ವಾಯುವ್ಯ ರೈಲ್ವೆಯಲ್ಲಿ 2008 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಪ್ರಕಟ ! ನವೆಂಬರ್‌ 6 ರ ಒಳಗೆ ಅರ್ಜಿ ಸಲ್ಲಿಸಿ

ರೈಲ್ವೆಯಲ್ಲಿ ಉದ್ಯೋಗ ನಿಮ್ಮ ಕನಸಾಗಿದ್ದರೆ ವಾಯುವ್ಯ ರೈಲ್ವೆಯ ಅಪ್ರೆಂಟಿಸ್‌ ಹುದ್ದೆ ನೇಮಕಾತಿಗೆ ಇಂದೇ ಅರ್ಜಿ ಸಲ್ಲಿಸಿ.

By Archana V Bhat | ಅರ್ಚನಾ ವಿ ಭಟ್‌

1 min read

WhatsAppPost
Western Railway Recruitment
Western Railway Recruitment

ಭಾರತದ ಅತಿ ದೊಡ್ಡ ಸಂಪರ್ಕ ಸೇತುವಾದ ಭಾರತೀಯ ರೈಲ್ವೆಯ ಭಾಗವಾದ ವಾಯುವ್ಯ ರೈಲ್ವೆ ಅಪ್ರೆಂಟಿಸ್‌ ಹುದ್ದೆಗಳ ನೇಮಕಾತಿಗೆ ಅಧಿಕೃತ ಘೋಷಣೆ ಹೊರಡಿಸಿದೆ. ಇದರ ಪ್ರಕಾರ ವಾಯುವ್ಯ ರೈಲ್ವೆಯು ಒಟ್ಟು 2008 ಅಪ್ರೆಂಟಿಸ್‌ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಈ ನೇಮಕಾತಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಅಕ್ಟೋಬರ್‌ 7 ರಿಂದ ಪ್ರಾರಂಭವಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ನವೆಂಬರ್‌ 6 ರ ಒಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯಲ್ಲಿ ಯಾರು ಅರ್ಜಿ ಸಲ್ಲಿಸಬಹುದು? ಏನೇನು ಅರ್ಹತೆಗಳಿರಬೇಕು ಎಂದು ನೋಡೋಣ.

ವಿದ್ಯಾರ್ಹತೆ

ಈ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿಯಲ್ಲಿ ಶೇ 50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಇದರೊಂದಿಗೆ ಸಂಬಂಧಿತ ವ್ಯಾಪಾರದಲ್ಲಿ ರಾಷ್ಟ್ರೀಯ ವೃತ್ತಿಪರ ತರಬೇತಿ ಮಂಡಳಿ (NCVT) ಅಥವಾ ರಾಜ್ಯ ವೃತ್ತಿಪರ ತರಬೇತಿ ಮಂಡಳಿ (SCVT) ನೀಡಿದ ರಾಷ್ಟ್ರೀಯ ಪ್ರಮಾಣಪತ್ರವನ್ನು ಹೊಂದಿರಬೇಕು.

ವಯೋಮಿತಿ

ವಾಯುವ್ಯ ರೈಲ್ವೆ ಅಪ್ರೆಂಟಿಸ್‌ ಹುದ್ದೆಗೆ ಅರ್ಜಿ ಹಾಕಲು ಅಭ್ಯರ್ಥಿಗಳ ಕನಿಷ್ಠ ವಯಸ್ಸು 15 ವರ್ಷಗಳು ಹಾಗೂ ಗರಿಷ್ಠ ವಯಸ್ಸು 24 ವರ್ಷಗಳು. ನಿಯಮಾನುಸಾರ ಮೀಸಲು ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.

ಅರ್ಜಿ ಶುಲ್ಕ

ಅಭ್ಯರ್ಥಿಗಳು ತಮ್ಮ ಅರ್ಜಿ ಸಲ್ಲಿಸಲು 100 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಆದರೆ ಮಹಿಳೆಯರು, ದಿವ್ಯಾಂಗ, ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.

ಆಯ್ಕೆ ಹೇಗೆ?

ಇದರಲ್ಲಿ ಅಭ್ಯರ್ಥಿಗಳನ್ನು 10 ನೇ ತರಗತಿ ಅಂಕ, ಐಟಿಐ ಅಂಕ, ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಸಲ್ಲಿಕೆ ಹೇಗೆ?

ವಾಯುವ್ಯ ರೈಲ್ವೆ ಅಪ್ರೆಂಟಿಸ್‌ ಹುದ್ದೆಗೆ ಅಭ್ಯರ್ಥಿಗಳು ಆನ್‌ಲೈನ್ ಮೂಲಕ rrcjaipur.in ವೆಬ್‌ಸೈಟ್‌ಗೆ ತೆರಳಿ ಅರ್ಜಿ ಸಲ್ಲಿಸಬೇಕು.

Topics

ಸಂಬಂಧಿತ ಸುದ್ದಿಗಳು