KPSC 319 KAS ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಂದು ಕೊನೇ ದಿನ ! ಗ್ಯಾಜೆಟೆಡ್ ಆಫೀಸರ್ ಆಗುವ ಅವಕಾಶ ತಪ್ಪಿಸಿಕೊಳ್ಳಬೇಡಿ !
ಕರ್ನಾಟಕ ಲೋಕಸೇವಾ ಆಯೋಗವು (KPSC) ಕರ್ನಾಟಕ ಆಡಳಿತ ಸೇವೆ (KAS) 319 ಗೆಜೆಟೆಡ್ ಪ್ರೊಬೇಷನರ್ಸ್ (ಗ್ರೂಪ್ ಎ ಮತ್ತು ಬಿ) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಂದು ಕೊನೇ ದಿನ.
ಕರ್ನಾಟಕ ಲೋಕಸೇವಾ ಆಯೋಗವು (KPSC) ಕರ್ನಾಟಕ ಆಡಳಿತ ಸೇವೆ (KAS) 319 ಗೆಜೆಟೆಡ್ ಪ್ರೊಬೇಷನರ್ಸ್ (ಗ್ರೂಪ್ ಎ ಮತ್ತು ಬಿ) ಹುದ್ದೆಗಳ ನೇಮಕಾತಿಗಾಗಿ KPSC KAS 2026 ಅಧಿಸೂಚನೆಯನ್ನು ಜುಲೈ 31, 2026 ರಂದು ಬಿಡುಗಡೆ ಮಾಡಿತ್ತು. ಇದರ ಪ್ರಕಾರ ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ಆಗಸ್ಟ್ 1, 2026 ರಿಂದ ಪ್ರಾರಂಭವಾಗಿತ್ತು. 319 ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಕೆಯು ಇಂದು (ಆಗಸ್ಟ್ 31, 2026) ಮುಕ್ತಾಯವಾಗಲಿದೆ. ಕಾರಣಾಂತರಗಳಿಂದ ಅರ್ಜಿ ಸಲ್ಲಿಸಲು ಆಗದವರು ಈ ಕೊನೆಯ ಅವಕಾಶ ಪಡೆದುಕೊಂಡು ತಮ್ಮ ಕನಸು ನನಸು ಮಾಡಿಕೊಳ್ಳಬಹುದಾಗಿದೆ. ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು ಎಂದು ತಿಳಿಯೋಣ.
ಹುದ್ದೆಗಳ ವಿವರ:
KPSC ಒಟ್ಟೂ 319 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅದರಲ್ಲಿ ಗ್ರೂಪ್ ಎ ಯಲ್ಲಿ 117 ಹುದ್ದೆಗಳು ಮತ್ತು ಗ್ರೂಪ್ ಬಿ ಯಲ್ಲಿ 202 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಗ್ರೂಪ್ ಎ ಹುದ್ದೆಗಳು:
ಸಹಾಯಕ ಆಯುಕ್ತರು (DPAR) : 39
ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರು : 50
ಸಹಾಯಕ ನಿರ್ದೇಶಕರು, ಖಜಾನೆ ಇಲಾಖೆ : 2
ಕಾರ್ಯನಿರ್ವಾಹಕ ಅಧಿಕಾರಿ : 15
ಸಹಾಯಕ ನಿರ್ದೇಶಕರು ಗ್ರೇಡ್-1, ಸಮಾಜ ಕಲ್ಯಾಣ ಇಲಾಖೆ : 11
ಗ್ರೂಪ್ ಬಿ ಹುದ್ದೆಗಳು :
ತಹಶೀಲ್ದಾರ್ (ಗ್ರೇಡ್-2), ಕಂದಾಯ ಇಲಾಖೆ : 25
ವಾಣಿಜ್ಯ ತೆರಿಗೆ ಅಧಿಕಾರಿ : 74
ಸಹಾಯಕ ಅಧೀಕ್ಷಕರು : 6
ಸಹಕಾರ ಸಂಘಗಳ ಸಹಾಯಕ ನಿಬಂಧಕರು : 21
ಸಹಾಯಕ ನಿರ್ದೇಶಕರು : 12
ಅಬಕಾರಿ ಉಪ ಅಧೀಕ್ಷಕರು : 5
ಉದ್ಯೋಗ ಅಧಿಕಾರಿ : 3
ಮುಖ್ಯ ಅಧಿಕಾರಿ (ಗ್ರೇಡ್-1) : 20
ಸಹಾಯಕ ಖಜಾನೆ ಅಧಿಕಾರಿ: 12
ಸಹಾಯಕ ನಿರ್ದೇಶಕರು (ಆಹಾರ ಇಲಾಖೆ) : 4
ವಿಭಾಗ ಅಧಿಕಾರಿ, ಕರ್ನಾಟಕ ಸರ್ಕಾರ ಸಚಿವಾಲಯ : 5
ವಿಭಾಗ ಅಧಿಕಾರಿ, ಕರ್ನಾಟಕ ಲೋಕಸೇವಾ ಆಯೋಗ : 4
ಸಹಾಯಕ ನಿರ್ದೇಶಕರು ಗ್ರೇಡ್-2, ಸಮಾಜ ಕಲ್ಯಾಣ ಇಲಾಖೆ : 11
ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಹೊಂದಿರಬೇಕು.
ವಯೋಮಿತಿ
ಅಭ್ಯರ್ಥಿಗಳ ಕನಿಷ್ಠ ವಯಸ್ಸು 21ವರ್ಷಗಳು ಹಾಗೂ ಗರಿಷ್ಠ ವಯಸ್ಸು 40 ವರ್ಷಗಳು. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.
ಅರ್ಜಿ ಶುಲ್ಕ
ಸಾಮಾನ್ಯ ವರ್ಗ : 600 ರೂ.
2A, 2B, 3A ಮತ್ತು 3B : 300 ರೂ.
ಮಾಜಿ ಸೈನಿಕರು : 50 ರೂ.
SC / ST / Cat-1 / ಅಂಗವಿಕಲ ಅಭ್ಯರ್ತಿಗಳಿಗೆ : ಉಚಿತ
ಅರ್ಜಿ ಸಲ್ಲಿಕೆ ಹೇಗೆ?
ಅಭ್ಯರ್ಥಿಗಳು KPSC ಯ ಅಧಿಕೃತ ವೆಬ್‌ಸೈಟ್ kpsconline.karnataka.gov.in ಗೆ ಭೇಟಿ ನೀಡಿ.
ಒನ್ ಟೈಮ್ ರೆಜಿಸ್ಟ್ರೇಷನ್ ಪ್ರಕ್ರಿಯೆ ಪೂರ್ಣಗೊಳಿಸಿ.
ಗರಿಷ್ಠ 200 KB ಯ ಪ್ರೊಪೈಲ್ ಫೋಟೋ ಮತ್ತು ಗರಿಷ್ಠ 70 KB ಇರುವ ನಿಮ್ಮ ಸಹಿ ಅಪ್‌ಲೋಡ್ ಮಾಡಿ.
ಅಪ್ಲೈ ಟು ಪೋಸ್ಟ್ ವಿಭಾಗಕ್ಕೆ ಹೋಗಿ ಅರ್ಜಿ ಭರ್ತಿ ಮಾಡಿ.
ನೆಟ್‌ಬ್ಯಾಂಕಿಂಗ್ / ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ / ಯುಪಿಐ ಮೂಲಕ ಅರ್ಜಿ ಶುಲ್ಕ ಪಾವತಿಸಿ. ಅದರ ರಸೀದಿಯನ್ನು ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಿ.
ಕೊನೆಯದಾಗಿ ಅರ್ಜಿ ಸಲ್ಲಿಸಿ.
Topics
ಸಂಬಂಧಿತ ಸುದ್ದಿಗಳು
job
ಇಂಜಿನಿಯರಿಂಗ್ ಪದವೀಧರರಿಗೆ ಶುಭ ಸುದ್ದಿ: ಇಸ್ರೋದಲ್ಲಿ 176 ಸೈಂಟಿಸ್ಟ್/ಇಂಜಿನಿಯರ್ ಹುದ್ದೆಗಳ ಭರ್ತಿ
job
2 ತಿಂಗಳ ಇಂಟರ್ನ್ಶಿಪ್ಗೆ 60 ಲಕ್ಷ! ಹೆಚ್ಎಫ್ಟಿ ಉದ್ಯೋಗಕ್ಕೆ ಬಂಪರ್ ಆಫರ್
job
ಆರ್ಮಿ AOC Group C ಹುದ್ದೆಗಳಿಗೆ ನೇಮಕಾತಿ ಘೋಷಣೆ : ಹೀಗೆ ಅರ್ಜಿ ಸಲ್ಲಿಸಿ
job

