ಇಂದಿನ ಧಾವಂತದ ಜೀವನದಲ್ಲಿ ಪ್ರತಿಯೊಬ್ಬರು ಒಂದಲ್ಲ ಒಂದು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅದರಲ್ಲೂ ಈ ಡಿಜಿಟಲ್ ಯುಗದಲ್ಲಿ ಗಂಟೆಗಟ್ಟಲೆ ಒಂದೇ ಭಂಗಿಯಲ್ಲಿ ಕುಳಿತು ಕೆಲಸ ಮಾಡುವ ಅನಿವಾರ್ಯತೆಯಿದೆ. ಇದರಿಂದಾಗಿ ಬಹಳಷ್ಟು ಜನರಿಗೆ ಬೆನ್ನು, ಕುತ್ತಿಗೆ ಮತ್ತು ಭುಜಗಳಲ್ಲಿ ನೋವು ಸಾಮಾನ್ಯವಾಗಿದೆ. ಇದಕ್ಕೆ ಕೇವಲ ಲ್ಯಾಪ್‌ಟಾಪ್, ಮೊಬೈಲ್‌ನಂತಹ ಗ್ಯಾಜೆಟ್‌ಗಳೊಂದೇ ಕಾರಣವಲ್ಲ. ಕಳಪೆ ಆಹಾರ ಪದ್ಧತಿ, ಕಡಿಮೆ ದೈಹಿಕ ಚಟುವಟಿಕೆಯೂ ಕಾರಣವಾಗಿದೆ. ಇದೇನೂ ಗಂಭೀರ ಸಮಸ್ಯೆಯಲ್ಲದಿದ್ದರೂ ದೈನಂದಿನ ಚಟುವಟಿಕೆಗೆ ಅಡ್ಡಿಪಡಿಸುವುದಂತು ಖಂಡಿತ. ಹಾಗಾದರೆ ಈ ಸಣ್ಣ ನೋವಿಗೆ ಗುಡ್‌ಬೈ ಹೇಳುವುದು ಹೇಗೆ? ಆಯುರ್ವೇದದಲ್ಲಿ ಇದಕ್ಕೆ ಸರಳ ಮತ್ತ ನೈಸರ್ಗಿಕ ಪರಿಹಾರ ಸೂಚಿಸಲಾಗಿದೆ. ಚಿಕ್ಕ ಬೀಜವಾದ ಎಳ್ಳು ನೋವಿಗೆ ಪರಿಹಾರವೆನ್ನಲಾಗಿದೆ. ಪ್ರತಿದಿನ ಎಳ್ಳು ಸೇವಿಸುವುದರಿಂದ ನೋವು ಕಡಿಮೆಯಾಗುತ್ತದೆ. ಆದರೆ ಅದನ್ನು ಸೇವಿಸುವ ಸರಿಯಾದ ಕ್ರಮ ಯಾವುದು ಎಂದು ನೋಡೋಣ.
ಎಳ್ಳಿನಲ್ಲೇನಿದೆ?
ಎಳ್ಳು ಚಿಕ್ಕ ಬೀಜವಾದರೂ ಅಗಾಧ ಪೋಷಕಾಂಶಗಳನ್ನು ಹೊಂದಿದೆ. ಮೂಳೆ ಮತ್ತು ಕೀಲುಗಳನ್ನು ಒಳಗಿನಿಂದ ಬಲಪಡಿಸುತ್ತದೆ. ಇದರಲ್ಲಿರುವ ಕ್ಯಾಲ್ಸಿಯಂ, ಮೆಗ್ನೇಸಿಯಮ್ ಮತ್ತು ರಂಜಕವು ಮೂಳೆಯ ಸಾಂದ್ರತೆಯನ್ನು ಹೆಚ್ಚಿಸುತ್ತದೆ. ಮೂಳೆ ಮುರಿತದ ಅಪಾಯವನ್ನು ಕಡಿಮೆ ಮಾಡುತ್ತದೆ. ಎಳ್ಳಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಒಮೆಗಾ ಕೊಬ್ಬಿನಾಮ್ಲಗಳು ಕೀಲುಗಳ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಸಂಧಿವಾತ ಮತ್ತು ದೀರ್ಘಕಾಲದ ನೋವು ಕಡಿಮೆಯಾಗುತ್ತದೆ. ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತೆ. ಇದರಲ್ಲಿರುವ ಪ್ರೋಟೀನ್ ಸ್ನಾಯುಗಳನ್ನು ಬಲಪಡಿಸುತ್ತದೆ. ಫೈಬರ್ ಅಂಶದಿಂದ ಸಮೃದ್ಧವಾಗಿರುವ ಎಳ್ಳು ಜೀರ್ಣಕ್ರಿಯೆ ಸುಧಾರಿಸುತ್ತದೆ.
ಎಳ್ಳನ್ನು ಹೇಗೆ ಸೇವಿಸಬೇಕು?
ಒಂದು ಚಮಚ ಎಳ್ಳನ್ನು ಹುರಿದು ಉಗುರುಬೆಚ್ಚಗಿನ ನೀರು ಅಥವಾ ಜೇನುತುಪ್ಪದೊಂದಿಗೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಉತ್ತಮ. ಮತ್ತೊಂದು ವಿಧಾನವೆಂದರೆ ಎಳ್ಳನ್ನು ಸಲಾಡ್, ಮೊಸರು ಅಥವಾ ತರಕಾರಿಗಳಲ್ಲಿ ಬೆರೆಸಿ ತಿನ್ನಬಹುದು. ಅಥವಾ ಕೆಲವೊಂದು ಸಲಾಡ್‌ಗಳಗೆ ಎಳ್ಳೆಯನ್ನು ಸಹ ಬಳಸಬಹುದು.
ಇದನ್ನೂ ಓದಿ: ಈ ಮನೆಮದ್ದುಗಳನ್ನು ವಾರದಲ್ಲಿ ಕೇವಲ 2 ದಿನ ಉಪಯೋಗಿಸಿ ನೋಡಿ ! ಡಾಂಡ್ರಫ್ ಸಮಸ್ಯೆಗೆ ಸಿಗುತ್ತೆ ಸಂಪೂರ್ಣ ಮುಕ್ತಿ
ಎಳ್ಳೆಣ್ಣೆ ಮಸಾಜ್
ನೋವು ನಿವಾರಣೆ ಎಳ್ಳು ತಿನ್ನುವುದು ಒಂದು ಉಪಾಯವಾದರೆ ಇನ್ನೊಂದು ಎಳ್ಳೆಣ್ಣೆಯ ಮಸಾಜ್. ಇದು ಕೂಡಾ ನೋವಿಗೆ ಅತ್ಯುತ್ತಮ ಪರಿಹಾರ. ಪ್ರತಿದಿನ ಸ್ವಲ್ಪ ಬೆಚ್ಚಗಿನ ಎಳ್ಳೆಣ್ಣೆಯಿಂದ ನೋವಿದ್ದಲ್ಲಿ ಮಸಾಜ್ ಮಾಡಿ. ಇದು ಆಯಾಸ, ಊತ ಮತ್ತು ನೋವಿನಿಂದ ತ್ವರಿತ ಪರಿಹಾರ ನೀಡುತ್ತದೆ.
