ದಿನಕ್ಕೆ ಎರಡು ಬಾರಿ ಇದನ್ನು ಬಳಸಿ : ಪದೇಪದೇ ಕಾಡುವ ಗಂಟಲು ನೋವಿಗೆ ಗುಡ್‌ಬೈ ಹೇಳಿ

ಗಂಟಲಿನ ಕಿರಿಕಿರಿ, ಊತ, ನೋವು ಹಾಗೂ ಗಂಟಲು ಒಣಗುವಿಕೆಗೆ ಉಪ್ಪು ನೀರು ಪರಿಣಾಮಕಾರಿ ಎಂದು ಅಧ್ಯಯನ ಹೇಳಿದೆ. ಉಪ್ಪುನೀರು ಗಂಟಲು ನೋವನ್ನು ಕಡಿಮೆ ಮಾಡುವುದಾದರೂ ಹೇಗೆ? ಇಲ್ಲಿದೆ ಓದಿ.

ಮಳೆಗಾಲ ಪ್ರಾರಂಭವೇನೋ ಆಗಿದೆ. ಆದರೆ ಹವಾಮಾನದ ವೈಪರಿತ್ಯದಿಂದಾಗಿ ಋತುಮಾನದ ಕಾಯಿಲೆಗಳು ಹೆಚ್ಚಾಗಿದೆ. ಶೀತ, ಕೆಮ್ಮು, ಗಂಟಲು ನೋವು, ಜ್ವರದಂತಹ ಕಾಯಿಲೆಗಳು ಎಲ್ಲರನ್ನು ಪದೇ ಪದೇ ಕಾಡುತ್ತಿದೆ. ಒಮ್ಮೆ ಮಳೆ ಮತ್ತೊಮ್ಮೆ ಬಿಸಿಲಿನಿಂದಾಗಿ ಗಂಟಲು ನೋವು ಬಹಳ ಬೇಗನೆ ಕಾಣಿಸಿಕೊಳ್ಳುತ್ತದೆ. ಅದಕ್ಕೆ ಎಷ್ಟೇ ಔಷಧಿಗಳನ್ನು ತೆಗೆದುಕೊಂಡರೂ ಮೇಲಿಂದ ಮೇಲೆ ಬಾಧಿಸುತ್ತಲೇ ಇರುತ್ತದೆ. ಆದರೆ ಇದಕ್ಕೆ ಈಗ ಸರಳ ಮನೆಮದ್ದನ್ನು ರಿಸರ್ಚ್‌ ಗೇಟ್‌ ಅಧ್ಯಯನವು ತಿಳಿಸಿದೆ. ಅದೇನೆಂದರೆ ಉಪ್ಪುನೀರಿನಿಂದ ಗಾರ್ಗಲಿಂಗ್‌ ಅಥವಾ ಬಾಯಿ ಮುಕ್ಕುಳಿಸುವುದರಿಂದ ಗಂಟಲು ನೋವು ಕಡಿಮೆಯಾಗುತ್ತದೆ ಎಂದು ಹೇಳಿದೆ. ಹೇಗೆ ಅಂತೀರಾ? ಇಲ್ಲಿದೆ ಓದಿ.

ಉಪ್ಪು ನೀರಿನಿಂದ ಗಂಟಲು ನೋವು ಹೇಗೆ ಶಮನ?

ಉಪ್ಪು ನೀರು ಹೈಪರ್ಟೋನಿಕ್‌ ಆಗಿದೆ. ಅಂದರೆ ಉಪ್ಪು ನೀರು ಗಂಟಲಿನಲ್ಲಿರುವ ದ್ರವಕ್ಕಿಂತ ಹೆಚ್ಚು ಸಾಂದ್ರತೆಯನ್ನು ಹೊಂದಿದೆ. ಬೆಚ್ಚಗಿನ ಉಪ್ಪು ನೀರಿನಿಂದ ಗಾರ್ಗಲಿಂಗ್‌ ಮಾಡಿದಾಗ ಅದು ಊದಿಕೊಂಡ ಅಂಗಾಂಶಗಳಿಂದ ನೀರನ್ನು ಹೊರತೆಗೆಯುತ್ತದೆ. ಇದರಿಂದ ಗಂಟಲುನೋವು ಹಾಗೂ ಊತ ಕಡಿಮೆಯಾಗುತ್ತದೆ. ಬೆಚ್ಚಗಿನ ನೀರು ಗಂಟಲಿನ ಹಿಂಭಾಗದಲ್ಲಿರುವ ಲೋಳೆಯನ್ನ ಸಡಿಲಗೊಳಿಸುತ್ತದೆ. ಉಪ್ಪು ನೀರು ಬ್ಯಾಕ್ಟೀರಿಯಾಗಳ ವೃದ್ದಿಯನ್ನು ಕಡಿಮೆ ಮಾಡುತ್ತದೆ. ಋತುಮಾನದ ಸಾಮಾನ್ಯ ಗಂಟಲನೋವಿಗೆ ಉಪ್ಪು ನೀರು ಪರಿಣಾಮಕಾರಿ ಎಂದು 2014ರ ಅಧ್ಯಯನವೊಂದು ಕಂಡುಹಿಡಿದಿದೆ.

ಇದನ್ನೂ ಓದಿ: ಸಲಾಡ್ ಪ್ರಿಯರೇ ಹುಷಾರ್‌.. ಲೆಟಿಸ್ ಸೊಪ್ಪಿನಿಂದ ಹರಡುತ್ತಿದೆ ‘ಸೈಕ್ಲೋಸ್ಪೊರಿಯಾಸಿಸ್’ ಸೋಂಕು!

ಉಪ್ಪುನೀರಿನಿಂದ ಗಾರ್ಗಲಿಂಗ್ ಮಾಡುವ ಸರಿಯಾದ ವಿಧಾನ

ಗಂಟಲಿನ ಕಿರಿಕಿರಿ, ಊತ, ನೋವು ಹಾಗೂ ಗಂಟಲು ಒಣಗುವಿಕೆಗೆ ಉಪ್ಪು ನೀರು ಪರಿಣಾಮಕಾರಿ ಎಂದು ಅಧ್ಯಯನ ಹೇಳಿದೆ. ಹಾಗಾದರೆ ಗಾರ್ಗಲಿಂಗ್‌ ಮಾಡುವ ಸರಿಯಾದ ಕ್ರಮ ಯಾವುದು? ಒಂದು ಲೋಟ ಬೆಚ್ಚಗಿನ ನೀರಿಗೆ ಅರ್ಧ ಟೀ ಚಮಚ ಉಪ್ಪು ಸೇರಿಸಿ. ಒಂದು ಚಮಚದ ಸಹಾಯದಿಂದ ಉಪ್ಪು ಸಂಪೂರ್ಣವಾಗಿ ಕರಗುವವರಗೆ ಮಿಕ್ಸ್‌ ಮಾಡಿ. ಒಂದು ಸಿಪ್‌ ನೀರನ್ನು ಬಾಯಿಯಲ್ಲಿ ಹಾಕಿಕೊಂಡು ತಲೆಯನ್ನು ಸ್ವಲ್ಪ ಹಿಂದಕ್ಕೆ ಮಾಡಿ ಅಂದರೆ ಮುಖವನ್ನು ಮೇಲಕ್ಕೆ ಎತ್ತಿ 15 ರಿಂದ 30 ಸೆಕೆಂಡುಗಳ ಕಾಲ ಗಾರ್ಗಲ್‌ ಮಾಡಿ. ಹೀಗೆ ನೀರು ಖಾಲಿಯಾಗುವವರೆಗೆ ಪುನಾರವರ್ತಿಸಿ. ಇದನ್ನು ಬೆಳಿಗ್ಗೆ ಎದ್ದ ತಕ್ಷಣ ಮತ್ತು ರಾತ್ರಿ ಮಲಗುವ ಮೊದಲು ಮಾಡಿ. ಇದರಿಂದ ಗಂಟಲುನೋವು ಬಹಳ ಬೇಗ ಕಡಿಮೆಯಾಗುತ್ತದೆ.

Exit mobile version