ಪ್ರಾತಿನಿಧಿಕ ಚಿತ್ರ
ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (AAI Recruitment 2022 ) ಜೂನಿಯರ್ ಮತ್ತು ಸೀನಿಯರ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಒಟ್ಟು 156 ಹುದ್ದೆಗಳಿಗೆ ಭರ್ತಿ ಮಾಡಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 1 ರಿಂದ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವು ಸೆಪ್ಟೆಂಬರ್ 30 ಆಗಿರುತ್ತದೆ.
ಹುದ್ದೆಯ ವಿವರ:
ಕಿರಿಯ ಸಹಾಯಕ (ಅಗ್ನಿಶಾಮಕ ಸೇವೆ) -132
ಕಿರಿಯ ಸಹಾಯಕ (ಕಚೇರಿ) -10
ಹಿರಿಯ ಸಹಾಯಕ (ಅಕೌಂಟ್) – 13
ಹಿರಿಯ ಸಹಾಯಕ (ಅಧಿಕೃತ ಭಾಷೆ)–1
ಶೈಕ್ಷಣಿಕ ಅರ್ಹತೆ :
ಕಿರಿಯ ಸಹಾಯಕ ಅಗ್ನಿಶಾಮಕ ಸೇವೆ):
ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ 10 + 3 ವರ್ಷಗಳ ಡಿಪ್ಲೊಮಾ ಇನ್ ಮೆಕ್ಯಾನಿಕಲ್ / ಆಟೋಮೊಬೈಲ್ / ಫೈರ್ ಕನಿಷ್ಠ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಚಾಲನಾ ಪರವಾನಿಗೆ ಕಡ್ಡಾಯವಾಗಿ ಪಡೆದಿರಬೇಕು.
ಕಿರಿಯ ಸಹಾಯಕ (ಕಚೇರಿ):
ಟೈಪಿಂಗ್ನೊಂದಿಗೆ ಪದವಿ ಪಡೆದಿರಬೇಕು. ಇಂಗ್ಲಿಷ್ನಲ್ಲಿ 30 wpm ಅಥವಾ ಹಿಂದಿಯಲ್ಲಿ 25 wpm ಟೈಪಿಂಗ್ ಸ್ಪೀಡ್ ಇರಬೇಕು.
ಹಿರಿಯ ಸಹಾಯಕ (ಅಕೌಂಟ್):
03 ರಿಂದ 06 ತಿಂಗಳ ಕಂಪ್ಯೂಟರ್ ತರಬೇತಿ ಕೋರ್ಸ್ನೊಂದಿಗೆ ಬಿಕಾಂ ಪದವಿ ಹೊಂದಿರಬೇಕು.
ಹಿರಿಯ ಸಹಾಯಕ (ಅಧಿಕೃತ ಭಾಷೆ):
ಹಿಂದಿ ಮತ್ತು ಇಂಗ್ಲಿಷ್ ಅನ್ನು ಕಡ್ಡಾಯ / ಐಚ್ಛಿಕ ವಿಷಯಗಳಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಹಿಂದಿ/ಇಂಗ್ಲಿಷ್ ಮಾಸ್ಟರ್ಸ್ ಪಡೆದಿರಬೇಕು.
ಹೆಚ್ಚಿನ ವಿವರಗಳಿಗಾಗಿ AAI ವೆಬ್ಸೈಟ್ https://www.aai.aero/en/recruitment/release/284246 ಭೇಟಿ ಕೊಡಿ.
ವಯೋಮಿತಿ :
ಕನಿಷ್ಠ ವಯಸ್ಸು: 18 ವರ್ಷಗಳು.
ಗರಿಷ್ಠ ವಯಸ್ಸು: 30 ವರ್ಷಗಳು.
25/08/2022 ರಂತೆ OBC (ನಾನ್-ಕ್ರೀಮಿ ಲೇಯರ್) ಗೆ 3 ವರ್ಷಗಳು ಮತ್ತು 5/08/2022 ರಂತೆ SC/ST ಗೆ 5 ವರ್ಷಗಳು ವಯಸ್ಸಿನ ಸಡಿಲಿಕೆ ಇರುವುದು
ಅರ್ಜಿ ಶುಲ್ಕ:
ಸಾಮಾನ್ಯ / ಒಬಿಸಿ/ ಇಡಬ್ಲ್ಯುಎಸ್ : 1000/-
ಎಸ್/ಎಸ್ಟಿ/ಪಿಹೆಚ್/ ಎಲ್ಲಾ ವರ್ಗದ ಮಹಿಳೆಯರಿಗೆ : 0/-
ಆದರೂ, ಯಾವುದೇ ವರ್ಗವನ್ನು ಲೆಕ್ಕಿಸದೆ ಎಲ್ಲಾ ಅಭ್ಯರ್ಥಿಗಳು ಕೋವಿಡ್ 19 ಗಾಗಿ ಆರೋಗ್ಯ ಮತ್ತು ನೈರ್ಮಲ್ಯ ವ್ಯವಸ್ಥೆಗಾಗಿ ರೂ.90/- ಶುಲ್ಕವನ್ನು ಪಾವತಿಸಬೇಕು.
ಸಂಬಳದ ವಿವರ:
ಕಿರಿಯ ಸಹಾಯಕ (ಅಗ್ನಿಶಾಮಕ) –ರೂ. 31000-92000/-
ಕಿರಿಯ ಸಹಾಯಕ (ಕಚೇರಿ) –ರೂ. 31000-92000/-
ಹಿರಿಯ ಸಹಾಯಕ (ಅಕೌಂಟ್ಸ್) –ರೂ.36000-110000/-
ಹಿರಿಯ ಸಹಾಯಕ (ಅಧಿಕೃತ ಭಾಷೆ)–ರೂ.36000-110000/-
ಅರ್ಜಿ ಸಲ್ಲಿಕೆ :
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಈ ವೆಬ್ಸೈಟ್ಗೆ ಭೇಟಿಕೊಡಿ : https://www.aai.aero/en/careers/recruitment
ಇದನ್ನೂ ಓದಿ : Renault : ಹಬ್ಬದ ಕೊಡುಗೆಯಾಗಿ ಕಿಗರ್, ಟ್ರೈಬರ್ ಮತ್ತು ಕ್ವಿಡ್ ಗಳ ಸೀಮಿತ ಆವೃತ್ತಿಗಳನ್ನು ಬಿಡುಗಡೆ ಮಾಡಿದ ರೆನಾಲ್ಟ್
(AAI Recruitment 2022 for diploma and degree holders apply online before September 30)
This post was last modified on ಸೆಪ್ಟೆಂಬರ್ 3, 2022 4:45 ಅಪರಾಹ್ನ
This website uses cookies.