Kannada News Next

job

CWC ಅಸಿಸ್ಟಂಟ್‌ ಮ್ಯಾನೇಜರ್‌, ಜೂನಿಯರ್‌ ಎಕ್ಸಿಕ್ಯೂಟಿವ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ ! ನವೆಂಬರ್‌ 15ರೊಳಗೆ ಅರ್ಜಿ ಸಲ್ಲಿಸಿ !

CWC ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ನವೆಂಬರ್‌ 15 ರೊಳಗೆ ತಮ್ಮ ಅರ್ಜಿ ಸಲ್ಲಿಸಬಹುದು.

By Archana V Bhat | ಅರ್ಚನಾ ವಿ ಭಟ್‌
CWC recruitment 2026

ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಅಡಿಯಲ್ಲಿರುವ ಗೋದಾಮು ಮತ್ತು ಲಾಜಿಸ್ಟಿಕ್ಸ್‌ ಸಂಸ್ಥೆಯಾಗಿರುವ ಕೇಂದ್ರೀಯ ಉಗ್ರಾಣ ನಿಗಮ (CWC) ಗ್ರಾಹಕ ವ್ಯವಹಾರಗಳ ಕಾರ್ಯನಿರ್ವಹಿಸುತ್ತದೆ. ಇದೀಗ CWC ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಈ ಮೂಲಕ CWC 327 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಿದೆ. ಇದರಲ್ಲಿ ಜೂನಿಯರ್‌ ಎಕ್ಸಿಕ್ಯೂಟಿವ್‌ ಮತ್ತು ಅಸಿಸ್ಟೆಂಟ್‌ ಮ್ಯಾನೇಜರ್‌ ಹುದ್ದೆಗಳು ಸೇರಿವೆ. ಈ ನೇಮಕಾತಿ ಅಭಿಯಾನದಲ್ಲಿ ಅರ್ಜಿ ಸಲ್ಲಿಕೆ ಈಗಾಗಲೇ ಪ್ರಾರಂಭವಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ನವೆಂಬರ್‌ 15 ರೊಳಗೆ ತಮ್ಮ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು ಎಂದು ನೋಡೋಣ.

ಹುದ್ದೆಗಳ ವಿವರ

ಅಸಿಸ್ಟಂಟ್‌ ಮ್ಯಾನೇಜರ್‌ (ಜನರಲ್‌) : 70

ಅಸಿಸ್ಟಂಟ್ ಮ್ಯಾನೇಜರ್‌ (ಟೆಕ್ನಿಕಲ್‌) : 60

ಅಸಿಸ್ಟಂಟ್ ಮ್ಯಾನೇಜರ್‌ (ಫೈನಾನ್ಸ್‌) : 10

ಅಸಿಸ್ಟಂಟ್ ಮ್ಯಾನೇಜರ್‌ (ಎಂಜಿನಿಯರ್‌ – ಸಿವಿಲ್‌) : 22

ಅಸಿಸ್ಟಂಟ್ ಮ್ಯಾನೇಜರ್‌ (ಎಂಜಿನಿಯರ್‌ – ಎಲೆಕ್ಟ್ರಿಕಲ್‌) : 5

ಅಸಿಸ್ಟಂಟ್ ಮ್ಯಾನೇಜರ್‌ (ಎಂಜಿನಿಯರ್‌ – ಮ್ಯಾಕೆನಿಕಲ್‌) : 4

ಜೂನಿಯರ್‌ ಎಕ್ಸಿಕ್ಯೂಟಿವ್‌ (ಜನರಲ್‌) : 78

ಜೂನಿಯರ್‌ ಎಕ್ಸಿಕ್ಯೂಟಿವ್‌ (ಟೆಕ್ನಿಕಲ್‌) : 78

ವಯೋಮಿತಿ

ಈ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 18 ರಿಂದ 28 ವರ್ಷಗಳ ನಡುವೆ ಇರಬೇಕು. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.

ವಿದ್ಯಾರ್ಹತೆ

ಈ ನೇಮಕಾತಿ ಅಭಿಯಾನದಲ್ಲಿ ವಿವಿಧ ಹುದ್ದೆಗಳಿಗೆ ಅನುಗಣವಾಗಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಕೂಲಂಕುಷವಾಗಿ ಪರೀಕ್ಷಿಸಿ.

ಅರ್ಜಿ ಶುಲ್ಕ

CWC ನೇಮಕಾತಿಗೆ ಅರ್ಜಿಯನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬೇಕು. ಯುಆರ್ / ಇಡಬ್ಲ್ಯೂಎಸ್ / ಒಬಿಸಿಗೆ ಅರ್ಜಿ ಶುಲ್ಕ 1350 ರೂ., ಎಸ್‌ಸಿ, ಎಸ್‌ಟಿ, ಮಹಿಳೆಯರು, ದಿವ್ಯಾಂಗರು, ಮಾಜಿ ಸೈನಿಕರು 500 ರೂ. ಪಾವತಿಸಬೇಕು.

ವೇತನ

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 40,000 ರೂ. ದಿಂದ 1,40,000 ರೂ. ವರೆಗೆ ನೀಡಲಾಗುವುದು.

ಅರ್ಜಿ ಸಲ್ಲಿಕೆ ಹೇಗೆ?

CWC ನೇಮಕಾತಿ ಅಭಿಯಾನದಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದ್ದು ಅಭ್ಯರ್ಥಿಗಳು ನವೆಂಬರ್‌ 15 ರೊಳಗೆ ತಮ್ಮ ಅರ್ಜಿಯನ್ನು cewacor.nic.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.