Ajith Pawar: ಆ ಪೂಜೆ ಮಾಡಿಸಿದ್ರೆ ಬದುಕ್ತಿದ್ರಾ ಅಜಿತ್ ಪವಾರ್, ವೈಎಸ್ ರಾಜಶೇಖರ್ ರೆಡ್ಡಿ?

ಇವತ್ತು ಮಹಾರಾಷ್ಟ್ರ ‘ದಾದಾ’ ಇಲ್ಲ, ಆವತ್ತು ಆಂಧ್ರದ ‘ದೊರೆ’ ಇರಲಿಲ್ಲ; ಇವರಿಬ್ಬರ ದಾರುಣ ಸಾವಿಗೆ ಕಾರಣವಾಗಿತ್ತು ಆ ಒಂದು ದೋಷ ಅಂತ ಅಂದ್ರೆ ನಂಬ್ತೀರಾ? ನಾವುಗಳು ಏನೇ ಕಾರಣ ಕೊಡಬಹುದು ಅಥವಾ ಏನೇ ಸಮಜಾಯಿಷಿ ಹೇಳಬಹುದು! ಆದರೆ ಇವರಿಬ್ಬರು ಮೃತಪಟ್ಟ ವೇಳೆಯ ಗ್ರಹ ಸ್ಥಾನಗಳು ಹಾಗೂ ಇದ್ದ ದೋಷ ಕೇಳಿದ್ರೆ ನಿಜಕ್ಕೂ ನೀವು ಶಾಕ್ ಆಗ್ತೀರಾ!
ಮರುಕಳಿಸಿದ ಇತಿಹಾಸ!
ಹೌದು, ಮಹಾರಾಷ್ಟ್ರದ ದಾದಾ ಡಿಸಿಎಂ ಅಜಿತ್ ಪವಾರ್ ಇನ್ನಿಲ್ಲ, ಬೆಳ್ಳಂಬೆಳಗ್ಗೆ ಇತ್ತಾಂದೊದ್ದು ಸುದ್ದಿ ಕೇಳ್ತಿವಿ ಅಂತ ಚಾಯ್ ಕುಡೀತಾ ವಡಾಪಾವ್ ತಿಂತಿದ್ದ ಯಾವ ಮುಂಬೈವಾಲಾನೂ ಎಣಿಸಿರಲಿಕ್ಕಿಲ್ಲ ಆವತ್ತು ಕೂಡ ಹೀಗೆ ಆಗಿತ್ತು, ತೀರಾ ತೀರಾ ಬಳ್ಳಾರಿಯ ನೆಲದ ಗಡಿ ಇಂದ ಆಂಧ್ರ-ತಮಿಳು ಗಡಿವರೆಗೆ ಎಷ್ಟೋ ಜನರು ಎದೆ ಬಡಿದುಕೊಂಡು ಅತ್ತಿದ್ದರು, ಸತ್ತಿದ್ದರು ಆ ಒಬ್ಬ ನಾಯಕನ ಸಾವಿಗೆ ಆತ ವೈ ಎಸ್ ರಾಜಶೇಖರ್ ರೆಡ್ಡಿ!
ಆ ಪೂಜೆ ಮಾಡಿದ್ರೆ ಬದುಕುತ್ತಿದ್ರಾ?
ಇವರಿಬ್ಬರ ಸಾವಿಗೆ ಕಾರಣ ವೈಮಾನಿಕ ಅಪಘಾತವೇ, ಒಬ್ಬರು ಪ್ಲೇನ್ ಕ್ರಾಶ್ ಅಲ್ಲಿ ತೀರಿಹೋದರೆ ಮತ್ತೊಬ್ಬರು ಹೆಲಿಕ್ಯಾಪ್ಟರ್ನಲ್ಲಿ ತುಂಡು ತುಂಡಾಗಿ ಸುಟ್ಟು ಹೋಗಿದ್ದರು. ಈ ದಾರುಣ ದುರಂತ ಕಾಲದ ಆ ವಿಷಯ ಅಚ್ಚರಿ ಮೂಡಿಸುತ್ತದೆ. ಇವರಿಬ್ಬರೂ ಆ ಪೂಜೆ ಮಾಡಿಸಿದ್ರೆ ಬದುಕಿ ಬಿಡ್ತಿದ್ರೋನೋ!
ಏನು ಹೇಳುತ್ತೆ ಗ್ರಹಗತಿ?
ಹೌದು, ಅಜಿತ್ ಪವಾರ್ ಕುಂಡಲಿಯಲ್ಲಿ ತುಲಾ ಲಗ್ನದ ಕುಂಡಲಿಯನ್ನು ಪರಿಗಣಿಸಿದರೆ, ರಾಹುವು 12ನೇ ಮನೆಯಲ್ಲಿ (ನಷ್ಟ ಮತ್ತು ಅನಿರೀಕ್ಷಿತ ಘಟನೆಗಳ ಸ್ಥಾನ) ಕುಳಿತಿದ್ದಾನೆ. ಬುಧ-ರಾಹು ಪ್ರಭಾವವು ವಿಮಾನ ಪ್ರಯಾಣದ ಸಮಯದಲ್ಲಿ ಅಪಾಯಗಳನ್ನು ಹೆಚ್ಚಿಸುವ ಸಾಧ್ಯತೆಯನ್ನು ತೋರಿಸುತ್ತದೆ. ರಾಹುವಿನ ದುಸ್ಥಾನದ ಜೊತೆ ಮಂಗಳನ ಮಕರ ರಾಶಿಯ ಸಂಚಾರ ತಾಂತ್ರಿಕ ವೈಫಲ್ಯ ತೋರಿಸುತ್ತದೆ. ಬುಧ-ರಾಹು ಅಂತರ್ದೆಸೆಯಲ್ಲಿ ರಾಹುವಿನ ನಷ್ಟ ಸ್ಥಾನ ವೈಮಾನಿಕ ದುರಂತ ಹಾಗೆಯೇ ಮಂಗಳನ ಸಂಚಾರ ತಾಂತ್ರಿಕ ವೈಫಲ್ಯಕ್ಕೆ ಪುಷ್ಟಿ ನೀಡುತ್ತವೆ. ಇನ್ನೂ ಮಂಗಳ-ರಾಹುವಿನ ಕುದೆಸೆ ಕ್ರ್ಯಾಶ್ ವಿಂಡೋ ಅಥವಾ ಸ್ಫೋಟಕ ಬಾಗಿಲು ಅಂತಲೇ ಅರ್ಥ, ಪವಾರ್ ಸಾಯುವಾಗ ಆಗಿದ್ದು ಇದೇ!
ವೈ ಎಸ್ ಆರ್ ಸಾವಿನ ಹಿಂದಿತ್ತು ಇದೇ ಗೋಚಾರ!
ಇನ್ನೂ ವೈಎಸ್ ಆರ್ ಜಾತಕದಲ್ಲಿಯೂ ಕೂಡ ಇದೇ ರೀತಿಯಾಗಿತ್ತು ರಾಹು-ಕೇತುಗಳ ದೆಸೆಯಲ್ಲಿದ್ದ ವೈ ಎಸ್ ಆರ್ ಕುಂಡಲಿಯಲ್ಲಿ ರಾಹು 8 ನೇ ಸಮಯಕ್ಕೆ ಅವರ ಸಾವಾಗಿತ್ತು, ಆ ಸಮಯದಲ್ಲಿ ಮಂಗಳನು ವೃಷಭ ರಾಶಿಯ ಐದನೇ ಮನೆಯಲ್ಲಿದ್ದು ಸಿಂಹ ರಾಶಿಯಲ್ಲಿ ಮೃತ್ಯು ಸ್ಥಾನದಲ್ಲಿದ್ದ (8 ನೇ ಮನೆ) ಶನಿಯನ್ನು ವೀಕ್ಷಿಸುತ್ತಿದ್ದನು. ಇದರಿಂದ ವೈ ಎಸ್ ಆರ್ ವೈಮಾನಿಕ ತಾಂತ್ರಿಕ ವೈಫಲ್ಯದಿಂದ ನಿಧನ ಹೊಂದಿದರು!
ಈ ಗ್ರಹಗಳು ಕೆಟ್ಟವೆಂದರೆ ವಿಮಾನ ಬೀಳೋದು ಪಕ್ಕಾ?
ಇವರಿಬ್ಬರ ಕುಂಡಲಿಯಲ್ಲೂ ರಾಹು ಹಾಗೂ ಮಂಗಳನ ದೋಷವೇ ಇವರಿಬ್ಬರ ಸಾವಿಗೆ ಕಾರಣ ಎಂಬುದು ಸ್ಪಷ್ಟವಾಗುತ್ತದೆ. ಹಾಗೆಯೇ ರಾಹು 8-12 ನೇ ಸ್ಥಾನ ಸರ್ಪದೋಷ, ಕರ್ಕೋಟಕ ವಿಷ ಸರ್ಪ ದೋಷ ಸೂಚಿಸುತ್ತದೆ. ಹೀಗಾಗಿ ಇವರಿಬ್ಬರೂ ಸರ್ಪ ಸಂಸ್ಕಾರ, ಆಶ್ಲೇಷ ಬಲಿ, ರಾಹು ಶಾಂತಿ ಮಾಡಿಸಿದ್ದರೆ ಈ ಅಪಾಯ ತಪ್ಪಿಸಬಹುದಿತ್ತು! ಇದರ ಜೊತೆ ಬುಧನ ಸ್ಥಾನ ಹಾಗೆಯೇ ಶನಿಯ ಸ್ಥಾನವೂ ವೀಕ್ ಇದ್ದು ರಾಹು-ಮಂಗಳನ ದೃಷ್ಟಿ ಸರಿಯಾಗಿರದಿದ್ದರೆ ಆ ದಿನ ವೈಮಾನಿಕ ಪ್ರಯಾಣ ಬಹುತೇಕ ಕೈ ಕೊಡುತ್ತದೆ.



