ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಮತ್ತು ನಟ ವಿಜಯ್ ಸೇತುಪತಿ ಪ್ರಥಮ ಬಾರಿಗೆ ಒಂದಾಗಿರುವ ಪ್ಯಾನ್-ಇಂಡಿಯಾ ಆಕ್ಷನ್ ಡ್ರಾಮಾ ಸ್ಲಮ್ ಡಾಗ್: 33 ಟೆಂಪಲ್ ರೋಡ್' ಸಿನಿಮಾ ಭರ್ಜರಿ ಆಕ್ಷನ್ ಜೊತೆಗೆ ಹಾರರ್‌ನಲ್ಲಿ ಮೂಡಿಬಂದಿದೆ. ಗೌರಿ ಹೆಗ್ಡೆ ಪಾತ್ರದಲ್ಲಿ ಟಬು ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿರುವ ಚಿತ್ರತಂಡ ಅವರ ಪಾತ್ರವನ್ನು ಪರಿಚಯಿಸುವ ಪವರ್‌ಪುಲ್ ಗ್ಲಿಂಪ್ಸ್ ರಿಲೀಸ್ ಮಾಡಿದೆ.
ಸ್ಲಮ್ (ನಗರದ ಕೊಳಚೆ ಪ್ರದೇಶಗಳ)ನಲ್ಲಿ ಸಾಗುವ ಈ ಸಿನಿಮಾ ಸ್ಲಮ್‌ನಲ್ಲಿ ನೈಜ ಚಿತ್ರಣವನ್ನು ತೆರೆದಿಡಲಿದೆ. ನಟಿ ಟಬು ಎಂಟ್ರಿಯನ್ನು ಅತ್ಯಂತ ಆಕರ್ಷಕವಾಗಿ ತೋರಿಸಲಾಗಿದೆ. ಸಿಗರೇಟ್ ಹಚ್ಚಿಕೊಂಡು ಪರಿಸ್ಥಿತಿಯನ್ನು ಹತೋಟಿಗೆ ತರ್ತಾರೆ. ಸ್ಥಳೀಯ ಗೂಂಡಾಗಳಿಗೆ ಕಪಾಳಮೋಕ್ಷ ಮಾಡಿ ಎಚ್ಚರಿಕೆ ಕೊಡುವ ಖಡಕ್ ಆಫೀಸರ್ ಲುಕ್‌ನಲ್ಲಿ ಟಬು ಕಾಣಿಸಿಕೊಂಡಿದ್ದಾರೆ.
ಗೌರಿ ಹೆಗ್ಡೆ ಬೀದಿಗಳ ಮಧ್ಯದಲ್ಲಿ ಗೂಂಡಾಗಳನ್ನು ಎದುರಿಸುತ್ತಾಳೆ. ಅವರೊಂದಿಗೆ ಕಾದಾಡುತ್ತಾಳೆ. ಲಾಠಿ ಬೀಸಿ ಪರಿಸ್ಥಿತಿಯನ್ನೂ ಹತೋಟಿಗೂ ತರ್ತಾಳೆ. ಸುತ್ತಲೂ ಪೊಲೀಸರು ಮತ್ತು ಜನರ ಗುಂಪೇ ಇದ್ದರೂ ಕೂಡ ಅವರು ಯಾವುದಕ್ಕೂ ಧೃತಿಗೆಡದೆ ಮುನ್ನುಗುತ್ತಾಳೆ. ತಮ್ಮ ಅಧಿಕಾರಕ್ಕೆ ಸವಾಲು ಹಾಕುವವರನ್ನು ಆಕ್ರಮಣಕಾರಿ ರೀತಿಯಲ್ಲಿಯೇ ಹತೋಟಿಗೆ ತರ್ತಾಳೆ.
ಗ್ಲಿಂಪ್ಸ್‌ನಲ್ಲಿ 'ಒನ್ ಫಿಯರ್‌ಲೆಸ್ ವುಮನ್' (ಒಬ್ಬ ಭಯವಿಲ್ಲದ ಮಹಿಳೆ), 'ಪವರ್‌ಫುಲ್ ಆಫೀಸರ್' (ಶಕ್ತಿಶಾಲಿ ಅಧಿಕಾರಿ), 'ರೂತ್‌ಲೆಸ್' (ಕ್ರೂರಿ), 'ಮರ್ಸಿಲೆಸ್' (ದಯೆಯಿಲ್ಲದವಳು) ಮತ್ತು 'ಡೆವಿಲ್ ಇನ್ ದಿ ಡಿಪಾರ್ಟ್‌ಮೆಂಟ್' (ಇಲಾಖೆಯ ರಾಕ್ಷಸಿ) ಅನ್ನೋ ರೀತಿಯಲ್ಲಿ ಚಿತ್ರಿಸಲಾಗಿದೆ. ಗ್ಲಿಂಪ್ಸ್‌ನ ಕೊನೆಯಲ್ಲಿ ಅವರು ಸಂಪೂರ್ಣ ಅಧಿಕಾರದಿಂದ ತಮ್ಮನ್ನು ಪರಿಚಯಿಸಿಕೊಳ್ಳುವ ಸೀನ್ ಪ್ರಮುಖ ಹೈಲೈಟ್ ಆಗಿದೆ.
ಗೌರಿ ಹೆಗ್ಡೆ ಆದಾಯ ತೆರಿಗೆ ಇಲಾಖೆ ಡೆಪ್ಯುಟಿ ಕಮಿಷನರ್, ನಿರ್ದೇಶಕ ಪುರಿ ಜಗನ್ನಾಥ್ ಅವರು ತಮ್ಮ ಸಿನಿಮಾದಲ್ಲಿ ಈ ಪಾತ್ರವನ್ನು ಪಕ್ಕಾ ಮಾಸ್ ಲುಕ್‌ನಲ್ಲಿ ಕಟ್ಟಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ಗ್ಲಿಂಪ್ಸ್‌ನಲ್ಲಿ ವಿಜಯ್ ಸೇತುಪತಿ ಅವರ ಕೆಲವು ದೃಶ್ಯಗಳು ಒಳಗೊಂಡಿವೆ. ಟಬು ತಮ್ಮ ಸ್ಕ್ರೀನ್ ಪ್ರೆಸೆಂಟ್ ಮೂಲಕ ಈ ಪಾತ್ರಕ್ಕೆ ಸಂಪೂರ್ಣ ಜೀವ ತುಂಬಿದ್ದಾರೆ. ಗೌರಿ ಹೆಗ್ಡೆ ಪಾತ್ರಕ್ಕೆ ವಿಶಿಷ್ಠವಾದ ಅಧಿಕಾರ, ಭಯ ಹುಟ್ಟಿಸುವ ಗಾಂಭೀರ್ಯವನ್ನು ತಂದಿದ್ದಾರೆ. ಪಾತ್ರದ ಮೇಲಿನ ಕುತೂಹಲವನ್ನು ತಕ್ಷಣವೇ ಹೆಚ್ಚುತ್ತದೆ,
ಸಿನಿಮಾದಲ್ಲಿ ಸಂಯುಕ್ತಾ ನಾಯಕಿಯಾಗಿದ್ದು, ದುನಿಯಾ ವಿಜಯ್ ನೆಗಟಿವ್ ಪಾತ್ರದಲ್ಲಿದ್ದಾರೆ. ಬ್ರಹ್ಮಾಜಿ ಮತ್ತು ವಿಟಿವಿ ಗಣೇಶ್ ಕೂಡ ಪ್ರಮುಖ ತಾರಾಗಣವಿದೆ. ಸ್ಯಾಮ್ ಕೆ. ನಾಯ್ಡು ಛಾಯಾಗ್ರಹಣ ನಿರ್ವಹಿಸುತ್ತಿದ್ದು, ಹರ್ಷವರ್ಧನ್ ರಾಮೇಶ್ವರ್ ಸಂಗೀತ ಸಂಯೋಜಿಸಿದ್ದು, ಸಂತೋಷ್ ನೂಜಿಲ್ಲ ಸಂಕಲನದ (ಎಡಿಟಿಂಗ್) ಹೊಣೆ ಹೊತ್ತಿದ್ದಾರೆ. 'ಸ್ಲಮ್ ಡಾಗ್: 33 ಟೆಂಪಲ್ ರೋಡ್' ಚಿತ್ರವನ್ನು ಪೂರಿ ಕನೆಕ್ಟ್ಸ್ ಬ್ಯಾನರ್ ಅಡಿಯಲ್ಲಿ ಪೂರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ಅವರು, ಜೆಬಿ ಮೋಷನ್ ಪಿಕ್ಚರ್ಸ್‌ನ ಜೆಬಿ ನಾರಾಯಣ ರಾವ್ ಕೊಂಡ್ರೊಲ್ಲಾ ಅವರ ಸಹಯೋಗದೊಂದಿಗೆ ನಿರ್ಮಿಸುತ್ತಿದ್ದಾರೆ.
ಈಗಾಗಲೇ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್, ಟೀಸರ್ ಮತ್ತು ಈಗ ಬಿಡುಗಡೆಯಾಗಿದ್ದು, ಈ ಅದ್ಭುತ ಗ್ಲಿಂಪ್ಸ್ ಮೂಲಕ ಚಿತ್ರವು ನಿರಂತರವಾಗಿ ನಿರೀಕ್ಷೆಯನ್ನು ಹೆಚ್ಚಿಸುತ್ತಿದೆ. ಸಿನಿಮಾದಲ್ಲಿನ ಪಾತ್ರಗಳು ಮತ್ತು ಅವುಗಳ ಜಗತ್ತಿನ ಸುತ್ತಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಸಿನಿಮಾವು ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೆ ಸಿದ್ಧವಾಗುತ್ತಿದೆ.