ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ: ‘ಮಹಾಯುತಿ’ ಭರ್ಜರಿ ಜಯ, ಅತಿದೊಡ್ಡ ಪಕ್ಷವಾದ ಬಿಜೆಪಿ!

ಮುಂಬೈ: ಮಹಾರಾಷ್ಟ್ರದ ಮುನ್ಸಿಪಲ್ ಕೌನ್ಸಿಲ್ ಮತ್ತು ನಗರ ಪಂಚಾಯತ್‌ಗಳ ಚುನಾವಣೆಯಲ್ಲಿ (Maharashtra Local Polls results) ಆಡಳಿತಾರೂಢ ‘ಮಹಾಯುತಿ’ ಮೈತ್ರಿಕೂಟವು (Mahayuti alliance) ವಿರೋಧ ಪಕ್ಷವಾದ ‘ಮಹಾ ವಿಕಾಸ್ ಅಘಾಡಿ’ ಯನ್ನು (MVA) ಧೂಳೀಪಟ ಮಾಡಿ ಅಖಂಡ ಬಹುಮತದೊಂದಿಗೆ ಜಯಭೇರಿ ಬಾರಿಸಿದೆ. ಈ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದ ಅತಿದೊಡ್ಡ ಪಕ್ಷವಾಗಿ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ.

ಫಲಿತಾಂಶದ ಮುಖ್ಯಾಂಶಗಳು:

ರಾಜ್ಯ ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಒಟ್ಟು 288 ಸ್ಥಳೀಯ ಸಂಸ್ಥೆಗಳ ಪೈಕಿ ಮಹಾಯುತಿ ಮೈತ್ರಿಕೂಟವು 207 ರಲ್ಲಿ ಜಯ ಸಾಧಿಸಿದೆ. ಪಕ್ಷವಾರು ಬಲಾಬಲ ಈ ಕೆಳಗಿನಂತಿದೆ:

ಮತ್ತೊಂದೆಡೆ, ವಿರೋಧ ಪಕ್ಷದ ಮೈತ್ರಿಕೂಟವಾದ ‘ಮಹಾ ವಿಕಾಸ್ ಅಘಾಡಿ’ ಕೇವಲ 44 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಇದರಲ್ಲಿ ಕಾಂಗ್ರೆಸ್ 28, ಶಿವಸೇನೆ (ಯುಬಿಟಿ) 9 ಮತ್ತು ಎನ್‌ಸಿಪಿ (ಶರದ್ ಪವಾರ್ ಬಣ) 7 ಸ್ಥಾನಗಳನ್ನು ಗೆದ್ದಿವೆ.

ಮೋದಿ ಮತ್ತು ಫಡ್ನವೀಸ್ ಪ್ರತಿಕ್ರಿಯೆ:

ಈ ಅಭೂತಪೂರ್ವ ಗೆಲುವಿನ ಬಗ್ಗೆ ಸಾಮಾಜಿಕ ಜಾಲತಾಣ ‘X’ ನಲ್ಲಿ ಸಂತಸ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, “ಮಹಾರಾಷ್ಟ್ರದ ಜನತೆ ಅಭಿವೃದ್ಧಿಯ ಪರವಾಗಿ ನಿಂತಿದ್ದಾರೆ. ಬಿಜೆಪಿ ಮತ್ತು ಮಹಾಯುತಿ ಮೇಲೆ ನಂಬಿಕೆ ಇಟ್ಟಿದ್ದಕ್ಕೆ ಧನ್ಯವಾದಗಳು” ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಈ ಫಲಿತಾಂಶವನ್ನು “ಅಭಿವೃದ್ಧಿ ರಾಜಕಾರಣಕ್ಕೆ ಸಿಕ್ಕ ಜಯ” ಎಂದು ಬಣ್ಣಿಸಿದ್ದಾರೆ. ವಿಶೇಷವಾಗಿ ನಾಗ್ಪುರ ಮತ್ತು ಪುಣೆಯಂತಹ ಭಾಗಗಳಲ್ಲಿ ಬಿಜೆಪಿ ಮತ್ತು ಎನ್‌ಸಿಪಿ (ಅಜಿತ್ ಪವಾರ್ ಬಣ) ಉತ್ತಮ ಪ್ರದರ್ಶನ ನೀಡಿವೆ.

ಇದನ್ನೂ ಓದಿ: Lionel Messi: ಭಾರತಕ್ಕೆ ಹೀಗೆ ಬಂದು ಹಾಗೆ ಹೋದ ಮೆಸ್ಸಿ ಗಳಿಸಿದ್ದು 89 ಕೋಟಿ!

ಈ ಚುನಾವಣಾ ಫಲಿತಾಂಶವು ಮುಂಬರುವ ಬೃಹತ್ ಮುಂಬೈ ಮಹಾನಗರ ಪಾಲಿಕೆ (BMC) ಚುನಾವಣೆಗೆ ದಿಕ್ಸೂಚಿಯೆಂದು ಪರಿಗಣಿಸಲಾಗಿದೆ. ವಿರೋಧ ಪಕ್ಷಗಳು ಇವಿಎಂ (EVM) ಅಕ್ರಮ ಮತ್ತು ಹಣದ ಬಲದ ಆರೋಪಗಳನ್ನು ಮಾಡಿದೆಯಾದರೂ, ಮತದಾರರು ಮಹಾಯುತಿಯ ಜನಪರ ಯೋಜನೆಗಳಿಗೆ ಮನ್ನಣೆ ನೀಡಿದ್ದಾರೆ ಎಂಬುದು ಸ್ಪಷ್ಟವಾಗಿದೆ.

Exit mobile version