಾರತದಲ್ಲಿ ಒಂದು ಕಡೆ ಹಬ್ಬಗಳ ಸೀಸನ್ ಪ್ರಾರಂಭವಾಗುತ್ತಿದ್ದರೆ ಇನ್ನೊಂದು ಕಡೆ ಅದಕ್ಕೆ ಪೂರಕವಾಗಿ ಶಾಪಿಂಗ್ ಸೇಲ್ ಆರಂಭವಾಗುತ್ತದೆ. ಅದಕ್ಕೆ ಇ–ಕಾಮರ್ಸ್ ವೇದಿಕೆಯೂ ಹೊರತಾಗಿಲ್ಲ. ಆನ್‌ಲೈನ್ ಶಾಪಿಂಗ್ ದೈತ್ಯ ಅಮೆಜಾನ್ ಇಂಡಿಯಾ ತನ್ನ ವರ್ಷದ ಅತಿದೊಡ್ಡ ಮಾರಾಟ ಉತ್ಸವ ‘ಗ್ರೇಟ್ ಇಂಡಿಯನ್ ಫೆಸ್ಟಿವಲ್ 2026’ ಯಾವತ್ತಿನಿಂದ ಪ್ರಾರಂಭ ಎಂಬುದನ್ನು ಬಹಿರಂಗಪಡಿಸಿದೆ. ಅಕ್ಟೋಬರ್ 8, 2026 ರಿಂದ ಈ ಮೆಗಾ ಸೇಲ್ ಪ್ರಾರಂಭವಾಗಲಿದೆ ಎಂದು ಅಧಿಕೃತವಾಗಿ ಘೋಷಿಸಿದೆ. ಈ ಸೇಲ್‌ನಲ್ಲಿ ಡಿಜಿಟಲ್ ಉಪಕರಣಗಳು, ಫ್ಯಾಷನ್ ಸಾಮಗ್ರಿಗಳು, ದಿನಬಳಕೆಯ ವಸ್ತುಗಳ ಮೇಲೆ ಭಾರಿ ರಿಯಾಯಿತಿಗಳು ಒಳಗೊಂಡಿರುತ್ತದೆ. ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2026 ಹಾಗೂ ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇ ಎರಡೂ ಒಂದೇ ದಿನ ಪ್ರಾರಂಭವಾಗುತ್ತಿರುವುದರಿಂದ ಈ ಎರಡೂ ಇ–ಕಾಮರ್ಸ್ ವೇದಿಕೆಗಳ ನಡುವೆ ಭರ್ಜರಿ ಪೈಪೋಟಿ ಏರ್ಪಡಲಿದೆ. ಈ ಬಾರಿ ಅಮೆಜಾನ್ ತನ್ನ ಪ್ರೈಮ್ ಸದಸ್ಯರಿಗೆ 10% ಹೆಚ್ಚುವರಿ ಪ್ರಯೋಜನಗಳನ್ನು ನೀಡುವ ಮೂಲಕ ಇನ್ನಷ್ಟು ಒಳ್ಳೆಯ ಸುದ್ದಿಗಳನ್ನು ತಂದಿದೆ.
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಕೊಡುಗೆಗಳೇನು?
* ಗ್ಲೋಬಲ್ ಮೆಮೊರಿ ಸ್ಟೋರೇಜ್ ನಿಂದಾಗಿ ಸ್ಮಾರ್ಟ್‌ಫೋನ್‌ಗಳ ಬೆಲೆ ಏರಿಕೆ ಸಾಮಾನ್ಯವಾಗಿದೆ. ಅದಕ್ಕೆ ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಫೋನ್ ಖರೀದಿದಾರರಿಗೆ ಉತ್ತಮ ಡೀಲ್ ನೀಡಲಿದೆ. ಆಪಲ್, ಸ್ಯಾಮ್‌ಸಂಗ್, ಗೂಗಲ್ ನಂತಹ ಹೆಚ್ಚಿನ ಬೆಲೆಯ ಫೋನ್‌ಗಳನ್ನು ಕೈಗಟಕುವ ದರದಲ್ಲಿ ಖರೀದಿಸಬಹುದಾದ ಅವಕಾಶವನ್ನು ನೀಡಲಿದೆ.
* ಇನ್ನು ಟಿವಿ, ಫ್ಯಾಶನ್ ವಸ್ತುಗಳು, ಗೃಹೋಪಯೋಗಿ ವಸ್ತುಗಳ ಮೇಲೈ ಉತ್ತಮ ಡೀಲ್ ಸಿಗಲಿದೆ.
* ಇವುಗಳ ಜೊತೆಗೆ ಕೆಲವು ವಿನಿಮಯ ಆಫರ್‌ಗಳು, ಬಾಯ್ ಒನ್ ಗೆಟ್ ಒನ್ ಆಫರ್‌ಗಳು, 8 PM ಡೀಲ್ಸ್‌ಗಳು, ಅಮೆಜಾನ್ ಕೋಂಬೋ, ನೋ ಕಾಸ್ಟ್ EMI ನಂತಹ ಆಫರ್‌ಗಳು ಇರಲಿವೆ.
* ಅಮೆಜಾನ್ AI ಚಾಲಿತ ಶಾಪಿಂಗ್ ಅನ್ನು ಸಹ ಆದ್ಯತೆ ನೀಡಿದೆ. ಗ್ರಾಹಕರು ತಾವು ಖರೀದಿಸಲಿರುವ ಉತ್ಪನ್ನಗಳನ್ನು ಪರಿಶೀಲಿಸಿ, ಹೋಲಿಸಿ ನೋಡಬಹುದಾದ ವೈಶಿಷ್ಟ್ಯವನ್ನು ವಿನ್ಯಾಸಗೊಳಿಸಿದೆ.
ಅಮೆಜಾನ್ ಡಿಲೆವರಿ ನೆಟ್‌ವರ್ಕ್ ವಿಸ್ತರಣೆ
ಹಬ್ಬದ ಸೇಲ್ ಪ್ರಾರಂಭವಾಗುವ ಮುನ್ನ ಅಮೆಜಾನ್ ಭಾರತದ 400 ನಗರಗಳನ್ನು ವ್ಯಾಪಿಸಿರುವ ತನ್ನ ಕಾರ್ಯಕ್ಷೇತ್ರದಲ್ಲಿ 1.6 ಲಕ್ಷಕ್ಕೂ ಅಧಿಕ ಸೀಸನಲ್ ಜಾಬ್ ಅನ್ನು ಸೃಷ್ಟಿಸಿದೆ ಎಂದು ಹೇಳಿಕೊಂಡಿದೆ. 60 ಕ್ಕೂ ಹೆಚ್ಚು ನಗರಗಳಲ್ಲಿ ಲಕ್ಷಗಟ್ಟಲೆ ಗ್ರಾಹಕರಿಗೆ ಲಭ್ಯವಿರುವ ಅಮೆಜಾನ್‌ನ ತ್ವರಿತ ವಿತರಣಾ ಸೇವೆ ‘ಅಮೆಜಾನ್ ನೌ’ ಅನ್ನು ಇನ್ನಷ್ಟು ನಗರಗಳಿಗೆ ವಿಸ್ತರಿಸಲು ಯೋಜನೆ ರೂಪಿಸುತ್ತಿದೆ. ಈ ದೀಪಾವಳಿಯವರೆಗೆ 100 ನಗರಗಳನ್ನು ತಲುಪುವ ಯೋಜನೆಯಿದೆ ಎಂದು ಅದು ಹೇಳಿಕೊಂಡಿದೆ. ಗ್ರಾಹಕರು ತಾವು ವಾಸಿಸುವ ಪ್ರದೇಶದಲ್ಲಿ ಈ ಸೌಲಭ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ಅಮೆಜಾನ್ ಶಾಪಿಂಗ್ ಆಪ್ ಅನ್ನು ತೆರೆಯುವ ಮೂಲಕ ಪರೀಕ್ಷಿಸಬಹುದಾಗಿದೆ.
Topics
ಸಂಬಂಧಿತ ಸುದ್ದಿಗಳು
tech
ಹಬ್ಬದ ಕೊಡುಗೆಯಾಗಿ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2026 ! ಈ ದಿನದಿಂದ ಸ್ಮಾರ್ಟ್ಫೋನ್, ಟಿವಿ ಎಲ್ಲ ಅಗ್ಗ!
tech
ಯುಪಿಐ ಲೋಕದಲ್ಲಿ ಹೊಸ ಕ್ರಾಂತಿ: ಎಐ ಮೂಲಕ ಡಿಜಿಟಲ್ ಪಾವತಿಗೆ ಎನ್ಪಿಸಿಐ ಚಿಂತನೆ
tech
ಗೂಗಲ್ನಿಂದ ಸೆಪ್ಟೆಂಬರ್ ಆಂಡ್ರಾಯ್ಡ್ ಡ್ರಾಪ್ : ಇಟ್ಟ ವಸ್ತು ನೆನಪಿಡುವ AI
tech

