AAI Recruitment 2022 : ಡಿಪ್ಲೋಮಾ ಮತ್ತು ಡಿಗ್ರಿ ಮಾಡಿದವರಿಗೆ ಏರ್‌ ಪೋರ್ಟ್‌ ಆಥೋರಿಟಿ ಆಫ್‌ ಇಂಡಿಯಾದಲ್ಲಿ ಉದ್ಯೋಗಾವಕಾಶ

ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (AAI Recruitment 2022 ) ಜೂನಿಯರ್ ಮತ್ತು ಸೀನಿಯರ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಒಟ್ಟು 156 ಹುದ್ದೆಗಳಿಗೆ ಭರ್ತಿ ಮಾಡಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 1 ರಿಂದ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವು ಸೆಪ್ಟೆಂಬರ್‌ 30 ಆಗಿರುತ್ತದೆ.

ಹುದ್ದೆಯ ವಿವರ:
ಕಿರಿಯ ಸಹಾಯಕ (ಅಗ್ನಿಶಾಮಕ ಸೇವೆ) -132
ಕಿರಿಯ ಸಹಾಯಕ (ಕಚೇರಿ) -10
ಹಿರಿಯ ಸಹಾಯಕ (ಅಕೌಂಟ್‌) – 13
ಹಿರಿಯ ಸಹಾಯಕ (ಅಧಿಕೃತ ಭಾಷೆ)–1

ಶೈಕ್ಷಣಿಕ ಅರ್ಹತೆ :
ಕಿರಿಯ ಸಹಾಯಕ ಅಗ್ನಿಶಾಮಕ ಸೇವೆ):
ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ 10 + 3 ವರ್ಷಗಳ ಡಿಪ್ಲೊಮಾ ಇನ್ ಮೆಕ್ಯಾನಿಕಲ್ / ಆಟೋಮೊಬೈಲ್ / ಫೈರ್ ಕನಿಷ್ಠ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಚಾಲನಾ ಪರವಾನಿಗೆ ಕಡ್ಡಾಯವಾಗಿ ಪಡೆದಿರಬೇಕು.

ಕಿರಿಯ ಸಹಾಯಕ (ಕಚೇರಿ):
ಟೈಪಿಂಗ್‌ನೊಂದಿಗೆ ಪದವಿ ಪಡೆದಿರಬೇಕು. ಇಂಗ್ಲಿಷ್‌ನಲ್ಲಿ 30 wpm ಅಥವಾ ಹಿಂದಿಯಲ್ಲಿ 25 wpm ಟೈಪಿಂಗ್ ಸ್ಪೀಡ್‌ ಇರಬೇಕು.

ಹಿರಿಯ ಸಹಾಯಕ (ಅಕೌಂಟ್‌):
03 ರಿಂದ 06 ತಿಂಗಳ ಕಂಪ್ಯೂಟರ್ ತರಬೇತಿ ಕೋರ್ಸ್‌ನೊಂದಿಗೆ ಬಿಕಾಂ ಪದವಿ ಹೊಂದಿರಬೇಕು.

ಹಿರಿಯ ಸಹಾಯಕ (ಅಧಿಕೃತ ಭಾಷೆ):
ಹಿಂದಿ ಮತ್ತು ಇಂಗ್ಲಿಷ್ ಅನ್ನು ಕಡ್ಡಾಯ / ಐಚ್ಛಿಕ ವಿಷಯಗಳಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಹಿಂದಿ/ಇಂಗ್ಲಿಷ್ ಮಾಸ್ಟರ್ಸ್‌ ಪಡೆದಿರಬೇಕು.

ಹೆಚ್ಚಿನ ವಿವರಗಳಿಗಾಗಿ AAI ವೆಬ್‌ಸೈಟ್‌ https://www.aai.aero/en/recruitment/release/284246 ಭೇಟಿ ಕೊಡಿ.

ವಯೋಮಿತಿ :
ಕನಿಷ್ಠ ವಯಸ್ಸು: 18 ವರ್ಷಗಳು.
ಗರಿಷ್ಠ ವಯಸ್ಸು: 30 ವರ್ಷಗಳು.
25/08/2022 ರಂತೆ OBC (ನಾನ್-ಕ್ರೀಮಿ ಲೇಯರ್) ಗೆ 3 ವರ್ಷಗಳು ಮತ್ತು 5/08/2022 ರಂತೆ SC/ST ಗೆ 5 ವರ್ಷಗಳು ವಯಸ್ಸಿನ ಸಡಿಲಿಕೆ ಇರುವುದು

ಅರ್ಜಿ ಶುಲ್ಕ:
ಸಾಮಾನ್ಯ / ಒಬಿಸಿ/ ಇಡಬ್ಲ್ಯುಎಸ್‌ : 1000/-
ಎಸ್‌/ಎಸ್‌ಟಿ/ಪಿಹೆಚ್‌/ ಎಲ್ಲಾ ವರ್ಗದ ಮಹಿಳೆಯರಿಗೆ : 0/-
ಆದರೂ, ಯಾವುದೇ ವರ್ಗವನ್ನು ಲೆಕ್ಕಿಸದೆ ಎಲ್ಲಾ ಅಭ್ಯರ್ಥಿಗಳು ಕೋವಿಡ್ 19 ಗಾಗಿ ಆರೋಗ್ಯ ಮತ್ತು ನೈರ್ಮಲ್ಯ ವ್ಯವಸ್ಥೆಗಾಗಿ ರೂ.90/- ಶುಲ್ಕವನ್ನು ಪಾವತಿಸಬೇಕು.

ಸಂಬಳದ ವಿವರ:
ಕಿರಿಯ ಸಹಾಯಕ (ಅಗ್ನಿಶಾಮಕ) –ರೂ. 31000-92000/-
ಕಿರಿಯ ಸಹಾಯಕ (ಕಚೇರಿ) –ರೂ. 31000-92000/-
ಹಿರಿಯ ಸಹಾಯಕ (ಅಕೌಂಟ್ಸ್‌) –ರೂ.36000-110000/-
ಹಿರಿಯ ಸಹಾಯಕ (ಅಧಿಕೃತ ಭಾಷೆ)–ರೂ.36000-110000/-

ಅರ್ಜಿ ಸಲ್ಲಿಕೆ :
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಈ ವೆಬ್‌ಸೈಟ್‌ಗೆ ಭೇಟಿಕೊಡಿ : https://www.aai.aero/en/careers/recruitment

ಇದನ್ನೂ ಓದಿ : Renault : ಹಬ್ಬದ ಕೊಡುಗೆಯಾಗಿ ಕಿಗರ್, ಟ್ರೈಬರ್ ಮತ್ತು ಕ್ವಿಡ್‌ ಗಳ ಸೀಮಿತ ಆವೃತ್ತಿಗಳನ್ನು ಬಿಡುಗಡೆ ಮಾಡಿದ ರೆನಾಲ್ಟ್‌

ಇದನ್ನೂ ಓದಿ :Starbucks New CEO : ಸ್ಟಾರ್‌ಬಕ್ಸ್ ನ ಮುಂದಿನ ಸಿಇಒ ಲಕ್ಷ್ಮಣ್ ನರಸಿಂಹನ್ : ಪುಣೆ ಎಂಜಿನಿಯರ್‌ನ, ಕಾಫಿ ದೈತ್ಯ ‘ಸ್ಟಾರ್‌ಬಕ್ಸ್‌’ ನ ವರೆಗಿನ ಪ್ರಯಾಣ

(AAI Recruitment 2022 for diploma and degree holders apply online before September 30)

Comments are closed.