ಆರೋಗ್ಯಕ್ಕೆ ಸಲಾಡ್ ಬೆಸ್ಟ್ ಅಂತ ಅದನ್ನೇ ಹೆಚ್ಚಾಗಿ ತಿಂತೀರಾ ? ಎಚ್ಚರ, ಈ ಸಮಸ್ಯೆ ನಿಮ್ಮನ್ನು ಕಾಡಬಹುದು !
ಹಸಿ ತರಕಾರಿಗಳು ಆರೋಗ್ಯಕ್ಕೆ ಉತ್ತಮ. ಹಾಗೆಂದು ಅವುಗಳನ್ನು ಅತಿಯಾಗಿ ತಿಂದ್ರೆ ಏನಾಗುತ್ತದೆ? ದಿನಪೂರ್ತಿ ಸಲಾಡ್‌ನಲ್ಲೇ ಹೊಟ್ಟೆ ತುಂಬಿಸಿಕೊಳ್ಳುವವರಿಗೆ ಇಲ್ಲಿದೆ ಕಿವಿಮಾತು...
ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಆರೋಗ್ಯದ ಬಗ್ಗೆ ಹೆಚ್ಚೆಚ್ಚು ಕಾಳಜಿವಹಿಸುತ್ತಿರುವುದನ್ನು ಕಾಣಬಹುದು. ಎಲ್ಲೇ ಹೋದರೂ, ಬಂದರೂ ಅಲ್ಲೊಂದು ಆರೋಗ್ಯದ ಬಗ್ಗೆ ಜನರು ಮಾತನಾಡುವುದನ್ನು ಕೇಳುತ್ತೇವೆ. ನಿತ್ಯದ ಡಯಟ್, ಆರೋಗ್ಯ, ಔಷಧಿ ಎಂದೆಲ್ಲ ಮಾತನಾಡುತ್ತಾರೆ. ತಾವು ಫಾಲೋ ಮಾಡುವ ಡಯಟ್ ಬಗ್ಗೆ ಮಾಹಿತಿಗಳನ್ನು ಹಂಚಿಕೊಳ್ಳುತ್ತಾರೆ. ನಮ್ಮಲ್ಲಿ ಬಹಳಷ್ಟು ಜನರು ತೂಕ ಇಳಿಕೆಗೆ, ದೀರ್ಘಕಾಲದ ಕಾಯಿಲೆಗಳಿಂದ ದೂರವಿರಲು ಸಲಾಡ್ ಒಳ್ಳೆಯದು ಎಂದು ಭಾವಿಸಿದ್ದಾರೆ. ಇದು ನಿಜವೂ ಹೌದು. ಜಂಕ್ ಫುಡ್, ಪ್ರೊಸ್ಸೆಸ್ಡ್ ಫುಡ್ ಮುಂತಾದ ರೆಡಿ ಟು ಈಟ್ ಫುಡ್‌ಗಳಿಗಿಂತ ಬಹಳ ಉತ್ತಮ. ಹಾಗೆಂದು ಕೆಲವರು ದಿನದ ಬಹುಪಾಲು ಊಟವನ್ನು ಸಲಾಡ್‌ನಲ್ಲಿಯೇ ಮುಗಿಸುತ್ತಾರೆ. ಇದರಿಂದ ಕೆಲವು ಆರೋಗ್ಯ ಸಮಸ್ಯೆಗಳು ಅವರನ್ನು ಕಾಡುತ್ತವೆ. ಹೊಟ್ಟೆಯುಬ್ಬರ, ಭಾರ ಅಥವಾ ಅಜೀರ್ಣ ಮುಂತಾದವುಗಳು. ಇದಕ್ಕೆ ತರಕಾರಿಗಳೇ ಕಾರಣ ಎಂದಲ್ಲ. ಅವುಗಳ ಸಂಯೋಜನೆ, ಕೆಲವು ಹಸಿ ತರಕಾರಿಗಳು ಇದಕ್ಕೆ ಕಾರಣ. ಹಾಗಾದರೆ ಸಲಾಡ್ ತಿನ್ನುವ ಸರಿಯಾದ ಕ್ರಮ ಯಾವುದು? ಇಲ್ಲಿದೆ ಓದಿ.
ಸಲಾಡ್ ಜಾಸ್ತಿ ತಿಂದ್ರೆ...
ಸಲಾಡ್‌ನಲ್ಲಿರುವ ಪ್ರತಿಯೊಂದು ಪದಾರ್ಥವು ತನ್ನದೇ ಆದ ರೀತಿಯಲ್ಲಿ ಆರೋಗ್ಯ ಪ್ರಯೋಜನ ನೀಡುತ್ತದೆ. ಹಾಗೆಂದು ದಿನವಿಡೀ ಅದನ್ನೇ ತಿಂದ್ರೆ ಆಗ ಶುರುವಾಗುತ್ತದೆ. ಸಮಸ್ಯೆ.ಕೆಲವರಿಗೆ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಮತ್ತು ಉದರ ಬೇನೆ ಉಂಟಾಗುತ್ತದೆ. ಕೆಲವು ಆಹಾರಗಳು, ವಿಶೇಷವಾಗಿ ಬಹು ಬೇಗನೆ ಹುಳಿಯಾಗುವ ಕಾರ್ಬೋಹೈಡ್ರೇಟ್‌ಗಳಿರುವ ಆಹಾರಗಳು ಸೂಕ್ಷ್ಮ ಜೀರ್ಣಾಂಗ ವ್ಯವಸ್ಥೆ ಹೊಂದಿರುವ ಜನರಲ್ಲಿ ಈ ಲಕ್ಷಣಗಳನ್ನು ಉಂಟುಮಾಡಬಹುದು. ಉದಾಹರಣೆಗೆ, ಹಸಿರು ಈರುಳ್ಳಿ ಫ್ರಕ್ಟಾನ್‌ಗಳನ್ನು, ಕಡಲೆಗಳು ಮತ್ತು ಕಿಡ್ನಿ ಬೀನ್ಸ್ ಗ್ಯಾಲಕ್ಟೊ-ಆಲಿಗೋಸ್ಯಾಕರೈಡ್‌ಗಳನ್ನು ಹೊಂದಿರುತ್ತವೆ. ಹೂಕೋಸು ಮತ್ತು ಅಣಬೆಗಳು ಮನ್ನಿಟಾಲ್ ಅನ್ನು ಹೊಂದಿರುತ್ತವೆ ಮತ್ತು ಸೇಬು, ಒಣಗಿದ ಹಣ್ಣುಗಳು ಫ್ರಕ್ಟೋಸ್ ಮತ್ತು ಸೋರ್ಬಿಟೋಲ್ ಅನ್ನು ಹೊಂದಿರುತ್ತವೆ. ಇವುಗಳಲ್ಲಿ ಪ್ರತಿಯೊಂದೂ ಸಣ್ಣ ಪ್ರಮಾಣದಲ್ಲಿ ಇದ್ದರೂ ಸಹ, ದೊಡ್ಡ ಪ್ರಮಾಣದಲ್ಲಿ ಅವೆಲ್ಲವನ್ನೂ ಒಟ್ಟಿಗೆ ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಒತ್ತಡ ಉಂಟಾಗುತ್ತದೆ. ಅದು ಹೊಟ್ಟೆ ಉಬ್ಬುವುದು ಮತ್ತು ಗ್ಯಾಸ್ಟ್ರಿಕ್‌ನಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.
ಸಲಾಡ್ ತಿನ್ನಲು ಸಿಂಪಲ್ ಸಲಹೆಗಳು
* ಸೂಕ್ಷ್ಮ ಜೀರ್ಣಾಂಗ ವ್ಯವಸ್ಥೆ ಹೊಂದಿರುವವರು ಹಸಿ ತರಕಾರಿಗಳ ಸಲಾಡ್ ತಿನ್ನುವ ಬದಲಿಗೆ ಬೇಯಿಸಿದ ತರಕಾರಿಗಳನ್ನು ತಿನ್ನುವುದು ಉತ್ತಮ. ತರಕಾರಿಗಳನ್ನು ಆವಿಯಲ್ಲಿ ಬೇಯಿಸುವುದು ಅವುಗಳ ಗಟ್ಟಿಯಾದ ಸಸ್ಯ ರಚನೆಯನ್ನು ಮೃದು ಜೀರ್ಣಾಂಗ ವ್ಯವಸ್ಥೆಯುವಾಗುತ್ತದೆ. ಆಗ ಅವುಗಳನ್ನು ಸುಲಭವಾಗಿ ಜೀರ್ಣಿಸಿಕೊಳ್ಳಬಹುದಾಗಿದೆ.
* ಒಂದೇ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಹಸಿ ತರಕಾರಿಗಳನ್ನು ತಿನ್ನುವ ಬದಲು, ಪ್ರತಿ ಊಟಕ್ಕೂ ಒಂದು ಅಥವಾ ಎರಡು ಬೇಯಿಸಿದ ತರಕಾರಿಗಳನ್ನು ಅದರಲ್ಲಿ ಸೇರಿಸಿಕೊಳ್ಳಿ. ಮುಖ್ಯವಾಗಿ ಸಲಾಡ್ ಅನ್ನು ಊಟದಲ್ಲಿ ಸೈಡ್‌ಡಿಶ್ ಆಗಿ ತಿನ್ನಿ.
* ಜೀರ್ಣಿಸಿಕೊಳ್ಳಲು ಸುಲಭವಾದ ತರಕಾರಿಗಳೊಂದಿಗೆ ಊಟ ಪ್ರಾರಂಭಿಸಿ ಮತ್ತು ಗ್ರಿಲ್ಡ್ ಚಿಕನ್, ಮೀನು, ಮೊಟ್ಟೆಗಳು, ಟೋಫು, ಪನೀರ್ ಮುಂತಾದ ಪ್ರೋಟೀನ್‌ನ ಉತ್ತಮ ಮೂಲಗಳನ್ನೂ ಸೇರಿಸಿ.
* ಸಲಾಡ್‌ನಲ್ಲಿ ಆರೋಗ್ಯಕರ ಕೊಬ್ಬುಗಳನ್ನು ಸೇರಿಸುವುದು ಸಹ ಒಳ್ಳೆಯದು.
* ಕಾರ್ಬೋಹೈಡ್ರೇಟ್ ಮೂಲವಾಗಿ ಸ್ವಲ್ಪ ಅಕ್ಕಿ, ಕ್ವಿನೋವಾ, ರಾಗಿ, ಸಿಹಿ ಗೆಣಸು ಮುಂತಾದವುಗಳನ್ನು ಕೂಡ ಸೇರಿಸಬಹುದು.
* ಕೆಲವು ಸಣ್ಣ ಬದಲಾವಣೆಗಳು ಸಹ ಸಲಾಡ್ ಅನ್ನು ಹೆಚ್ಚು ಜೀರ್ಣಕ್ರಿಯೆಗೆ ಒಳಪಡಿಸಲು ಸಹಾಯ ಮಾಡುತ್ತವೆ. ಈರುಳ್ಳಿಯ ಬದಲಿಗೆ ಈರುಳ್ಳಿ ಎಲೆಗಳನ್ನು, ಸೇಬಿನ ಬದಲಿಗೆ ಹಣ್ಣುಗಳನ್ನು ಮತ್ತು ಹೂಕೋಸು ಮತ್ತು ಅಣಬೆಗಳ ಬದಲಿಗೆ ಸೌತೆಕಾಯಿಗಳು, ಕ್ಯಾರೆಟ್, ಕುಂಬಳಕಾಯಿ, ಕುಂಬಳಕಾಯಿಯನ್ನು ಹೋಲುವ ಚೀನೀಕಾಯಿ ಅಥವಾ ಹುರಿದ ತರಕಾರಿಗಳನ್ನು ಬಳಸಬಹುದು ಎಂದು ತಜ್ಞರು ಹೇಳುತ್ತಾರೆ.
* ಸಲಾಡ್‌ಗೆ ಡ್ರೆಸ್ಸಿಂಗ್ ಮಾಡುವುದಿದ್ದರೆ ಸಾಧ್ಯವಾದಷ್ಟು ಸರಳವಾಗಿ ಇಟ್ಟುಕೊಳ್ಳಬೇಕು ಮತ್ತು ಸಲಾಡ್ ಅನ್ನು ಪದಾರ್ಥಗಳಿಂದ ತುಂಬಿಸದಂತೆ ನೋಡಿಕೊಳ್ಳಿ.
* ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಆರಾಮವಾಗಿ ಜೀರ್ಣಿಸಿಕೊಳ್ಳಬಹುದಾದ ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು, ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು ಮತ್ತು ಫೈಬರ್ ಅನ್ನು ಒಳಗೊಂಡಿರುವ ಸಮತೋಲಿತ ಆಹಾರವನ್ನು ರೂಢಿಸಿಕೊಳ್ಳಿ.
Topics
ಸಂಬಂಧಿತ ಸುದ್ದಿಗಳು
lifestyle
ಹಠಮಾರಿ ಶರ್ಟ್ ಕಾಲರ್ ಕೊಳೆಯನ್ನು ನಿಮಿಷಗಳಲ್ಲಿ ಹೋಗಲಾಡಿಸಲು ಮ್ಯಾಜಿಕ್ ಮನೆಮದ್ದುಇಲ್ಲಿದೆ
lifestyle
ಭಾರತೀಯರ ಸೀರೆ ಪರಂಪರೆ : ನಮ್ಮ ಪೂರ್ವಜರು ನಮ್ಮಕ್ಕಿಂತ ಮಾಡರ್ನ್ ಆಗಿದ್ರಾ?
lifestyle
ಶ್ರೀಕೃಷ್ಣನ ನೈವೇದ್ಯಕ್ಕೆ ಶ್ರೀಖಂಡ : ಸಿಂಪಲ್ ಆಗಿ ಹೀಗೆ ತಯಾರಿಸಿ
lifestyle

