Ayyappa Swami devotees beware : ಅಯ್ಯಪ್ಪ ಸ್ವಾಮಿ ಭಕ್ತಾದಿಗಳೇ ಎಚ್ಚರ.. ಮಿತಿಮೀರಿದ ಜನಸಂದಣಿ, ಯಾತ್ರಾರ್ಥಿಗಳಲ್ಲಿ ಕಾಡಿದೆ ಕಾಲ್ತುಳಿತದ ಭಯ
Ayyappa Swami devotees beware: ಶಬರಿಮಲೆಯಲ್ಲಿ ಈ ವರ್ಷ ಆರಂಭಗೊಂಡಿರುವ ಮಂಡಲ ಪೂಜೆ, ಮಕರವಿಳಕ್ಕು ಉತ್ಸವವನ್ನು ಕಣ್ತುಂಬಿಕೊಳ್ಳಲು ಭಕ್ತಸಾಗರ ಹರಿದುಬರುತ್ತಿದೆ. ಜ್ಯೋತಿ ಮಾಸಾಚರಣೆಗಾಗಿ ದೇಗುಲದ ಬಾಗಿಲು ತೆಗೆದ ಕೆಲವೇ ಕೆಲವು ದಿನಗಳಲ್ಲಿಯೇ ಶಬರಿಮಲೆ ಹಿಂದೆಂದೂ ಕಾಣದ ಜನಸಂದಣಿಯನ್ನು ನೋಡುತ್ತಿದೆ. ಭಾರೀ ಜನಸಂದಣಿಯಿಂದಾಗಿ ಈಗಾಗಲೇ ನಾಲ್ವರು ಮಕ್ಕಳು ಹಾಗೂ ವೃದ್ಧೆ ಮೃತಪಟ್ಟಿದ್ದು ಅಯ್ಯಪ್ಪನ ಭಕ್ತಾದಿಗಳು ಆತಂಕದಲ್ಲಿದ್ದಾರೆ.
ಅಯ್ಯಪ್ಪ ಸ್ವಾಮಿಯ ಯಾತ್ರೆಯಲ್ಲಿರುವ ಭಕ್ತಾದಿಗಳೇ ಇತರ ಭಕ್ತಾದಿಗಳ ಬಳಿಯಲ್ಲಿ ಸದ್ಯ ಶಬರಿಮಲೆ ಕಡೆ ಪ್ರಯಾಣ ಬೆಳೆಸಬೇಡಿ ಎಂದು ಮನವಿ ಮಾಡುತ್ತಿದ್ದಾರೆ. ಪಂಪಾ ನದಿಯ ಸಮೀಪದಲ್ಲೆಲ್ಲ ತೀವ್ರ ಜನಸಂದಣಿಯಿದ್ದು ಶಬರಿಮಲೆಗೆ ಹೊರಡಲು ಇದು ಸೂಕ್ತ ಸಮಯವಲ್ಲ. ಅದರಲ್ಲೂ ಮಕ್ಕಳು ಹಾಗೂ ವೃದ್ಧರನ್ನು ಕರೆತರಲೇಬೇಡಿ ಅಂತಾ ಮನವಿ ಮಾಡಿದ್ದಾರೆ.
ಅಯ್ಯಪ್ಪ ಭಕ್ತಾದಿಗಳು ಈ ರೀತಿಯ ಜನಸಂದಣಿಗೆ ಶಬರಿಮಲೆ ದೇವಸ್ಥಾನ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ. ಇತ್ತ ಕೇರಳ(Kerala) ಕೋರ್ಟ್ ಕೂಡ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳದ ದೇಗುಲ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದೆ.
Also Read: ದೇಶಾದ್ಯಂತ 5.8 ಕೋಟಿ ಬಿಪಿಎಲ್ ಕಾರ್ಡ್ಗಳು ರದ್ದು : ಅನರ್ಹರ ಆಟಕ್ಕೆ ಕೇಂದ್ರದ ಅಂಕುಶ
ಇನ್ನು ಕರ್ನಾಟಕದಿಂದ ಶಬರಿಮಲೆಯಾತ್ರಾ ಕೈಗೊಳ್ಳುತ್ತಿರುವ ಕನ್ನಡಿಗರ ಸುರಕ್ಷತಾ ದೃಷ್ಠಿಯಿಂದ ಸಹಕಾರ ಕೋರಿ ರಾಜ್ಯ ಸರ್ಕಾರ ಕೇರಳ ಸರ್ಕಾರಕ್ಕೆ ಪತ್ರ ಬರೆದಿದೆ. ರಾಜ್ಯದ ಪರವಾಗಿ ಪತ್ರ ಬರೆದಿರುವ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಕರ್ನಾಟಕದ ಯಾತ್ರಾರ್ಥಿಗಳ ಸುಗಮ ಸಂಚಾರಕ್ಕೆ ಸಹಕರಿಸುವಂತೆ ಕೇರಳ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಒಂದು ಕಡೆ ಮಿದುಳು ತಿನ್ನುವ ಅಮೀಬಾದ ಅಪಾಯ, ಮತ್ತೊಂದು ಕಡೆ ಕಾಲ್ತುಳಿತ ಸಂಭವಿಸಿವ ಸಾಧ್ಯತೆ.. ಈ ಎಲ್ಲದರ ನಡುವೆ ಈ ಬಾರಿ ಶಬರಿಮಲೆ ಯಾತ್ರೆ ನಡೆಯಲಿದ್ದು ಭಕ್ತಾದಿಗಳನ್ನು ಆ ಪಂದಳಕಂದನೇ ಕಾಪಾಡಬೇಕೆಂದು ಜನತೆ ಪ್ರಾರ್ಥಿಸುವಂತಾಗಿದೆ.
Also Read: ಸೌದಿ ಅರೇಬಿಯಾದಲ್ಲಿ ಬಸ್ ದುರಂತ : ತೆಲಂಗಾಣದ 42 ಮಂದಿ ಸಾವು ; ಪ್ರಧಾನಿ ಮೋದಿ ಸಂತಾಪ



