ಸಲಾಡ್ ಪ್ರಿಯರೇ ಹುಷಾರ್‌.. ಲೆಟಿಸ್ ಸೊಪ್ಪಿನಿಂದ ಹರಡುತ್ತಿದೆ ‘ಸೈಕ್ಲೋಸ್ಪೊರಿಯಾಸಿಸ್’ ಸೋಂಕು!

ನಾವು ಆರೋಗ್ಯಕರ ಎಂದು ಭಾವಿಸಿ ತಿನ್ನುವ ಲೆಟಿಸ್ ಮತ್ತು ಸಲಾಡ್ ಸೊಪ್ಪಿನಿಂದಲೇ ಈಗ ಅಪಾಯಕಾರಿ ಸೋಂಕೊಂದು ಹರಡುತ್ತಿದೆ ಎಂದು ಮಿಗಿಚನ್ ಆರೋಗ್ಯ ಇಲಾಖೆ ಎಚ್ಚರಿಸಿದೆ.

ಮಿಗಿಚನ್‌ನಲ್ಲಿ ತೀವ್ರ ಅತಿಸಾರ (ಭೇದಿ) ಉಂಟುಮಾಡುವ ‘ಸೈಕ್ಲೋಸ್ಪೊರಿಯಾಸಿಸ್’ (Cyclosporiasis) ಎಂಬ ಸೋಂಕು ವೇಗವಾಗಿ ಹರಡುತ್ತಿದ್ದು, ಇದಕ್ಕೆ ನಾವು ಆರೋಗ್ಯಕರ ಎಂದು ಭಾವಿಸಿ ತಿನ್ನುವ ಲೆಟಿಸ್ ಮತ್ತು ಸಲಾಡ್ ಸೊಪ್ಪಿನಿಂದಲೇ ಈಗ ಅಪಾಯಕಾರಿ ಸೋಂಕೊಂದು ಹರಡುತ್ತಿದೆ ಎಂದು ಮಿಗಿಚನ್ ಆರೋಗ್ಯ ಇಲಾಖೆ ಎಚ್ಚರಿಸಿದೆ. ಅಮೆರಿಕದಾದ್ಯಂತ ಈಗಾಗಲೇ ಸುಮಾರು 3,000 ಜನರನ್ನು ಕಾಡಿರುವ ‘ಸೈಕ್ಲೋಸ್ಪೊರಿಯಾಸಿಸ್’ (Cyclosporiasis) ಎಂಬ ಪರೋಪಜೀವಿ ಸೋಂಕಿಗೆ ಈ ಸಲಾಡ್ ಸೊಪ್ಪುಗಳೇ ಪ್ರಮುಖ ಕಾರಣ ಎನ್ನಲಾಗಿದೆ.

ಏನಿದು ಸೋಂಕು? ಇದರ ಲಕ್ಷಣಗಳೇನು?

ಇದು ಕಲುಷಿತ ನೀರು ಅಥವಾ ಆಹಾರದ ಮೂಲಕ ಹರಡುವ ಪರೋಪಜೀವಿ (Parasite) ಸೋಂಕಾಗಿದ್ದು, ತಿಂದ ಒಂದು ವಾರದೊಳಗೆ ಈ ಕೆಳಗಿನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ:

ಆರೋಗ್ಯ ತಜ್ಞರು ನೀಡುವ ಮುನ್ನೆಚ್ಚರಿಕೆಗಳೇನು?

  1. ಪ್ಯಾಕ್ ಮಾಡಿದ ಸಲಾಡ್‌ಗಳಿಗೆ ನೋ ಹೇಳಿ: ಸದ್ಯಕ್ಕೆ ಸೂಪರ್ ಮಾರ್ಕೆಟ್‌ಗಳಲ್ಲಿ ಸಿಗುವ ಕತ್ತರಿಸಿ ಪ್ಯಾಕ್ ಮಾಡಿದ ಸಲಾಡ್ ಮಿಕ್ಸ್ ಬಳಸಬೇಡಿ.

  2. ಹೊರಪದರಗಳನ್ನು ತೆಗೆಯಿರಿ: ಇಡೀ ಲೆಟಿಸ್ ಸೊಪ್ಪನ್ನು ತಂದು, ಅದರ ಮೇಲಿನ ಎಲೆಗಳನ್ನು ತೆಗೆದುಹಾಕಿ ಬಳಸಿ.

  3. ಸ್ವಚ್ಛತೆಗೆ ಆದ್ಯತೆ: ಹರಿಯುವ ನೀರಿನಲ್ಲಿ ಸೊಪ್ಪನ್ನು ಹತ್ತಾರು ಬಾರಿ ಚೆನ್ನಾಗಿ ತೊಳೆಯಿರಿ.

  4. ಬೇಯಿಸಿ ತಿನ್ನುವುದು ಉತ್ತಮ: ತರಕಾರಿ ಹಾಗೂ ಸೊಪ್ಪುಗಳನ್ನು ಹಸಿಯಾಗಿ ತಿನ್ನುವ ಬದಲು ಬೇಯಿಸಿ ತಿನ್ನುವುದು ಅತ್ಯಂತ ಸುರಕ್ಷಿತ.

Exit mobile version