ಮತ್ತೆ ಜೊತೆಯಾದ ಸಿಎಂ ವಿಜಯ್, ತ್ರಿಷಾ ಕೃಷ್ಣನ್ : ತಾರಾ ಜೋಡಿ ಕಂಡು ದಳಪತಿ ಫ್ಯಾನ್ಸ್ ಪುಲ್ ಖುಷ್
ಯುಕೆ ಪ್ರವಾಸದಲ್ಲಿರುವ ಸಿಎಂ ವಿಜಯ್ ಅವರು ಅಜಿತ್ ಕುಮಾರ್ ಭಾಗವಹಿಸಿದ್ದ ಮೈಕಲಿನ್ ಲೆ ಮ್ಯಾನ್ಸ್ ಕಪ್ ಕಾರು ರೇಸ್‌ನಲ್ಲಿ ಹಸಿರು ಬಾವುಟ ಹಾರಿಸುವ ಮೂಲಕ ಚಾಲನೆ ನೀಡಿದ್ದಾರೆ.
By Arun Gundmi | ಅರುಣ್ ಗುಂಡ್ಮಿ · Editor-in-Chief
1 min read
ತಮಿಳುನಾಡು ಮುಖ್ಯಮಂತ್ರಿ ವಿಜಯ್ ಹಾಗೂ ತಮಿಳಿನ ಖ್ಯಾತ ನಟಿ ತ್ರಿಷಾ ಮತ್ತೊಮ್ಮೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಯುಕೆ ಪ್ರವಾಸದಲ್ಲಿರುವ ಸಿಎಂ ವಿಜಯ್ ಅವರು ಅಜಿತ್ ಕುಮಾರ್ ಭಾಗವಹಿಸಿದ್ದ ಮೈಕಲಿನ್ ಲೆ ಮ್ಯಾನ್ಸ್ ಕಪ್ ಕಾರು ರೇಸ್‌ನಲ್ಲಿ ಹಸಿರು ಬಾವುಟ ಹಾರಿಸುವ ಮೂಲಕ ಚಾಲನೆ ನೀಡಿದ್ದಾರೆ. ಈ ವೇಳೆ ಗೆಳತಿ ತ್ರಿಷಾ ಜೊತೆಯಲ್ಲಿರೋದನ್ನು ಕಂಡ ದಳಪತಿ ಫ್ಯಾನ್ಸ್ ಸಖತ್ ಖುಷಿಯಾಗಿದ್ದಾರೆ.
ದಳಪತಿ ವಿಜಯ್ ಪತ್ನಿ ಡೈವೋರ್ಸ್ ಅರ್ಜಿ ವಾಪಾಸ್ ಪಡೆದ ಬೆನ್ನಲ್ಲೇ ಇಬ್ಬರೂ ಒಂದಾಗುತ್ತಾರೆ ಅನ್ನೋ ಮಾತುಗಳು ಹರಿದಾಡಿದ್ದವು. ಇದೀಗ ಯುಕೆಯಲ್ಲಿ ಸಿಎಂ ವಿಜಯ್ ಹಾಗೂ ತ್ರಿಷಾ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ದಳಪತಿ ವಿಜಯ್ ಅವರು ಎರಡು ಗಂಟೆಗಳ ರೋಚಕ ರೇಸಿಂಗ್‌ಗೆ ಚಾಲನೆ ನೀಡುವ ಸಲುವಾಗಿ ಹಸಿರು ನಿಶಾನೆ ತೋರಿಸಿದ್ದಾರೆ.
ಸದ್ಯ ಆನ್‌ಲೈನ್‌ನಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಈ ವಿಡಿಯೋದಲ್ಲಿ ವಿಜಯ್ ಅವರು ಓಡಿಬಂದು ಅಜಿತ್ ಅವರನ್ನು ಅಪ್ಪಿಕೊಳ್ಳುವುದು ಕಂಡುಬಂದಿದೆ. ನಂತರ, ಅಜಿತ್ ತಮ್ಮ ರೇಸಿಂಗ್ ಕಾರಿನೊಳಗೆ ಕುಳಿತಾಗ, ವಿಜಯ್ ಅವರೊಂದಿಗೆ ಪೋಟೋಗೆ ಪೋಸ್ ನೀಡಿದ್ದಾರೆ. ಅಜಿತ್ ಸ್ಪರ್ಧೆಗೆ ಸಿದ್ದರಾಗುತ್ತಿದ್ದಂತೆಯೇ ವಿಜಯ್ ಕಾರಿನ ಮೇಲೆ ಕುಳಿತಿದ್ದಾರೆ.
ಮತ್ತೊಂದೆಡೆಯಲ್ಲಿ ನಟಿ ತ್ರಿಷಾ ಅವರು ರೇಸಿಂಗ್ ಸರ್ಕ್ಯೂಟ್‌ಗೆ ಆಗಮಿಸಿದ್ದರು. ತಮಿಳುನಾಡು ಸಿಎಮ ವಿಜಯ್ ಅವರೊಂದಿಗಿನ ತ್ರಿಷಾ ದೀರ್ಘಕಾಲದ ಒಡನಾಟ ಹೊಂದಿದ್ದಾರೆ. ಇಬ್ಬರ ನಡುವೆ ಸಾಕಷ್ಟು ಗಾಸಿಪ್‌ಗಳು ಹರದಾಡುತ್ತಿದ್ದವು. ಇದೆಲ್ಲದರ ನಡುವಲ್ಲೇ ಇದೀಗ ಇಬ್ಬರೂ ಕೂಡ ಜೊತೆಯಾಗಿಯೇ ರೇಸ್ ವೀಕ್ಷಿಸಿದ್ದಾರೆ.
Topics
ಸಂಬಂಧಿತ ಸುದ್ದಿಗಳು
india
ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೊಸ ರೂಲ್ಸ್ : ಮುಂದಿನ 10 ದಿನಗಳ ಕಾಲ ವಿಐಪಿ ದರ್ಶನ ರದ್ದು
india
ಜಂಕ್ ಫುಡ್ ಪ್ಯಾಕೆಟ್ಗಳ ಮೇಲೆ ಮುಂಭಾಗದಲ್ಲೇ ವಾರ್ನಿಂಗ್ ಲೇಬಲ್ ಕಡ್ಡಾಯ : ಸುಪ್ರೀಂ ಕೋರ್ಟ್ ಕಡಕ್ ಆದೇಶ
india
ಅಮ್ಮನ ಪಾದ ಮುಟ್ಟಿ ಕ್ಷಮೆ ಕೇಳಿ : ಆಸ್ತಿಗೆ ಕಣ್ಣು ಹಾಕಿದ ಮಗನಿಗೆ ಸುಪ್ರೀಂಕೋರ್ಟ್ ಛೀಮಾರಿ
india

