Email message creates panic: ಮಂಗಳೂರಿನ ಆರ್ಟಿಓ ಕಚೇರಿ ಸ್ಫೋಟಕ್ಕೆ ಕಿಡಿಗೇಡಿಗಳ ಹುನ್ನಾರ : ಆತಂಕ ಸೃಷ್ಠಿಸಿದ ಮೇಲ್ ಸಂದೇಶ
Email message creates panic: ಮಂಗಳೂರಿನ ಆರ್ಟಿಓ ಕಚೇರಿಯ ಅಧಿಕೃತ ಮೇಲ್ಗೆ ಕಿಡಿಗೇಡಿಗಳು ಬಾಂಬ್ ಬೆದರಿಕೆಯ ಸಂದೇಶ ಕಳುಹಿಸಿದ ಘಟನೆ ವರದಿಯಾಗಿದೆ. ಮಂಗಳೂರಿನ ನೆಹರೂ ಮೈದಾನದ ಸಮೀಪ ಇರುವ ಆರ್ಟಿಓ ಕಚೇರಿಗೆ ಮೇಲ್ ಮಾಡಿರುವ ಕಿಡಿಗೇಡಿಗಳು 5 ಕಡೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದಾರೆ .
ಮಂಗಳೂರು(Mangaluru) ಆರ್ಟಿಓ ಕಚೇರಿಯ ಅಧಿಕೃತ ಮೇಲ್ಗೆ ನಿನ್ನೆ ರಾತ್ರಿಯೇ ಬಾಂಬ್ ಬೆದರಿಕೆ ಕರೆಯ ಮೇಲ್ ಬಂದಿತ್ತು. ಆದರೆ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಇದನ್ನು ಆರ್ಟಿಓ ಅಧಿಕಾರಿಗಳು ಗಮನಿಸಿದ್ದಾರೆ. ಈ ಮೇಲ್ನಲ್ಲಿ 5 ಕಡೆಗಳಲ್ಲಿ ಬಾಂಬ್ ಇರಿಸಿದ್ದೇವೆ ಎಂದು ಕಿಡಿಗೇಡಿಗಳು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಆರ್ಟಿಓ ಕಚೇರಿ ಅಧಿಕಾರಿಗಳು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ . ಇದಾದ ಬಳಿಕ ಬಾಂಬ್ ನಿಷ್ಕ್ರಿಯ ದಳ , ಎಎಸ್ಸಿಬಿಡಿಎಸ್ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ .
Also Read: ಬೆಳ್ತಂಗಡಿ : ಅಕ್ರಮ ಜಾನುವಾರು ಸಾಗಿಸುತ್ತಿದ್ದ ವ್ಯಕ್ತಿ ಬಂಧನ ; ಮನೆ, ಕೊಟ್ಟಿಗೆ ಜಪ್ತಿ
ಮೇಲ್ನಲ್ಲಿ ಏನಿದೆ ?
aarna aswin sekar@outlook.com ಮೇಲ್ ವಿಳಾಸದಿಂದ ಈ ಬೆದರಿಕೆ ಸಂದೇಶ ಕಳುಹಿಸಲಾಗಿದೆ. ಶೀಘ್ರದಲ್ಲಿಯೇ ಆರ್ಟಿಓನ ಐದು ಕಡೆ ಬಾಂಬ್ ಸ್ಫೋಟಿಸಲಾಗುವುದು. ಪಾಕಿಸ್ತಾನ ಐಎಸ್ಐ ಸೆಲ್ ಮಾಜಿ LTTE ಗಳ ಜೊತೆ ರಿಮೋಟ್ ಔಟ್ ಆಪರೇಷನ್ ಮಾಡಲು ನಿರ್ಧರಿಸಿದೆ ಎಂದೆಲ್ಲ ಈ ಮೇಲ್ನಲ್ಲಿ ತಿಳಿಸಲಾಗಿದೆ. ತಮಿಳುನಾಡು ರಾಜಕೀಯ ವಿಚಾರವಾಗಿಯೂ ಬರೆದಿರುವ ಕಿಡಿಗೇಡಿಗಳು ಸಜ್ಜನ್ ಹೈದರ್ PAF ಗೆ ಜಿಂದಾಬಾದ್ ಎಂದೂ ಉಲ್ಲೇಖಿಸಿದ್ದಾರೆ. ಈ ಮೇಲ್ನಲ್ಲಿ ತಮಿಳುನಾಡಿನ ಐಪಿಎಸ್ ಅಧಿಕಾರಿಗಳ ಹೆಸರನ್ನೂ ಬರೆಯಲಾಗಿದೆ.



