Kannada News Next

job

BOI SO ನೇಮಕಾತಿ 2026 : ಈ ದಿನದಿಂದ 200 ಕ್ಕೂ ಹೆಚ್ಚು ಆಫೀಸರ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಾರಂಭ!

ಬ್ಯಾಂಕ್ ಆಫ್ ಇಂಡಿಯಾ ಸ್ಪೆಷಲಿಸ್ಟ್‌ 205 ಆಫೀಸರ್‌ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ.

By Archana V Bhat
BOI SO Recruitment

ಸರ್ಕಾರಿ ಬ್ಯಾಂಕ್‌ನಲ್ಲಿ ಕೆಲಸದ ಕನಸು ಹೊತ್ತು ಕಾಯುತ್ತಿರುವ ಯುವ ಪದವೀಧರರಿಗೆ ಮತ್ತೊಂದು ಸುವರ್ಣಾವಕಾಶ. ಬ್ಯಾಂಕ್ ಆಫ್ ಇಂಡಿಯಾ ಸ್ಪೆಷಲಿಸ್ಟ್‌ ಆಫೀಸರ್‌ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಇದರ ಪ್ರಕಾರ ಬ್ಯಾಂಕ್ ಒಟ್ಟು 205 ಸ್ಪೆಷಲಿಸ್ಟ್‌ ಆಫೀಸರ್‌ಗಳನ್ನು ನೇಮಕ ಮಾಡಿಕೊಳ್ಳಲಿದೆ. ಈ ಹುದ್ದೆಗೆ ಆನ್‌ಲೈನ್‌ ಅರ್ಜಿ ಸಲ್ಲಿಕೆಯು ಇದೇ ಸೆಪ್ಟೆಂಬರ್‌ 10, 2026 ರಿಂದ ಪ್ರಾರಂಭವಾಗಲಿದೆ. ಆಸಕ್ತ ಅರ್ಹ ಯುವ ಪದವೀಧರರಿಗೆ ಸೆಪ್ಟೆಂಬರ್‌ 25, 2026 ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಅರ್ಜಿ ಸಲ್ಲಿಸಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು ಎಂದು ನೋಡೋಣ.

ಶೈಕ್ಷಣಿಕ ಅರ್ಹತೆ

ಸ್ಪೆಷಲಿಸ್ಟ್‌ ಆಫೀಸರ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ ಪದವಿ ಹೊಂದಿರಬೇಕು.

ವಯೋಮಿತಿ

ಹುದ್ದೆಗೆ ಅನುಗುಣವಾಗಿ 21 ರಿಂದ 32 ವರ್ಷಗಳು. ಅದೇ ರೀತಿ ಗರಿಷ್ಠ ವಯಸ್ಸು ಕೂಡಾ 30 ರಿಂದ 40 ವರ್ಷವಾಗಿದೆ. ಇಷ್ಟೇ ಅಲ್ಲದೇ ನೀವು ಮೀಸಲು ವರ್ಗಕ್ಕೆ ಸೇರಿದ್ದರೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯೂ ಇರುತ್ತದೆ.

ನೋಂದಣಿ ಶುಲ್ಕ

ಬ್ಯಾಂಕ್‌, ಅರ್ಜಿ ಸಲ್ಲಿಸಲು ವರ್ಗವಾರು ನೋಂದಣಿ ಶುಲ್ಕವನ್ನು ನಿಗದಿಪಡಿಸಿದೆ. SC / ST / PwD ಅಭ್ಯರ್ಥಿಗಳು ₹175 ಮತ್ತು GM / EWS / OBC ಅಭ್ಯರ್ಥಿಗಳಿಗೆ ₹1180 ಪಾವತಿಸಬೇಕಾಗಿದೆ.

ಆಯ್ಕೆ ಹೇಗೆ?

ಬ್ಯಾಂಕ್‌ ಆಫ್ ಇಂಡಿಯಾ ದ ಸ್ಪೆಷಲಿಸ್ಟ್‌ ಆಫೀಸರ್‌ ಹುದ್ದೆಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಿದೆ. ಅದರಲ್ಲಿ 25 ಅಂಕಗಳ ಇಂಗ್ಲೀಷ್‌ ಮತ್ತು 100 ಅಂಕಗಳ ಪ್ರೊಫೆಷನಲ್‌ ವಿಷಯ ಇರಲಿದೆ. ಈ ಪರೀಕ್ಷೆಯಲ್ಲಿ ತಪ್ಪು ಉತ್ತರಕ್ಕೆ 0.25 ನೆಗೆಟಿವ್‌ ಮಾರ್ಕಿಂಗ್‌ ಕೂಡಾ ಇರಲಿದೆ. ಹಾಗಾಗಿ ಆಸಕ್ತ ಅಭ್ಯರ್ಥಿಗಳು ಈಗನಿಂದಲೇ ಪರೀಕ್ಷೆಯ ತಯಾರಿ ನಡೆಸುವುದು ಉತ್ತಮವಾಗಿದೆ.

ಅರ್ಜಿ ಸಲ್ಲಿಕೆ ಹೇಗೆ ?

ಬ್ಯಾಂಕ್‌ ಆಫ್‌ ಇಂಡಿಯಾದ ಸ್ಪೆಷಲಿಸ್ಟ್‌ ಆಫೀಸರ್‌ ಹುದ್ದೆಗೆ ಅರ್ಜಿಯನ್ನು ಅರ್ಜಿ ಸಲ್ಲಿಕೆ ಪ್ರಾರಂಭವಾದ ದಿನದಿಂದ ಆನ್‌ಲೈನ್‌ ಮೂಲಕ ಸಲ್ಲಿಸಬಹುದಾಗಿದೆ.