ಸುಕನ್ಯಾ ಸಮೃದ್ಧಿ ಯೋಜನೆ : 12000 ರೂ. ಹೂಡಿಕೆ ಮಾಡಿ ರೂ 70 ಲಕ್ಷ ಪಡೆಯಿರಿ

ಸುಕನ್ಯಾ ಸಮೃದ್ದಿ ಯೋಜನೆ (Sukanya Samriddhi Yojana ) ಕೂಡ ಒಂದು. ಇದೀಗ ಈ ಯೋಜನೆಯ ಮೂಲಕ ರೂ 12000 ಹೂಡಿಕೆ ಮಾಡಿ 70 ಲಕ್ಷ ಪಡೆಯುವ ಸುವರ್ಣಾವಕಾಶ ಒದಗಿ ಬಂದಿದೆ.

Sukanya Samriddhi Yojana  : ಭಾರತ ಸರಕಾರ ಮಕ್ಕಳ ಭವಿಷ್ಯ ಹೂಡಿಕೆಗಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅದ್ರಲ್ಲೂ ಪೋಸ್ಟ್‌ ಆಫೀಸ್‌ನಲ್ಲಿಯೂ ಹೆಣ್ಣು ಮಕ್ಕಳಿಗಾಗಿ ಹಲವು ಯೋಜನೆ ಪರಿಚಯಿಸಿದೆ. ಅದ್ರಲ್ಲಿ ಸುಕನ್ಯಾ ಸಮೃದ್ದಿ ಯೋಜನೆ (Sukanya Samriddhi Yojana )ಕೂಡ ಒಂದು. ಇದೀಗ ಈ ಯೋಜನೆಯ ಮೂಲಕ ರೂ 12000 ಹೂಡಿಕೆ ಮಾಡಿ 70 ಲಕ್ಷ ಪಡೆಯುವ ಸುವರ್ಣಾವಕಾಶ ಒದಗಿ ಬಂದಿದೆ.

ಸುಕನ್ಯಾ ಸಮೃದ್ದಿ ಯೋಜನೆ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಭದ್ರತೆಯನ್ನು ಒದಗಿಸುವ ಮಹತ್ವಾಕಾಂಕ್ಷಿಯ ಯೋಜನೆಗಳಲ್ಲಿ ಒಂದು. ಅನೇಕ ಮಂದಿ ಈ ಯೋಜನೆಯನ್ನು ಬಹುತೇಕರು ಹೂಡಿಕೆಯ ದೃಷ್ಟಿಯಿಂದ ಆಯ್ಕೆ ಮಾಡುತ್ತಾರೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಸ್ಥಿರ ಆದಾಯ ಪಡೆಯಬಹುದಾಗಿದೆ.

12000 rs invest And Get Rs 70 Lakh rupees in Sukanya Samriddhi Yojana Best Plan For Children
Image Credit to Original Source

ಸುಕನ್ಯಾ ಸಮೃದ್ದಿ ಯೋಜನೆ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಇದೊಂದು ಉತ್ತಮವಾದ ಯೋಜನೆಯಾಗಿದೆ. ಈ ಯೋಜನೆಯಲ್ಲಿ 12000 ರೂ. ಹೂಡಿಕೆ ಮಾಡಿದ್ರೆ 70 ಲಕ್ ರೂಪಾಯಿ ಪಡೆಯುವ ಅವಕಾಶವಿದೆ. ಪೋಸ್ಟ್‌ ಆಫೀಸ್‌ನಲ್ಲಿ ಈ ಯೋಜನೆಗೆ ಹೂಡಿಕೆ ಮಾಡಬಹುದಾಗಿದೆ. ಸುಕನ್ಯಾ ಸಮೃದ್ದಿ ಯೋಜನೆ ನಿಮ್ಮ ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮದುವೆಗೆ ಹಣವನ್ನು ಒದಗಿಸುತ್ತದೆ.

ಇದನ್ನೂ ಓದಿ : Gruha Lakshmi Scheme : ಗೃಹಲಕ್ಷ್ಮೀ ಫಲಾನುಭವಿಗಳಿಗೆ ಇಲ್ಲಿದೆ ಭರ್ಜರಿ ಗುಡ್‌ನ್ಯೂಸ್‌

ಸುಕನ್ಯಾ ಸಮೃದ್ದಿ ಯೋಜನೆಯಲ್ಲಿ ಹೂಡಿಕೆಯಿಂದ ಬರುವ ಆದಾಯವು ಶೇ.100 ರಷ್ಟು ತೆರಿಗೆ ಮುಕ್ತವಾಗಿರಲಿದೆ. ಅಲ್ಲದೇ ಪಿಪಿಎಫ್‌ಗೆ ಹೋಲಿಕೆ ಮಾಡಿದ್ರೆ ಈ ಯೋಜನೆಯಲ್ಲಿ ಅತೀ ಹೆಚ್ಚು ಆದಾಯವನ್ನು ಪಡೆಯಬಹುದಾಗಿದೆ. ಮಕ್ಕಳ ಮದುವೆ, ವಿದ್ಯಾಭ್ಯಾಸಕ್ಕೆ ಹಣವನ್ನು ಸಂಗ್ರಹ ಮಾಡುವ ಉದ್ದೇಶವನ್ನು ಹೊಂದಿದವರಿಗೆ ಸುಕನ್ಯಾ ಸಮೃದ್ದಿ ಯೋಜನೆ ವರದಾನವಾಗಿ ಪರಿಣಮಿಸಿದೆ.

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡುವುದು ಹೇಗೆ ?

ಹೆಣ್ಣು ಮಕ್ಕಳ ಭವಿಷ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸುಕನ್ಯಾ ಸಮೃದ್ದಿ ಯೋಜನೆಯನ್ನು 2015 ರಲ್ಲಿ ಆರಂಭಿಸಲಾಗಿದೆ. 10 ವರ್ಷದ ಒಳಗಿನ ಹೆಣ್ಣು ಮಕ್ಕಳು ಈ ಯೋಜನೆಗೆ ಸೇರ್ಪಡೆ ಆಗಬಹುದು. ಗರಿಷ್ಠ 15 ವರ್ಷಗಳ ವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಅವಕಾಶವಿದೆ.

15 ವರ್ಷಗಳ ಕಾಲ ಹೂಡಿಕೆಯನ್ನು ಮಾಡಿದ ನಂತರದಲ್ಲಿ ಯೋಜನೆಯಲ್ಲಿ ದೊರೆಯುವ ಮೆಚುರಿಟಿ ಮೊತ್ತವನ್ನು ಹೆಣ್ಣು ಮಕ್ಕಳ ಶಿಕ್ಷಣ ಅಥವಾ ಮದುವೆಗೆ ಬಳಕೆ ಮಾಡಬಹುದಾಗಿದೆ. ಈ ಯೋಜನೆಯ ಅಡಿಯಲ್ಲಿ ವರ್ಷಕ್ಕೆ ಕನಿಷ್ಠ 250 ರೂ. ನಿಂದ ಗರಿಷ್ಠ 1.50 ಲಕ್ಷ ರೂ. ಹೂಡಿಕೆ ಮಾಡಲು ಅವಕಾಶವಿದೆ.

ಇದನ್ನೂ ಓದಿ : ಈ ಕೆಲಸ ಮಾಡಿಸದಿದ್ರೆ ನಿಷ್ಕ್ರೀಯಗೊಳ್ಳಲಿದೆ ನಿಮ್ಮ ಪ್ಯಾನ್‌ಕಾರ್ಡ್‌ : ಸರಕಾರದಿಂದ ಹೊಸ ರೂಲ್ಸ್‌ ಜಾರಿ

ಸುಕನ್ಯಾ ಸಮೃದ್ದಿ ಯೋಜನೆಯ ಅಡಿಯಲ್ಲಿ ಮಾಸಿಕ, ವಾರ್ಷಿಕ ಕಂತುಗಳ ಮೂಲವೂ ಹೂಡಿಕೆಯನ್ನು ಮಾಡಬಹುದಾಗಿದೆ. ಕೇಂದ್ರ ಸರಕಾರ ಈ ಯೋಜನೆಯನ್ನು ಜಾರಿಗೊಳಿಸುವ ಕಾರಣಕ್ಕೆ ಹೂಡಿಕೆದಾರರಿಗೆ ಶೇಕಡಾ 8 ರಷ್ಟು ಸ್ಥಿರ ಬಡ್ಡಿದರ ದೊರೆಯಲಿದೆ. ಅಲ್ಲದೇ ಸರಕಾರದ ನೀತಿಗಳ ಪ್ರಕಾರ, ಈ ಬಡ್ಡಿದರದಲ್ಲಿ ಏರಿಳಿತವಾಗಲಿದೆ. ಬಡ್ಡಿಯ ಜೊತೆಗೆ ಚಕ್ರಬಡ್ಡಿಯನ್ನೂ ಪಡೆಯಲು ಕೂಡ ಅವಕಾಶವಿದೆ.

12000 rs invest And Get Rs 70 Lakh rupees in Sukanya Samriddhi Yojana Best Plan For Children
Image Credit to Original Source

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹಣವನ್ನು ತೊಡಗಿಸಿದ್ರೆ ದುಪ್ಪಟ್ಟು ಲಾಭದ ಜೊತೆಗೆ ತೆರಿಗೆ ವಿನಾಯಿತಿಯನ್ನು ಪಡೆಯಲು ಅವಕಾಶವಿದೆ. ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡುವ ಹೂಡಿಕೆದಾರರಿಗೆ, ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80C ಅಡಿಯಲ್ ತೆರಿಗೆ ವಿನಾಯಿತಿಯನ್ನು ಪಡೆಯ ಬಹುದಾಗಿದೆ. ಕೇವಲ ಹೂಡಿಕೆ ಮಾಡುವ ಹಣದಲ್ಲಿ ಮಾತ್ರವಲ್ಲ ಬಡ್ಡಿಯ ಮೇಲಿನ ಆದಾಯದ ಮೇಲೆಯೂ ತೆರಿಗೆ ವಿನಾಯಿತಿ ದೊರೆಯಲಿದೆ.

ಸುಕನ್ಯಾ ಸಮೃದ್ದಿ ಯೋಜನೆ ಹಿಂಪಡೆಯುವುದು ಹೇಗೆ ?

ಹೆಣ್ಣು ಮಗುವಿಗೆ 18 ವರ್ಷ ತುಂಬಿದ ನಂತರ ಅಥವಾ 10 ನೇ ತರಗತಿಯಲ್ಲಿ ಉತ್ತೀರ್ಣರಾದ ನಂತರ ಮಾತ್ರವೇ ಈ ಯೋಜನೆಯ ಹಣವನ್ನು ವಾಪಾಸ್‌ ಪಡೆಯಬಹುದಾಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಬಾಕಿ ಉಳಿದಿರುವ ಮೊತ್ತದ ಶೇ.50 ರಷ್ಟು ಹಣವನ್ನು ವಾಪಾಸ್‌ ಪಡೆಯಬಹುದಾಗಿದೆ.

ಇದನ್ನೂ ಓದಿ : PM ಕಿಸಾನ್ ಯೋಜನೆ : ದೀಪಾವಳಿ ಹೊತ್ತಲ್ಲೇ 8 ಕೋಟಿಗೂ ಅಧಿಕ ರೈತರಿಗೆ ಇಲ್ಲಿದೆ ಭರ್ಜರಿ ಗುಡ್‌ನ್ಯೂಸ್‌

70 ಲಕ್ಷ ರೂಪಾಯಿ ಪಡೆಯುವುದು ಹೇಗೆ ?

ಸುಕನ್ಯಾ ಸಮೃದ್ದಿ ಯೋಜನೆಯಲ್ಲಿ ಒಬ್ಬರು ವಾರ್ಷಿಕವಾಗಿ ಗರಿಷ್ಠ 1.50  ಲಕ್ಷ ರೂಪಾಯಿ ಹೂಡಿಕೆ ಮಾಡಬಹುದಾಗಿದೆ. ಯೋಜನೆಯ ಅವಧಿಯಲ್ಲಿ ನೀವು ಮಾಡುವ ಗರಿಷ್ಠ ಹೂಡಿಕೆ 22.50 ಲಕ್ಷ ರೂಪಾಯಿ ಆಗಲಿದೆ. ಇನ್ನು ನೀವು ವಾರ್ಷಿಕವಾಗಿ ಹೂಡಿಕೆ ಮಾಡಿರುವ 1.50 ಕ್ಷ ರೂಪಾಯಿ ಅಂದ್ರೆ ಮಾಸಿಕ 12,500 ರೂ.

ಪ್ರತೀ ತಿಂಗಳು 12,500 ರೂ. ಹೂಡಿಕೆಯನ್ನು ಮಾಡಿದ್ರೆ. 15 ವರ್ಷಗಳ ಕಾಲ ನೀವು ಮಾಡುವ ಹೂಡಿಕೆಯು 47.3 ಲಕ್ಷರೂ. ಬಡ್ಡಿ ಆದಾಯ ಒಟ್ಟಾಗಿ ನಿಮಗೆ 69.80 ಲಕ್ಷಗಳ ರೂಪಾಯಿಗಳ ಮೆಚ್ಯೂರಿಟಿ ಮೊತ್ತವನ್ನು ಪಡೆಯಬಹುದಾಗಿದೆ. ಕೇವಲ 15 ವರ್ಷಗಳಲ್ಲಿ ಸುಕನ್ಯಾ ಸಮೃದ್ದಿ ಯೋಜನೆಯು ನೀವು ಹೂಡಿಕೆ ಮಾಡುವ 22.50 ಲಕ್ಷ ರೂಪಾಯಿಗೆ 70 ಲಕ್ ರೂಪಾಯಿ ಆದಾಯವನ್ನು ತಂದು ಕೊಡುತ್ತದೆ.

12000 rs invest And Get Rs 70 Lakh rupees in Sukanya Samriddhi Yojana Best Plan For Children

Comments are closed.