CDAC ನಲ್ಲಿ 842 ಪ್ರಾಜೆಕ್ಟ್ ಸ್ಟಾಫ್ ಹುದ್ದೆಗೆ ನೇಮಕಾತಿ ಪ್ರಕಟ : ಬೆಂಗಳೂರಿನಲ್ಲಿರುವ 58 ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ !
ಸಿಡ್ಯಾಕ್ (CDAC) ದೇಶದ ವಿವಿಧ ಭಾಗಗಳಲ್ಲಿ ಖಾಲಿ ಇರುವ ಪ್ರಾಜೆಕ್ಟ್ ಸ್ಟಾಫ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.
By Archana V Bhat | ಅರ್ಚನಾ ವಿ ಭಟ್
1 min read
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿರುವ ಸಿಡ್ಯಾಕ್ (ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್ ಕಂಪ್ಯೂಟಿಂಗ್) ವಿಜ್ಞಾನ ಸಂಸ್ಥೆ. ಇದೀಗ ಸಿಡ್ಯಾಕ್ 842 ಪ್ರಾಜೆಕ್ಟ್ ಸ್ಟಾಫ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯ ಬಿಡುಗಡೆ ಮಾಡಿದೆ. ಬೆಂಗಳೂರು ಸೇರಿದಂತೆ ದೆಹಲಿ, ಹೈದರಾಬಾದ್, ನೋಯ್ಡಾ, ಪುಣೆ, ಮುಂಬೈ, ಮೊಹಾಲಿ, ಕೊಲ್ಕತ್ತಾ ಮುಂತಾದ ಸಿಡ್ಯಾಕ್ ಕೇಂದ್ರಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು, ಅಕ್ಟೋಬರ್ 26 ಅಂತಿಮ ದಿನವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಪೂರ್ಣ ವಿವರಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು? ಇಲ್ಲಿದೆ ಓದಿ.
ಹುದ್ದೆಯ ವಿವರ
ಪ್ರಾಜೆಕ್ಟ್ ಅಸೋಸಿಯೇಟ್, ಪ್ರಾಜೆಕ್ಟ್ ಎಂಜಿನಿಯರ್, ಸೀನಿಯರ್ ಪ್ರಾಜೆಕ್ಟ್ ಎಂಜಿನಿಯರ್/ಮಾಡ್ಯೂಲ್ ಲೀಡ್, ಪ್ರಾಜೆಕ್ಟ್ ಮ್ಯಾನೇಜರ್/ಪ್ರೋಗ್ರಾಂ ಮ್ಯಾನೇಜರ್, ಟೆಕ್ ಲೀಡ್, ಜೊತೆಗೆ ಸಹಾಯಕ ಹುದ್ದೆಗಳು.
ಎಲ್ಲೆಲ್ಲಿ ಎಷ್ಟು ಹುದ್ದೆಗಳಿವೆ?
ನೋಯ್ಡಾ – 207
ಪುಣೆ – 142
ತಿರುವನಂತಪುರಂ – 118
ಗುವಾಹಟಿ – 88
ಚೆನ್ನೈ – 88
ಬೆಂಗಳೂರು – 58
ಮೊಹಾಲಿ – 55
ಹೈದರಾಬಾದ್ – 46
ಮುಂಬೈ – 20
ಕೋಲ್ಕತ್ತಾ – 19
ದೆಹಲಿ – 1
ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ಸಂಬಂಧಿತ ವಿಭಾಗದಲ್ಲಿ ಬಿಇ, ಬಿಟೆಕ್, SCVT/ITI ಪ್ರಮಾಣಪತ್ರ, ಪದವಿ, ಎಂಇ, ಎಂಟೆಕ್, CA, LLM, CS, CMA, MBA, PG, LLB, PhD ಪದವಿ ಪಡೆದಿರಬೇಕು.
ವಯೋಮಿತಿ ಮತ್ತು ಕೆಲಸದ ಅನುಭವ
ಪ್ರಾಜೆಕ್ಟ್ ಅಸೋಸಿಯೇಟ್‌ಗಳಿಗೆ 30 ರಿಂದ 45 ವರ್ಷಗಳು – ಯಾವುದೇ ಅನುಭವದ ಅಗತ್ಯವಿಲ್ಲ
ಪ್ರಾಜೆಕ್ಟ್ ಎಂಜಿನಿಯರ್‌ಗಳಿಗೆ 30 ರಿಂದ 45 ವರ್ಷಗಳು – 0-4 ವರ್ಷಗಳ ಕೆಲಸದ ಅನುಭವ
ಸೀನಿಯರ್ ಪ್ರಾಜೆಕ್ಟ್ ಎಂಜಿನಿಯರ್/ಪ್ರಾಜೆಕ್ಟ್ ಲೀಡ್/ಮಾಡ್ಯೂಲ್ ಲೀಡ್‌ಗಳಿಗೆ 40 ವರ್ಷಗಳು – 4-7 ವರ್ಷಗಳ ಕೆಲಸದ ಅನುಭವ
ಪ್ರಾಜೆಕ್ಟ್/ಪ್ರೋಗ್ರಾಂ ಮ್ಯಾನೇಜರ್/ನಾಲೆಡ್ಜ್ ಪಾರ್ಟ್‌ನರ್‌ಗೆ 56 ವರ್ಷಗಳು – 9-15 ವರ್ಷಗಳ ಕೆಲಸದ ಅನುಭವ
ಆಯ್ಕೆ ವಿಧಾನ
ಲಿಖಿತ ಪರೀಕ್ಷೆ
ಕೌಶಲ ಪರೀಕ್ಷೆ
ಸಂದರ್ಶನ
ವೇತನ
ಪ್ರಾಜೆಕ್ಟ್ ಅಸೋಸಿಯೇಟ್ : ತಿಂಗಳಿಗೆ 30,000 ರಿಂದ 42,000 ರೂ.
ಪ್ರಾಜೆಕ್ಟ್ ಮ್ಯಾನೇಜರ್ : ತಿಂಗಳಿಗೆ 37,416 ರಿಂದ 59,250 ರೂ.
ಸೀನಿಯರ್ ಪ್ರಾಜೆಕ್ಟ್ ಎಂಜಿನಿಯರ್ : 70,750 ರಿಂದ 1,16,667 ರೂ.
ಪ್ರಾಜೆಕ್ಟ್ ಮ್ಯಾನೇಜರ್ : 1,05,250 ರಿಂದ 1,90,833 ರೂ.
ಅರ್ಜಿ ಸಲ್ಲಿಕೆ ಹೇಗೆ?
ಈ ನೇಮಕಾತಿಗೆ ಅರ್ಜಿಯನ್ನು ಅಕ್ಟೋಬರ್ 26ರ ರೊಳಗೆ ಸಲ್ಲಿಸಬೇಕು. ಅಭ್ಯರ್ಥಿಗಳು ಸಿಡ್ಯಾಕ್‌ನ ಅಧಿಕೃತ ವೆಬ್‌ಸೈಟ್ careers.cdac.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
Topics
ಸಂಬಂಧಿತ ಸುದ್ದಿಗಳು
job
ವಾಯುವ್ಯ ರೈಲ್ವೆಯಲ್ಲಿ 2008 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಪ್ರಕಟ ! ನವೆಂಬರ್ 6 ರ ಒಳಗೆ ಅರ್ಜಿ ಸಲ್ಲಿಸಿ
job
ISRO ದಲ್ಲಿ ವಿವಿಧ ಹುದ್ದೆಗಳ ನೇಮಕಾತಿ : ಲಕ್ಷಕ್ಕೂ ಅಧಿಕ ಸಂಬಳ ! SSLC, ITI ಪಾಸಾದವರು ಅರ್ಜಿ ಹಾಕಿ !
job
B.Sc ಅಗ್ರಿ ಆದವರಿಗೆ ಗುಡ್ ನ್ಯೂಸ್ ! IFFCO ನಲ್ಲಿ AGT ಹುದ್ದೆಗೆ ಅರ್ಜಿ ಆಹ್ವಾನ !
job

