ಫ್ರೈಡ್ ರೈಸ್ ಸಿಂಡ್ರೋಮ್ ಗೆ ಓರ್ವ ಬಲಿ : ಏನಿದರ ರೋಗ ಲಕ್ಷಣ ?

Published by
Kannada News Next Desk

Fried Rice Syndrome  : ರಾತ್ರಿ ಮಾಡಿದ ಆಹಾರ ಉಳಿದ್ರೆ ಅದನ್ನು ಮುಂಜಾನೆ ಬೇಯಿಸಿ ತಿನ್ನುವುದು ಸರ್ವೇ ಸಾಮಾನ್ಯ. ಆದರೆ ಒಮ್ಮೆ ಬೇಯಿಸಿದ ಆಹಾರವನ್ನು ಮತ್ತೆ ಮತ್ತೆ ಬೇಯಿಸಿ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ. ಇದೀಗ ರಾತ್ರಿ ಉಳಿದ ಆಹಾರವನ್ನು ಮರು ದಿನ ಬೇಯಿಸಿ ತಿಂದು ವ್ಯಕ್ತಿಯೋರ್ವ ಸಾವನ್ನಪ್ಪಿರುವ (Fried Rice Syndrome Death )ಘಟನೆ ನಡೆದಿದೆ. ಈತನ ಸಾವಿಗೆ ಫ್ರೈಡ್‌ ರೈಸ್‌ ಸಿಂಡ್ರೋಮ್‌ ಕಾರಣ ಎನ್ನಲಾಗುತ್ತಿದೆ.

Image Credit to Original Source

ವರ್ಷಗಳು ಕಳೆದಂತೆ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳು ನಡೆಯುತ್ತವೆ. ಜೀವನ ಶೈಲಿನ ನಮ್ಮ ಬದುಕಿನ ಮೇಲೆ ಗಂಭೀರವಾದ ಪರಿಣಾಮವನ್ನು ಉಂಟು ಮಾಡುತ್ತಿದೆ. ಅದ್ರಲ್ಲೂ ಬೇಯಿಸಿದ ಆಹಾರವನ್ನು ಪುನಃ ಪುನಃ ಬೇಯಿಸಿ ತಿನ್ನವುದರಿಂದ ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ. ಅದ್ರಲ್ಲೂ ಬೇಯಿಸಿ ತಿನ್ನುವ ಆಹಾರ ಕ್ಕೂ ಫ್ರೈಡ್‌ ರೈಸ್‌ ಸಿಂಡ್ರೋಮ್‌ಗೂ ಏನು ಸಂಬಂಧ. ಅಷ್ಟಕ್ಕೂ ಫ್ರೈಡ್‌ರೈಸ್‌ ಸಿಂಡ್ರೋಲ್‌ ಎಂದರೇನು ಅನ್ನೋದನ್ನು ತಿಳಿದುಕೊಳ್ಳೋಣಾ.

ಏನಿದು ಫ್ರೈಡ್‌ರೈಸ್‌ ಸಿಂಡ್ರೋಮ್‌ ?

ಅಮೇರಿಕನ್ ಜರ್ನಲ್ ಆಫ್ ಬಯೋಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ನೀಡಿರುವ ವರದಿಯ ಪ್ರಕಾರ, ಫ್ರೈಡ್ ರೈಸ್ ಸಿಂಡ್ರೋಮ್‌ ಆಹಾರದಿಂದ ಹರಡುವ ಕಾಯಿಲೆ ಆಗಿದೆ. ಆಹಾರವನ್ನು ಬೇಯಿಸಿ ಕೋಣೆಯ ಉಷ್ಣಾಂಶದಲ್ಲಿ ಹೆಚ್ಚು ಹೊತ್ತು ಇಟ್ಟಾಗ ಅದರಲ್ಲಿ ಬ್ಯಾಸಿಲಸ್ ಸೆರಿಯಸ್ ಬ್ಯಾಕ್ಟೀರಿಯಾ ರೂಪುಗೊಳ್ಳುತ್ತದೆ. ಇದು ವಿಷವನ್ನು ಉತ್ಪತ್ತಿ ಮಾಡುತ್ತದೆ.

ಇದನ್ನೂ ಓದಿ : PM ಕಿಸಾನ್ ಯೋಜನೆ : ದೀಪಾವಳಿ ಹೊತ್ತಲ್ಲೇ 8 ಕೋಟಿಗೂ ಅಧಿಕ ರೈತರಿಗೆ ಇಲ್ಲಿದೆ ಭರ್ಜರಿ ಗುಡ್‌ನ್ಯೂಸ್‌

ಬ್ಯಾಸಿಲಸ್ ಸೆರಿಯಸ್ ಬ್ಯಾಕ್ಟೀರಿಯಾದಿಂದ ಕೂಡಿರುವ ಆಹಾರವನ್ನು ಸೇವನೆ ಮಾಡುವುದರಿಂದ ವಾಂತಿ, ಬೇಧಿ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧತೆಯಿದೆ. ಅಷ್ಟೇ ಅಲ್ಲ, ಕೆಲವೊಮ್ಮೆ ಸಾವನ್ನೂ ತರಬಹುದು. ಬಹುತೇಕ ಆಹಾರಗಳಲ್ಲಿ ಈ ಬ್ಯಾಕ್ಟಿರಿಯಾ ಸಾಮಾನ್ಯವಾಗಿ ಕಂಡು ಬರುತ್ತದೆ.

ಸರಿಯಾದ ರೀತಿಯಲ್ಲಿ ಸಂಗ್ರಹಣೆ ಮಾಡದೇ ಇರುವ ಆಹಾರಗಳಲ್ಲಿ ಇಂತಹ ಬ್ಯಾಕ್ಟಿರೀಯಾ ಹೆಚ್ಚಾಗಿ ಇರುತ್ತದೆ. ಅದರಲ್ಲೂ ಅಕ್ಕಿ, ಪಾಸ್ತಾದಂತಹ ಆಹಾರಗಳನ್ನು ಹೆಚ್ಚು ಸಮಯದ ವರೆಗೆ ಸಂಗ್ರಹ ಮಾಡಿದ್ರೆ ಹಾಳಾಗುವ ಸಾಧ್ಯತೆ ತೀರಾ ಹೆಚ್ಚು. ನಾನ್‌ವೆಜ್‌ ಆಹಾರಗಳನ್ನು ಶೇಖರಿಸಿಟ್ಟು ಪದೇ ಪದೇ ಬಿಸಿ ಮಾಡುವುದರಿಂದಲೂ ಆಹಾರವೇ ವಿಷವಾಗುವ ಸಾಧ್ಯತೆಯಿದೆ.

2008 ರಲ್ಲೇ ಪತ್ತೆಯಾಗಿತ್ತು ಫ್ರೈಡ್‌ರೈಸ್‌ ಸಿಂಡ್ರೋಮ್‌ :

ಒಮ್ಮೆ ಬೇಯಿಸಿದ ಆಹಾರವನ್ನು ಪದೇ ಪದೇ ಬಿಸಿ ಮಾಡುವುದರಿಂದ ಆಸಿಡ್-ಲೇಬಲ್ ಎಂಟರೊಟಾಕ್ಸಿನ್, ಎಮೆಟಿಕ್ ವಿಷವನ್ನು ಬಿಡುಗಡೆ ಮಾಡುತ್ತದೆ. ಫ್ರೈಡ್‌ ರೈಸ್‌ ಸಿಂಡ್ರೋಮ್‌ ಗೆ ವ್ಯಕ್ತಿಯೋರ್ವ ಬಲಿ ಆಗಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2008 ಫ್ರೈಡ್‌ರೈಸ್‌ ಸಿಂಡ್ರೋಮ್‌ ಪ್ರಕರಣವನ್ನು ಪತ್ತೆ ಹಚ್ಚಲಾಗಿತ್ತು.

Image Credit to Original Source

20 ವರ್ಷದ ಬೆಲ್ಜಿಯಂ ಕಾಲೇಜು ವಿದ್ಯಾರ್ಥಿ ನೂಡಲ್ಸ್‌ ತಯಾರಿಸಿ ತಿನ್ನುತ್ತಿದ್ದ, ಉಳಿದ ನೂಡಲ್ಸ್‌ ಅನ್ನು ಫ್ರಿಡ್ಜ್‌ನಲ್ಲಿ ಇಟ್ಟು 5 ದಿನಗಳ ನಂತರ ಮತ್ತೆ ಬಿಸಿ ಮಾಡಿ ತಿಂದಿದ್ದಾನೆ. ನಂತರ ಆತ ಸಾನ್ನಪ್ಪಿದ್ದ. ಆತನ ಶತ ಪರೀಕ್ಷೆಯನ್ನು ನಡೆಸಿದ ನಂತರದಲ್ಲಿ ಆತ ಪಿತ್ತಜನಕಾಂಗದ ವೈಫಲ್ಯದಿಂದ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿತ್ತು.

ಇದನ್ನೂ ಓದಿ : ಸುಕನ್ಯಾ ಸಮೃದ್ಧಿ ಯೋಜನೆ : 12000 ರೂ. ಹೂಡಿಕೆ ಮಾಡಿ ರೂ 70 ಲಕ್ಷ ಪಡೆಯಿರಿ

ಅಲ್ಲದೇ ಆತನ ಸೇವಿಸಿದ ಆಹಾರದಲ್ಲಿ ಬ್ಯಾಸಿಲಸ್‌ ಸೆರಿಯಸ್‌ ಬ್ಯಾಕ್ಟಿರಿಯಾ ಹೇರಳ ಪ್ರಮಾಣದಲ್ಲಿ ಇರುವುದು ದೃಢಪಟ್ಟಿತ್ತು. ಈ ಕುರಿತು ತಪಾಸಣೆ ನಡೆಸಿದ ನಂತರದಲ್ಲಿ ಫ್ರೈಡ್‌ರೈಸ್‌ ಸಿಂಡ್ರೋಮ್‌ ನಿಂದಲೇ ಆತ ಸಾವನ್ನಪ್ಪಿದ್ದಾನೆ ಅನ್ನೋ ಅಂಶ ಬೆಳಕಿಗೆ ಬಂದಿತ್ತು.

ಕರುಳಿನ ಬ್ಯಾಸಿಲಸ್‌ ಸೆರಿಯಸ್‌ ಸೋಂಕು ವಿಶ್ವದ ಅನೇಕ ದೇಶಗಳಲ್ಲಿ ಸಾಮಾನ್ಯವಾಗಿದೆ. ಯನೈಡೆಟ್‌ ಸ್ಟೇಟಸ್ಸ್‌ನಲ್ಲಿ ಪ್ರತೀ ವರ್ಷ ಸುಮಾರು 63,400 ರಷ್ಟು ಪ್ರಕರಣ ಪತ್ತೆಯಾಗುತ್ತಿದೆ. ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಫ್ರೈಡ್‌ ರೈಸ್‌ ಸಿಂಡ್ರೋಮ್‌ ಬಗ್ಗೆ ಮುನ್ನೆಚ್ಚರಿಕಾ ಕ್ರಮಕೈಗೊಳ್ಳುವಂತೆ ತಿಳಿಸಲಾಗುತ್ತಿದೆ.

ಇದನ್ನೂ ಓದಿ : ಆಧಾರ್​ ಕಾರ್ಡ್​ನಲ್ಲಿ ನಿಮ್ಮ ಫೋಟೋ ಬದಲಿಸುವುದು ಈಗ ಇನ್ನಷ್ಟು ಸುಲಭ : ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ

ಫ್ರೈಡ್ ರೈಸ್ ಸಿಂಡ್ರೋಮ್ ಲಕ್ಷಣಗಳು :

ಸಾಮಾನ್ಯವಾಗಿ ಫ್ರೈಡ್‌ ರೈಸ್‌ ಸಿಂಡ್ರೋಮ್‌ಗೆ ತುತ್ತಾದ್ರೆ, ಬ್ಯಾಸಿಲಸ್‌ ಸೆರಿಯನ್‌ ಬ್ಯಾಕ್ಟಿರಿಯಾವು ದೇಹವನ್ನು ಅನಾರೋಗ್ಯಕ್ಕೆ ತಳ್ಳುತ್ತದೆ. ಪ್ರಮುಖವಾಗಿ ವಾಂತಿ, ವಾಕರಿಕೆ, ಹೊಟ್ಟೆ ನೋವು, ಅತಿಸಾರ ರೋಗ ಲಕ್ಷ್ಮಣಗಳನ್ನು ಉಂಟು ಮಾಡುತ್ತದೆ. ಈ ರೋಗ ಲಕ್ಷಣಗಳು ಸಾಮಾನ್ಯವಾಗಿ 24 ಗಂಟೆಗಳ ನಂತರ ಕಡಿಮೆಯಾಗುತ್ತವೆ. ಒಂದೊಮ್ಮೆ ಕಡಿಮೆ ಆಗದೇ ಇದ್ರೆ ಕೂಡಲೇ ವೈದ್ಯರನ್ನು ಭೇಟಿ ಮಾಡಬೇಕು.

fried Rice Syndrome One Died What Is The Symptoms Treds on Social Media

Share