ಟಾಕ್ಸಿಕ್‌ನಲ್ಲಿ ಯಶ್‌ - ಕಿಯಾರಾ ಅಡ್ವಾಣಿ ಹಾಟ್‌ ದೃಶ್ಯ : ಬೆಂಬಲಕ್ಕೆ ನಿಂತ ಪತಿ ಸಿದ್ಧಾರ್ಥ್ ಮಲ್ಹೋತ್ರಾ

ಟಾಕ್ಸಿಕ್‌ ಟೀಸರ್‌ ನಲ್ಲಿಯೂ ಕಿಯಾರಾ ಅಡ್ವಾಣಿ ಹಾಗೂ ಯಶ್‌ ಹೆಚ್ಚು ರೋಮ್ಯಾಟಿಂಕ್‌ ಆಗಿರುವ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಇದು ವಿವಾದವನ್ನು ಹುಟ್ಟು ಹಾಕಿದೆ.

By Arun Gundmi | ಅರುಣ್‌ ಗುಂಡ್ಮಿ · Editor-in-Chief

2 min read

WhatsAppPost
sidharth Malhotra backs kiara Advani toxic bold scenes yash
sidharth Malhotra backs kiara Advani toxic bold scenes yash

ಟಾಕ್ಸಿಕ್‌ ಸದ್ಯ ಭಾರತೀಯ ಚಿತ್ರರಂಗವಲ್ಲ, ಹಾಲಿವುಡ್‌ನಲ್ಲೂ ಹವಾ ಸೃಷ್ಟಿಸಿದೆ. ರಾಕಿಂಗ್‌ ಸ್ಟಾರ್‌ ಯಶ್‌ - ಕಿಯಾರಾ ಅಡ್ವಾಣಿ ನಟಿಸಿರುವ ಈ ಸಿನಿಮಾದ ಟೀಸರ್‌ ಬಿಡುಗಡೆ ಆಗಿದೆ. ಸಾಂಗ್‌ ಮಾತ್ರವಲ್ಲ ಟೀಸರ್‌ ನಲ್ಲಿಯೂ ಕಿಯಾರಾ ಅಡ್ವಾಣಿ ಹಾಗೂ ಯಶ್‌ ಹೆಚ್ಚು ರೋಮ್ಯಾಟಿಂಕ್‌ ಆಗಿರುವ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಇದು ವಿವಾದವನ್ನು ಹುಟ್ಟು ಹಾಕಿದೆ. ಆದರೆ ಕಿಯಾರಾ ಅವರು ಸಿನಿಮಾಕ್ಕಾಗಿ ತಮ್ಮ ಸಮರ್ಪಣೆ ಮಾಡಿಕೊಂಡಿರುವುದಕ್ಕೆ ಪತಿ ಸಿದ್ದಾರ್ಥ ಮಲ್ಹೋತ್ರಾ ಶ್ಲಾಘಿಸಿದ್ದಾರೆ.

ಕಿಯಾರಾ ಅಡ್ವಾಣಿ ಬೆಂಬಲಿಸಿದ ಸಿದ್ಧಾರ್ಥ್ ಮಲ್ಹೋತ್ರಾ

ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಸಿನಿಮಾದ ಬಹುನಿರೀಕ್ಷಿತ ಟ್ರೇಲರ್ ಬಿಡುಗಡೆಯ ಬೆನ್ನಲ್ಲೇ ಜನರು ಸಿನಿಮಾ ನೋಡಲು ಇನ್ನಷ್ಟು ಕಾತರರಾಗಿದ್ದಾರೆ. ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ ಸಿನಿಮಾದಲ್ಲಿ ಆಕ್ಷನ್‌ ಜೊತೆ ಜೊತೆಗೆ ಉತ್ತಮ ಕಥಾಹಂದರವನ್ನೂ ಒಳಗೊಂಡಿದೆ. ಸಿನಿಮಾ ಬಿಡುಗಡೆಗೆ ಮೊದಲೇ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ.

ಅದ್ರಲ್ಲೂ ನಟಿ ಕಿಯಾರಾ ಅಡ್ವಾಣಿ ಹಾಗೂ ಯಶ್‌ ಅವರ ಜೊತೆಗಿನ ರೋಮ್ಯಾಂಟಿಕ್‌ ದೃಶ್ಯಗಳು ಹೆಚ್ಚು ಗಮನ ಸೆಳೆದಿದೆ. ಗೀತು ಮೋಹನ್‌ದಾಸ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಟಾಕ್ಸಿಕ್‌ ಸಿನಿಮಾದಲ್ಲಿ ನಟಿ ಕಿಯಾರಾ ಅಡ್ವಾಣಿ ನಾದಿಯಾ ಪಾತ್ರದಲ್ಲಿ ನಟಿಸಿದ್ದಾರೆ.

ಕಿಯಾರಾ ಅಡ್ವಾಣಿ ಮಾತ್ರವಲ್ಲದೇ ಬಾಲಿವುಡ್‌ನ ಖ್ಯಾತ ನಟಿ ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಕೂಡ ನಟಿಸಿದ್ದಾರೆ. ಯಶ್ ಜೊತೆಗಿನ ಕಿಯಾರಾ ಅವರ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗಿದ್ದು, ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ.

ಆದರೆ ಇದೆಲ್ಲದರ ನಡುವಲ್ಲೇ ಕಿಯಾರಾ ಅಡ್ವಾಣಿ ಅವರ ಪತಿ ಸಿದ್ದಾರ್ಥ್‌ ಮಲ್ಹೋತ್ರಾ ಮಾತ್ರ ಪತ್ನಿಯನ್ನು ಇನ್ನಷ್ಟು ಹುರಿದುಂಬಿಸಿದ್ದಾರೆ. ಟಾಕ್ಸಕ್‌ ನಡುವಿನ ಎಲ್ಲಾ ವಂದತಿಗಳ ನಡುವಲ್ಲೇ ಸಿದ್ದಾರ್ಥ್‌ ಮಲ್ಹೋತ್ರಾ ಅವರು ಕಿಯಾರಾ ಅವರ ಕಠಿಣ ಪರಿಶ್ರಮ, ಸಿನಿಮಾಕ್ಕೆ ಅವರ ಸಮರ್ಪಣೆಯನ್ನು ಶ್ಲಾಘಿಸಿದ್ದಾರೆ.

ಟಾಕ್ಸಿಕ್‌ ಸಿನಿಮಾದ ಟ್ರೈಲರ್‌ ವೀಕ್ಷಿಸಿರುವ ಸಿದ್ದಾರ್ಥ್‌ ಕಿಯಾರಾ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ. ಸಿನಿಮಾದ ಟ್ರೇಲರ್ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ಹಂಚಿಕೊಳ್ಳಲು ಇನ್‌ಸ್ಟಾಗ್ರಾಂನಲ್ಲಿ ಅವರು ಕಥೆಗಳನ್ನು ಬರೆದಿದ್ದಾರೆ, "ಪ್ರಯತ್ನ, ಉತ್ಸಾಹ, ಇವೆಲ್ಲವೂ ದೊಡ್ಡ ಪರದೆಯ ಮೇಲೆ ತೋರಿಸಲಿದೆ. ನಿಮ್ಮ ಅತ್ಯುತ್ತಮ ಸಾಧನೆಗಳಲ್ಲಿ ಒಂದಾಗಲಿದ್ದೇನೆ ಕಿ!! @geetu_mohandas @thenameisyash, ನೀವು ಮತ್ತು ಇಡೀ ತಂಡವು ರಚಿಸಿದ ಮ್ಯಾಜಿಕ್ ಅನ್ನು ನೋಡಲು ಕಾಯಲು ಸಾಧ್ಯವಿಲ್ಲ. #Toxic ತಂಡಕ್ಕೆ ಶುಭಾಶಯಗಳು. ಆಗಸ್ಟ್ 26 ಕ್ಕೆ ಎದುರು ನೋಡುತ್ತಿದ್ದೇನೆ. ಎಂದಿದ್ದಾರೆ.

ಸದ್ಯ ಸಿದ್ದಾರ್ಥ ಮಲ್ಹೋತ್ರಾ ಅವರ ಪ್ರತಿಕ್ರಿಯೆ ಇದೀಗ ಅಭಿಮಾನಿಗಳ ಗಮನ ಸೆಳೆದಿದೆ. ಕಿಯಾರಾ ತನ್ನ ಪಾತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳನ್ನು ಎದುರಿಸುತ್ತಿದ್ದು, ವಿವಾದದ ಬೆನ್ನಲ್ಲೇ ಸಿದ್ದಾರ್ಥ ಅವರ ಪೋಸ್ಟ್‌ ಕಿಯಾರಾ ಅವರಿಗೆ ಮಾನಸಿಕ ಸ್ಥೈರ್ಯವನ್ನು ತಂದುಕೊಟ್ಟಿದೆ.

ಕಿಯಾರಾಗೆ ನಟ ಯಶ್‌ ಬೆಂಬಲ

ನಟಿ ಕಿಯಾರಾ ಅವರನ್ನು ಬೆಂಬಲಿಸಿರೋದು ಕೇವಲ ಸಿದ್ದಾರ್ಥ ಮಲ್ಹೋತ್ರಾ ಮಾತ್ರವಲ್ಲ, ನಟ ಯಶ್‌ ಕೂಡ ನಟಿಯ ಬಗ್ಗೆ ಗುಣಗಾನ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಡೆದಿದ್ದ ಸಿನಿಮಾದ ಟ್ರೈಲರ್‌ ಬಿಡುಗಡೆ ಸಮಾರಂಭದ ವೇಳೆಯಲ್ಲಿ ಯಶ್‌ ಕೂಡ ಸಹ ನಟಿಯನ್ನು ಹೊಗಳಿದಿದ್ದಾರೆ. ಇತರರ ಅಭಿಪ್ರಾಯಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಯಶ್ ಕಿಯಾರಾ ಅವರ ಅಭಿನಯವನ್ನು "ತಬಹಿ" ಎಂದು ಬಣ್ಣಿಸಿದ್ದರು. ಸಿನಿಮಾಕ್ಕಾಗಿ ಅವರ ಸಮರ್ಪಣೆಯನ್ನು ಶ್ಲಾಘಿಸಿದ್ದರು.

ಕಿಯಾರಾ, ನೀವು ಟಾಕ್ಸಿಕ್‌ನಲ್ಲಿ ನಿರ್ವಹಿಸಿದ ಪಾತ್ರ, ನೀವು ತುಂಬಾ ಸಮರ್ಪಿತರು. ಆರಂಭದಲ್ಲಿ, ಈ ಎಲ್ಲಾ ನಟರನ್ನು ಪಡೆಯುವುದು ಒಂದು ಸಮಸ್ಯೆ ಎಂದು ನಾವೆಲ್ಲರೂ ಭಾವಿಸಿದ್ದೆವು, ಆದರೆ ಕಿಯಾರಾ ತುಂಬಾ ಸರಳ ವ್ಯಕ್ತಿ. ಮತ್ತು ನಟಿಯಾಗಿ ನೀವು ಏನು ಅನುಭವಿಸಬೇಕು, ಇತರ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದಿದ್ದರು. ಗೀತು ಮೋಹನ್ ದಾಸ್ ನಿರ್ದೇಶನದ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಸಿನಿಮಾ ಇದೇ ಆಗಸ್ಟ್ 26, 2026 ರಂದು ವಿಶ್ವಾದ್ಯಂತ ಬಿಡುಗಡೆ ಆಗಲಿದೆ.

Topics

ಸಂಬಂಧಿತ ಸುದ್ದಿಗಳು