Delhi Blast: ದೆಹಲಿ ಸ್ಫೋಟವನ್ನು ಸದನದಲ್ಲಿ ಹಾಡಿಹೊಗಳಿದ ಪಾಕ್​ ರಾಜಕಾರಣಿ : ಮತ್ತೊಮ್ಮೆ ಬಯಲಾಯ್ತು ಪಾಕ್​ ನೀಚಕೃತ್ಯ

Delhi Blast: ದೇಶದಲ್ಲಿ ಪಹಲ್ಗಾಮ ದಾಳಿಯ ಕರಿನೆರಳು ಮಾಸುವ ಮುನ್ನವೇ ದೆಹಲಿಯ ಕೆಂಪುಕೋಟೆಯ ಬಳಿಯಲ್ಲಿ ಭೀಕರ ಸ್ಫೋಟ ಸಂಭವಿಸಿ ಅನೇಕರ ಜೀವ ಬಲಿಪಡೆದಿತ್ತು. ಅಪರೇಷನ್​ ಸಿಂಧೂರದ ಮೂಲಕ ಪಾಕಿಸ್ತಾನದ ಸಂಹಾರಕ್ಕೆ ಮುಂದಾಗಿದ್ದ ಭಾರತದ ಎದುರು ಪಾಕ್​ ಮಂಡಿಯೂರಿತ್ತು.

ಆದರೆ ಇದಾದ ಬಳಿಕವೂ ಪಾಕ್​ ತನ್ನ ಹಳೆಚಾಳಿ ಮುಂದುವರಿಸುವ ಲಕ್ಷಣ ಮಾತ್ರ ಕಾಣುತ್ತಿಲ್ಲ. ಯುದ್ಧ ಮಾಡುವ ಧೈರ್ಯವಿಲ್ಲದೇ ಪರದಾಡಿದ್ದ ಪಾಕಿಸ್ತಾನ ಮತ್ತೊಮ್ಮೆ ಭಾರತದಲ್ಲಿ ಉಗ್ರ ಚಟುವಟಿಕೆ ನಡೆಸಿರುವುದರ ಬಗ್ಗೆ ಬಾಯ್ಬಿಟ್ಟಿದೆ.

ಕಳೆದ ವಾರ ದೆಹಲಿಯಲ್ಲಿ ನಡೆದ ಕಾರುಬಾಂಬ್​​ ಸ್ಫೋಟದ ಹಿಂದೆ ಪಾಕಿಸ್ತಾನ ಪೋಷಿತ ಉಗ್ರ ಸಂಘಟನೆಯ ಕೈವಾಡ ಇದೆ ಎಂಬುದನ್ನು ಪಾಕ್​ ಸದನದಲ್ಲಿ ಸ್ವತಃ ರಾಜಕಾರಣಿಯನ್ನು ಬಹಿರಂಗ ಹೇಳಿಕೆ ನೀಡಿದ್ದಾರೆ.

Also Read: Ayyappa Swami devotees beware : ಅಯ್ಯಪ್ಪ ಸ್ವಾಮಿ ಭಕ್ತಾದಿಗಳೇ ಎಚ್ಚರ.. ಮಿತಿಮೀರಿದ ಜನಸಂದಣಿ, ಯಾತ್ರಾರ್ಥಿಗಳಲ್ಲಿ ಕಾಡಿದೆ ಕಾಲ್ತುಳಿತದ ಭಯ

ಸದನದಲ್ಲಿ ಮಾತನಾಡಿದ ಪಾಕ್​ ರಾಜಕಾರಣಿ ಅನ್ವರುಲ್​ ಹಕ್​, ನೀವು ನಮ್ಮನ್ನು ಟಾರ್ಗೆಟ್​ ಮಾಡುತ್ತಲೇ ಇರಿ. ನಾವು ಕೆಂಪುಕೋಟೆಯಿಂದ ಕಾಶ್ಮೀರದ ಕಾಡುಗಳವರೆಗೆ ಭಾರತವನ್ನು ಹೊಡೆಯುತ್ತೇವೆ ಎಂದು ಮೊದಲೇ ಹೇಳಿದೆ. ಅಲ್ಲಾನ ದಯೆಯಿಂದ ಇದನ್ನು ನಾವು ಮಾಡಿದ್ದೇವೆ.

ದೆಹಲಿಯಲ್ಲಿ ಶಸ್ತ್ರಸಜ್ಜಿತ ಉಗ್ರ ದಾಳಿ ನಡೆದಿದೆ. ಇಂದಿಗೂ ಭಾರತದ ಬಳಿ ಶವದ ಸಂಖ್ಯೆ ಎಣಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳುವ ಮೂಲಕ ದೆಹಲಿ ಸ್ಫೋಟದ ಹಿಂದೆ ಪಾಕ್​ ಕೈವಾಡ ಒಪ್ಪಿಕೊಂಡಿದ್ದಾರೆ.

ಪಾಕಿಸ್ತಾನ ಉಗ್ರರನ್ನು ಪೋಷಿಸುತ್ತಿರುವುದು ಜಗತ್ತಿಗೆ ತಿಳಿದಿರುವ ವಿಚಾರ. ಸೇನೆಯ ಮೂಲಕ ಯುದ್ಧ ನಡೆಸಲಾಗದೇ ಉಗ್ರರನ್ನು ಬಳಸಿ ಷಡ್ಯಂತ್ರ ನಡೆಸುವ ಪಾಕ್​ನ ನೀಚ ಬುದ್ಧಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಆಪರೇಷನ್​ ಸಿಂಧೂರದಂತೆಯೇ ದೆಹಲಿ ಸ್ಫೋಟದ ಪ್ರತಿಕಾರವನ್ನು ಭಾರತೀಯ ಸೇನೆ ಯಾವ ರೀತಿಯಲ್ಲಿ ತೀರಿಸಿಕೊಳ್ಳುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

Also Read: ದೇಶಾದ್ಯಂತ 5.8 ಕೋಟಿ ಬಿಪಿಎಲ್​ ಕಾರ್ಡ್​ಗಳು ರದ್ದು : ಅನರ್ಹರ ಆಟಕ್ಕೆ ಕೇಂದ್ರದ ಅಂಕುಶ

Exit mobile version