Holding Talwar and posting reels: ತಲ್ವಾರ್​ ಹಿಡಿದು ರೀಲ್ಸ್​​ ಪೋಸ್ಟ್​ : ಇಬ್ಬರು ಆರೋಪಿಗಳನ್ನು ಬಂಧಿಸಿದ ಮಂಗಳೂರು ಪೊಲೀಸರು

Holding Talwar and posting reels: ಸಾಮಾಜಿಕ ಜಾಲತಾಣದಲ್ಲಿ ತಲ್ವಾರ್​ ಹಿಡಿದು ಡ್ಯಾನ್ಸ್​ ಮಾಡುವ ರೀಲ್ಸ್​ ಅಪ್​ಲೋಡ್​ ಮಾಡಿದ್ದ ಇಬ್ಬರು ಆರೋಪಿಗಳಿಗೆ ಖೆಡ್ಡಾ ತೋಡುವಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು(Mangaluru) ಪೊಲೀಸರು ಯಶಸ್ವಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಭಯ ಹುಟ್ಟಿಸಿದ ಆರೋಪ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಡಿಸೆಂಬರ್​ 13ರಂದು ಫೇಸ್​ಬುಕ್​ನಲ್ಲಿ Suresh Psy ಎಂಬ ಫೇಸ್​ಬುಕ್​ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಲಾಗಿತ್ತು. ಮಂಗಳೂರಿನ ಬಂದರು ನಿವಾಸಿ ಅಮೀರ್​ ಸುಹೇಲ್​ ಎಂಬಾತ ತಲ್ವಾರ್​ ಹಿಡಿದು ನರ್ತಿಸುವ ವಿಡಿಯೋ ಮಾಡಿದ್ದ. ಈ ವಿಡಿಯೋವನ್ನು ಕಾವೂರು ನಿವಾಸಿ ಸುರೇಶ್​ ಲೈಕ್​ ಹಾಗೂ ಹಾರ್ಟ್​ ಚಿಹ್ನೆಯನ್ನು ಹಾಕಿ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಸ್ಟೋರಿ ಶೇರ್​ ಮಾಡಿದ್ದರು.

ಸಾರ್ವಜನಿಕರಿಗೆ ಆತಂಕ ಸೃಷ್ಠಿಸಿದ ಆರೋಪದ ಅಡಿಯಲ್ಲಿ ಇಬ್ಬರು ಆರೋಪಿಗಳನ್ನು ಕಾವೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.ಆರೋಪಿಗಳ ವಿರುದ್ಧ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿಯಿಂದ ರೀಲ್ಸ್​ಗೆ ಬಳಸಲಾದ ತಲ್ವಾರ್​ ಮತ್ತು ವಿಡಿಯೋ ಪೋಸ್ಟ್​ ಮಾಡಲು ಬಳಸಿ ಮೊಬೈಲ್​ ಫೋನ್​ ಜಪ್ತಿ ಮಾಡಲಾಗಿದೆ.

Also Read: Email message creates panic: ಮಂಗಳೂರಿನ ಆರ್​ಟಿಓ ಕಚೇರಿ ಸ್ಫೋಟಕ್ಕೆ ಕಿಡಿಗೇಡಿಗಳ ಹುನ್ನಾರ : ಆತಂಕ ಸೃಷ್ಠಿಸಿದ ಮೇಲ್​ ಸಂದೇಶ

ಕೆಲವು ತಿಂಗಳುಗಳ ಹಿಂದೆಯಷ್ಟೇ ಬಿಗ್​ಬಾಸ್​ ಸ್ಪರ್ಧಿಗಳಾದ ವಿನಯ್​ ಹಾಗೂ ರಜತ್​ ಎಂಬವರು ಕೂಡ ಇದೇ ರೀತಿ ತಲ್ವಾರ್​ ಹಿಡಿದು ರೀಲ್ಸ್​ ಮಾಡಲು ಹೋಗುವ ಪೊಲೀಸ್ ಠಾಣೆಯ ಅತಿಥಿಗಳಾಗಿದ್ದರು.

Exit mobile version