ಅಜಿತ್ ಪವಾರ್ ನಿಧನ: ಮಹಾರಾಷ್ಟ್ರ ಎನ್‌ಸಿಪಿಯ ಮುಂದಿನ ಸಾರಥಿ ಯಾರು?

NCP Ajit Pawar Future Leaders: ಮುಂಬೈ/ಬಾರಾಮತಿ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅನಿರೀಕ್ಷಿತ ವಿಮಾನ ಅಪಘಾತದ ಸಾವು ರಾಜ್ಯ ರಾಜಕಾರಣದಲ್ಲಿ ದೊಡ್ಡ ಶೂನ್ಯವನ್ನು ಸೃಷ್ಟಿಸಿದೆ. ಈ ದುರಂತದ ಬೆನ್ನಲ್ಲೇ, “ನೈಜ” ಎನ್‌ಸಿಪಿ (NCP) ಪಕ್ಷದ ಚುಕ್ಕಾಣಿಯನ್ನು ಮುಂದೆ ಯಾರು ಹಿಡಿಯಲಿದ್ದಾರೆ ಎಂಬ ಪ್ರಶ್ನೆ ಈಗ ತೀವ್ರ ಕುತೂಹಲ ಕೆರಳಿಸಿದೆ.

ಉತ್ತರಾಧಿಕಾರದ ರೇಸ್‌ನಲ್ಲಿರುವ ಪ್ರಮುಖರು:

1. ಕುಟುಂಬದ ಸದಸ್ಯರು- ಪವಾರ್ ವಂಶಸ್ಥರು:

2. ಹಿರಿಯ ಅನುಭವಿ ನಾಯಕರು:

3. ವೈಲ್ಡ್ ಕಾರ್ಡ್ ಎಂಟ್ರಿ – ಶರದ್ ಪವಾರ್ ಬಣದೊಂದಿಗೆ ವಿಲೀನ?
ರಾಜಕೀಯ ವಿಶ್ಲೇಷಕರ ಪ್ರಕಾರ, ಅಜಿತ್ ಪವಾರ್ ಅವರ ಅನುಪಸ್ಥಿತಿಯಲ್ಲಿ ಅವರ ಬಣದ ಶಾಸಕರು ಮತ್ತೆ ‘ದೊಡ್ಡ ಪವಾರ್’ ಅಂದರೆ ಶರದ್ ಪವಾರ್ ಅವರ ಸಾರಥ್ಯಕ್ಕೆ ಮರಳುವ ಸಾಧ್ಯತೆ ದಟ್ಟವಾಗಿದೆ. ಸುಪ್ರಿಯಾ ಸುಳೆ ಅವರ ನೇತೃತ್ವದಲ್ಲಿ ಎರಡೂ ಬಣಗಳು ಒಂದಾಗುವ ಕುರಿತು ಚರ್ಚೆಗಳು ನಡೆಯುತ್ತಿವೆ.

Ajith Pawar: ಆ ಪೂಜೆ ಮಾಡಿಸಿದ್ರೆ ಬದುಕ್ತಿದ್ರಾ ಅಜಿತ್ ಪವಾರ್, ವೈಎಸ್ ರಾಜಶೇಖರ್ ರೆಡ್ಡಿ?

ಅಪಘಾತದ ಸಮಯದಲ್ಲಿ ವಿಮಾನವು ಎಡಕ್ಕೆ ವಾಲುತಿರುವ ಹೊಸ ವಿಡಿಯೋ ಲಭ್ಯವಾಗಿದ್ದು, ವಿಮಾನ ಇಳಿಯುವ ಸಮಯದಲ್ಲಿ ಯಾವುದೇ ‘ರೀಡ್‌ಬ್ಯಾಕ್’ ಕ್ಲಿಯರೆನ್ಸ್ ಸಿಕ್ಕಿರಲಿಲ್ಲ ಎಂಬ ಆಘಾತಕಾರಿ ಮಾಹಿತಿ ಹೊರಬಂದಿದೆ. “ಈ ಘಟನೆಯಲ್ಲಿ ಯಾವುದೇ ಸಂಚು ಇಲ್ಲ” ಎಂದು ಶರದ್ ಪವಾರ್ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಏಕನಾಥ್ ಶಿಂದೆ ಅವರು ಅಜಿತ್ ಪವಾರ್ ಅವರನ್ನು “ನಿರ್ಭೀತ ನಾಯಕ” ಎಂದು ಸ್ಮರಿಸಿದ್ದಾರೆ. ರಾಜ್ ಠಾಕ್ರೆ ಮತ್ತು ಪ್ರಧಾನಿ ಮೋದಿ ಕೂಡ ತೀವ್ರ ಸಂತಾಪ ಸೂಚಿಸಿದ್ದಾರೆ. ಒಟ್ಟಾರೆ ಮಹಾರಾಷ್ಟ್ರದ ಈ ‘ಪವರ್ ಪಾಲಿಟಿಕ್ಸ್’ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

Exit mobile version