ಕರ್ನಾಟಕಕ್ಕೆ ಕೈಕೊಟ್ಟ ಮುಂಗಾರು ಮಳೆ : ಜಲಾಶಯಗಳಲ್ಲಿ ನೀರಿನ ಮಟ್ಟದಲ್ಲಿ ಕುಸಿತ
ಕರ್ನಾಟಕ ರಾಜ್ಯದಲ್ಲಿರುವ ಒಟ್ಟು 23 ಅಣೆಕಟ್ಟುಗಳ ಪೈಕಿ ವಾಣಿ ವಿಲಾಸ ಸಾಗರ, ಮಲಪ್ರಭಾ, ಕೆಆರ್‌ಎಸ್, ಕಬಿನಿ, ಹೇಮಾವತಿ ಜಲಾಶಯಗಳು ಇಂದಿಗೂ ಭರ್ತಿಯಾಗಿಲ್ಲ.
By Arun Gundmi | ಅರುಣ್ ಗುಂಡ್ಮಿ · Editor-in-Chief
1 min read
ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದು ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ಮಳೆಗಾಲದಲ್ಲಿಯೇ ನೀರಿನ ಕೊರತೆ ಉಂಟಾಗಿದೆ. ಅಗಸ್ಟ್ ಮೊದಲೆರಡು ವಾರದ ನಂತರ ಮಳೆ ಸಂಪೂರ್ಣವಾಗಿ ಮಾಯವಾಗಿದೆ. ಇದರಿಂದಾಗಿ ಜಲಾಶಯಗಳಿಗೆ ನೀರಿನ ಒಳಹರಿವು ಸಂಪೂರ್ಣವಾಗಿ ಶೂನ್ಯವಾಗಿದೆ. ಕೃಷಿ ಜಮೀನುಗಳಿಗೆ ನೀರಿನ ಕೊರತೆ ಉಂಟಾಗಿದ್ದು, ಮಳೆ ಸುರಿಯದೇ ಇದ್ರೆ ಕುಡಿಯುವ ನೀರಿಗೂ ತತ್ವಾರ ಎದುರಾಗುವುದು ಖಚಿತ.
ಕರ್ನಾಟಕ ರಾಜ್ಯದಲ್ಲಿರುವ ಒಟ್ಟು 23 ಅಣೆಕಟ್ಟುಗಳ ಪೈಕಿ ವಾಣಿ ವಿಲಾಸ ಸಾಗರ, ಮಲಪ್ರಭಾ, ಕೆಆರ್‌ಎಸ್, ಕಬಿನಿ, ಹೇಮಾವತಿ ಜಲಾಶಯಗಳು ಇಂದಿಗೂ ಭರ್ತಿಯಾಗಿಲ್ಲ. ಇನ್ನು 12 ಪ್ರಮುಖ ಜಲಾಶಗಳಲ್ಲಿ ಒಳಹರಿವು ಶೂಣ್ಯಕ್ಕೆ ಇಳಿದಿದೆ. ಅಣೆಕಟ್ಟುಗಳಲ್ಲಿ ನೀರಿನ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಜಲ ವಿದ್ಯುತ್ ಉತ್ಪಾದನೆಯ ಮೇಲೆ ಬಾರೀ ಹೊಡೆತ ಬಿದ್ದಿದೆ.
2012 ಮತ್ತು 2019ರಲ್ಲೂ ಕರ್ನಾಟಕದ ಜಲಾಶಯಗಳಿಗೆ ಇದೇ ಸ್ಥಿತಿ ಬಂದಿತ್ತು. ಆದರೆ ಅಗಸ್ಟ್ ತಿಂಗಳಿನಲ್ಲಿ ಉತ್ತಮ ಮಳೆ ಸುರಿದ ಹಿನ್ನೆಲೆಯಲ್ಲಿ ಆತಂಕ ದೂರವಾಗಿತ್ತು. ಆದರೆ ಈ ಬಾರಿ ಮುಂಗಾರು ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಗಂಭೀರ ಪರಿಸ್ಥಿತಿ ಎದುರಾಗಿದೆ. ಕರ್ನಾಟಕದ ರೇಣುಕಾಸಾಗರ ಅಣೆಕಟ್ಟಿನಲ್ಲಿ ಕುಡಿಯುವ ನೀರಿಗೆ ಬೇಕಾದಷ್ಟು ನೀರು ಸಂಗ್ರಹವಾಗಿಲ್ಲ.
ಪ್ರಮುಖ ಜಲವಿದ್ಯುತ್ ಸ್ಥಾಪರ ಹೊಂದಿರುವ ಲಿಂಗನಮಕ್ಕಿ, ಸೂಪಾ, ಮಾಣಿ ಜಲಾಶಯಗಳಲ್ಲಿಯೂ ನೀರಿನ ಸಂಗ್ರಹದಲ್ಲಿ ಕೊರತೆ ಉಂಟಾಗಿದೆ. ಕಳೆದ ವರ್ಷ 7609 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯ ಹೊಂದಲಾಗಿತ್ತು. ಆದರೆ ಈ ಬಾರಿ ಮಳೆಯ ಕೊರತೆಯಿಂದಾಗಿ 4,960 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡುವಷ್ಟು ಮಾತ್ರವೇ ನೀರಿದೆ.
Topics
ಸಂಬಂಧಿತ ಸುದ್ದಿಗಳು
karnataka
ಕೆಪಿಎಸ್ಇ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ: ಸಿಐಡಿ ತನಿಖೆಯಲ್ಲಿ ಬಯಲಾಗ್ತಿದೆ ಸ್ಪೋಟಕ ರಹಸ್ಯ
karnataka
ಗಣೇಶ ಹಬ್ಬಕ್ಕೆ ಮಂಗಳೂರಿಗೆ ರೈಲ್ವೆ ಇಲಾಖೆ ಅನ್ಯಾಯ : ರೈಲ್ವೆ ಇಲಾಖೆ ವಿರುದ್ದ ಮಂಗಳೂರಿಗರ ಆಕ್ರೋಶ
karnataka
ಟ್ರಯಲ್ ರನ್ಗೆ ಸಿದ್ದವಾಯ್ತು ಎತ್ತಿನಹೊಳೆ : ಬಯಲು ಸೀಮೆಯ ಜನರ ದಶಕಗಳ ಕನಸು ನನಸು
karnataka

