ಬಂಗಾರದ ದರ ಇಳಿಕೆಯ ಖುಷಿಯಲ್ಲಿದ್ದ ಗ್ರಾಹಕರಿಗೆ ಪ್ರಧಾನಿ ಎಚ್ಚರಿಕೆಯ ಬ್ರೇಕ್..!
ಬೆಲೆ ಕುಸಿದಿರುವ ಈ ಆಭರಣ ಖರೀದಿಗೆ ಸೂಕ್ತ ಅವಕಾಶ ಎಂದು ಮಧ್ಯಮ ವರ್ಗದ ಕುಟುಂಬಗಳು ಭಾವಿಸುತ್ತಿದ್ದಾಗಲೇ, ಪ್ರಧಾನಿ ಮೋದಿಯವರ ಹೇಳಿಕೆ ಹೊಸ ಸಂಚಲನ ಮೂಡಿಸಿದೆ.
ಜಾಗತಿಕ ಮಾರುಕಟ್ಟೆಯ ಏರಿಳಿತಗಳಿಂದಾಗಿ ದೇಶದ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ಕಂಡುಬಂದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದಾರೆ ಆರ್ಥಿಕ ಸಲಹೆಯು ಮಧ್ಯಮ ವರ್ಗದ ಜನತೆಯನ್ನು ತೀವ್ರ ಗೊಂದಲಕ್ಕೆ ತಳ್ಳಿದೆ. ಜಾಗತಿಕ ಹಳದಿ ಲೋಹದ ದರ ಇಳಿಕೆಯಾಗಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಪ್ರತಿ 10 ಗ್ರಾಂ 24 ಕ್ಯಾರೆಟ್ ಬಂಗಾರದ ಮೇಲೆ ಬರೋಬ್ಬರಿ ₹2,680 ದರ ಇಳಿಕೆಯಾಗಿದೆ. ಬೆಲೆ ಕುಸಿದಿರುವ ಈ ಆಭರಣ ಖರೀದಿಗೆ ಸೂಕ್ತ ಅವಕಾಶ ಎಂದು ಮಧ್ಯಮ ವರ್ಗದ ಕುಟುಂಬಗಳು ಭಾವಿಸುತ್ತಿದ್ದಾಗಲೇ, ಪ್ರಧಾನಿ ಮೋದಿಯವರ ಹೇಳಿಕೆ ಹೊಸ ಸಂಚಲನ ಮೂಡಿಸಿದೆ.
ನವದೆಹಲಿಯಲ್ಲಿ ದೇಶದ ಆರ್ಥಿಕ ಪ್ರಗತಿ ಕುರಿತು ಮಾತನಾಡಿದ ಪ್ರಧಾನಿ ಮೋದಿ ಅವರು, ದೇಶದ ಜಿಡಿಪಿ ಶೇ. 7.8% ಮುನ್ನಡೆ ಸಾಧಿಸಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತಲೇ ದೇಶವಾಸಿಗಳಿಗೆ ಒಂದು ಮಹತ್ವದ ಮನವಿ ಮಾಡಲಾಗಿದೆ. ದೇಶದ ಸಂಪತ್ತು ಹೊರದೇಶಕ್ಕೆ ಹರಿದು ಹೋಗುವುದನ್ನು ತಡೆಯಲು ಅನಿವಾರ್ಯವಿದ್ದರೆ ಮಾತ್ರ ಚಿನ್ನವನ್ನು ಖರೀದಿಸಿ ಮತ್ತು ವಿದೇಶಿ ಪ್ರವಾಸ ಹಾಗೂ ವಿದೇಶದಲ್ಲಿ ಮದುವೆ ಮಾಡಿಕೊಳ್ಳುವ ಸಂಸ್ಕೃತಿಯನ್ನು ಆದಷ್ಟು ಕೈಬಿಡಿ ಎಂದು ಕರೆ ನೀಡಿದರು. ಭಾರತದ ಆರ್ಥಿಕತೆಯನ್ನು ಸುಧಾರಿಸಲು ಹಾಗೂ ಆತ್ಮನಿರ್ಭರತೆಯನ್ನು ಸಾಧಿಸಲು ಸ್ವದೇಶಿ ವಸ್ತುಗಳ ಬಳಕೆಗೆ ಹೆಚ್ಚು ಒತ್ತು ನೀಡಬೇಕೆಂದು ಅವರು ಸಲಹೆ ನೀಡಿದರು.
ಪ್ರಧಾನಿಯವರ ಈ ಹಠಾತ್ ಹೇಳಿಕೆಯಿಂದಾಗಿ ಹಬ್ಬ ಹಾಗೂ ಮದುವೆ ಸೀಸನ್‌ಗಾಗಿ ಚಿನ್ನ ಖರೀದಿಸಲು ಕಾಯುತ್ತಿದ್ದ ಮಧ್ಯಮ ವರ್ಗದ ಜನತೆ ಈಗ ದ್ವಂದ್ವಕ್ಕೆ ಸಿಲುಕಿದ್ದಾರೆ. ಒಂದೆಡೆ ದರ ಕುಸಿತದಿಂದಾಗಿ ಆಭರಣ ಕೊಳ್ಳಲು ಇದು ಸುವರ್ಣಾವಕಾಶವಾಗಿ, ಮತ್ತೊಂದೆಡೆ ದೇಶದ ಆರ್ಥಿಕ ಹಿತದೃಷ್ಟಿಯಿಂದ ಪ್ರಧಾನಿ ನೀಡಿರುವ ಕರೆ ಜನರಲ್ಲಿ ಗೊಂದಲ ಮೂಡಿಸಿದೆ. ಬೆಲೆ ಇಳಿದಾಗ ಹೂಡಿಕೆ ಮಾಡಬೇಕೋ ಅಥವಾ ಪ್ರಧಾನಿ ಹೇಳಿದಂತೆ ಸುಮ್ಮನಿರಬೇಕೋ ಎಂಬ ಚರ್ಚೆಗಳು ಈಗ ಸಾರ್ವಜನಿಕ ವಲಯದಲ್ಲಿ ತೀವ್ರವಾಗಿ ಆರಂಭಿಸಿವೆ.
Topics
ಸಂಬಂಧಿತ ಸುದ್ದಿಗಳು
india
ತಮಿಳುನಾಡಿನಲ್ಲಿ ಬೆಚ್ಚಿಬೀಳಿಸೋ ಘಟನೆ : ಶಿಕ್ಷಕಿಯ ಸಮಯಪ್ರಜ್ಞೆಯಿಂದ ಕೂದಲೆಳೆ ಅಂತರದಲ್ಲಿ ಬದುಕುಳಿದ 50ಕ್ಕೂ ಹೆಚ್ಚು ಮುಗ್ಧ ಮಕ್ಕಳು!
india
ಅಡುಗೆ ಮಾಡದ ಹೆಂಡತಿಯನ್ನು ಕೊಲೆಗೈದ ಪತಿ!
india
ಪೆಸಿಫಿಕ್ ಮಹಾಸಾಗರದಲ್ಲಿ ತಾಪಮಾನ ಏರಿಕೆ: ಭಾರತದಲ್ಲಿ ತಗ್ಗಲಿದೆ ಚಳಿಯ ಪ್ರಮಾಣ, ಕೃಷಿ ವಲಯಕ್ಕೆ ಭಾರಿ ಹೊಡೆತ
india

